ಗೋವು ಪೂಜೆ ಸಂಭ್ರಮ..!
– ಮಲೆನಾಡಿನ ಮನೆ ಮನೆಯಲ್ಲಿ ಗೋ ಪೂಜೆ
– ಕರಾವಳಿಯಲ್ಲಿ ಆಚರಣೆ: ಗೋವುಗಳಿಗೆ ಹಬ್ಬ
– ಕೃಷಿ ಸಲಕರಣೆ, ದೇವರು, ತುಳಸಿಗೆ ವಿಶೇಷ ಪೂಜೆ
NAMMUR EXPRESS NEWS
ಮಲೆನಾಡು ಹಾಗೂ ಕರಾವಳಿಯಲ್ಲಿ ಗೋ ಪೂಜೆ ಸಂಭ್ರಮ ಮನೆ ಮಾಡಿದೆ. ಗೋವುಗಳ ಪೂಜೆಯೇ ದೀಪಾವಳಿ ವಿಶೇಷ. ದನಕರುಗಳಿಗೆ ಮೈ ತೊಳಿಸಿ ಕೆಂಪು ಹಾಗೂ ಬಿಳಿ ಬಣ್ಣ ಮಿಶ್ರಿತ ಕುಂಕುಮ ಹಾಗೂ ಸುಣ್ಣದ ಹಂಡುಂಡ ಮಾಡಿ ದನಕರುಗಳ ಮೈಗೆ ಹಚ್ಚಿ ಕುಡಿಯಲು ಅರಿಶಿನ ಮಿಶ್ರಣ ಮಾಡಿ ಗಂಜಿ ಕೊಟ್ಟು ಚಪ್ಪೆ ದೋಸೆಯನ್ನು ತಿನ್ನಲು ನೀಡುತ್ತಾರೆ. ಗೋಮಾತೆಯನ್ನು ದೇವರಂತೆ ಕಂಡು ಹೂವಿನ ಹಾರ, ಉಗಣೆಕಾಯಿ ಮಾಲೆ, ಪಂಚೆ ತನೆ, ಹಿಂಗಾರ, ಗೋಟ್ ಅಡಿಕೆ, ಬಾಳೆಹಣ್ಣು, ಉತ್ರಾಣಿ ಕುಡಿ, ವಿಳ್ಯದೆಲೆ, ಚಪ್ಪೆ ದೋಸೆ, ಯಾಲಕ್ಕಿ ಕರೆ, ಚಂಡು ಹೂವು ಬಳಸಿ ಒಂದು ಮಾಲೆಯನ್ನು ಮಾಡಿ ಗೋವುಗಳಿಗೆ ಕಟ್ಟಿ ಪೂಜೆ ಮಾಡುವುದೇ ಮಲೆನಾಡಿನ ಸಾಂಪ್ರದಾಯ ಪೂಜೆ ಮಾಡಿದ ನಂತರ ಎಲ್ಲರ ಮನೆಯ ದನಗಳನ್ನು ಓಡಿಸುವುದು ಒಂದು ವಿಶೇಷವಾಗಿದೆ.
[embedyt] https://www.youtube.com/watch?v=RLdaA86oaZg%5B/embedyt%5D
ಕೃಷಿ ಸಲಕರಣೆ, ವಾಹನ ಪೂಜೆ
ದೀಪಾವಳಿ, ಗೋ ಪೂಜೆ ದಿನ ಕೃಷಿ ಸಲಕರಣೆ ಮತ್ತು ವಾಹನ, ತುಳಸಿ, ಕೊಟ್ಟಿಗೆಗೆ ಪೂಜೆ ಮಾಡಲಾಗುತ್ತಿದೆ. ಎರಡು ದಿನವೂ ಹಬ್ಬದ ಆಚರಣೆ ಇದೆ