Categories
ತೀರ್ಥಹಳ್ಳಿ

ಬೆಳಕಿನ ಹಬ್ಬಕ್ಕೆ ಮಳೆ ಅಡ್ಡಿ ಸಾಧ್ಯತೆ..!?

ಬೆಳಕಿನ ಹಬ್ಬಕ್ಕೆ ಮಳೆ ಅಡ್ಡಿ ಸಾಧ್ಯತೆ..!?
– ಬೆಳಗ್ಗೆಯಿಂದಲೇ ಭಾರೀ ಗಾಳಿ: ತಂಪು ವಾತಾವರಣ
– ಮನೆ ಮನೆಯಲ್ಲೂ ದೀಪಾವಳಿ ಹಬ್ಬದ ಜೋಷ್

NAMMUR EXPRESS NEWS
ತೀರ್ಥಹಳ್ಳಿ: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮೂಡಿದ್ದು, ಜನರು ಹಿಂದೂ ಸಂಪ್ರದಾಯದ ಪ್ರಸಿದ್ಧ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಈ ನಡುವೆ ಸೋಮವಾರ ಬೆಳಗ್ಗೆಯಿಂದ ಭಾರೀ ಗಾಳಿ ಬೀಸುತ್ತಿದ್ದು ಇದೀಗ ಬೆಳಕಿನ ಹಬ್ಬಕ್ಕೆ ಮಳೆ ಅಡ್ಡಿ ಆತಂಕ ಎದುರಾಗಿದೆ. ದೀಪಗಳ ಹಬ್ಬ, ಬೆಳಕಿನ ಹಬ್ಬ ದೀಪಾವಳಿ ನಿಜಕ್ಕೂ ದೇಶದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಪ್ರತಿ ವರ್ಷ ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಮೃದ್ಧಿ ಮತ್ತು ಸಂಪತ್ತನ್ನು ಸ್ವಾಗತಿಸಲು ಜನರು ತಮ್ಮ ಮನೆಗಳನ್ನು ಹೂವುಗಳು, ದೀಪಗಳು ಮತ್ತು ಆಕಾಶಬುಟ್ಟಿಗಳಿಂದ ಅಲಂಕರಿಸಿದ್ದಾರೆ. ಪ್ರವೇಶದ್ವಾರದಲ್ಲಿ ವರ್ಣರಂಜಿತ ದೊಡ್ಡದಾದ ರಂಗೋಲಿಗಳನ್ನು ಹಾಕುವುದು ಹಾಗೂ ಮನೆಯ ಮುಂದೆ ಆಕರ್ಷಕ ಪಟಾಕಿಗಳನ್ನು ಹೊಡೆಯುವುದು ಈ ಹಬ್ಬದ ಇನ್ನೊಂದು ಮಹತ್ವದ ಭಾಗವಾಗಿದೆ. ಆದರೆ ಇದೀಗ ಹಬ್ಬಕ್ಕೆ ಮಳೆ ಅಡ್ಡಿ ಆಗುವ ಸಾಧ್ಯತೆ ಎದುರಾಗಿದೆ.

ಮಳೆ ಬಂದಲ್ಲಿ ಮನೆಯ ಮುಂದೆ ರಂಗೋಲಿ ಹಾಕುವುದು, ಪಟಾಕಿ ಹೊಡೆಯುವುದು ಎಲ್ಲಾ ಅಷ್ಟೆಲ್ಲ ಚೆನ್ನಾಗಿ ನಡೆಯುವುದಿಲ್ಲ ಎಂದು ಜನರು ಚಿಂತೆಗೀಡಾಗಿದ್ದಾರೆ. ಎಲ್ಲಾ ಕಡೆ ಪಟಾಕಿ ಮಳಿಗೆಗಳಲ್ಲಿ ಜನ ಪಟಾಕಿಗಳನ್ನು ಖರೀದಿಸಿ ಸಂಭ್ರಮಿಸುತ್ತಿದ್ದಾರೆ. ಇನ್ನು ಮಹಿಳೆಯರು ಅಲಂಕಾರಿಕ ವಸ್ತು, ಬಟ್ಟೆ, ಆಭರಣ ಸೇರಿದಂತೆ ವಿಧವಿಧದ ವಸ್ತುಗಳನ್ನು ಖರೀದಿಸಿ ಸಂಭ್ರಮ ಪಡುತ್ತಿದ್ದಾರೆ.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.