Categories
ಮಲ್ನಾಡ್

ಮಲೆನಾಡಲ್ಲಿ ಅಬ್ಬರದ ಮಳೆ: ಎಲ್ಲೆಡೆ ಅನಾಹುತ.. ಆಕ್ಸಿಡೆಂಟ್..!

ಮಲೆನಾಡಲ್ಲಿ ಅಬ್ಬರದ ಮಳೆ: ಎಲ್ಲೆಡೆ ಅನಾಹುತ.. ಆಕ್ಸಿಡೆಂಟ್..!
– ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವೆಡೆ ರಸ್ತೆ ಸಂಪರ್ಕ ಕಡಿತ
– ಮಳೆಗೆ ಮರ ಬಿದ್ದು ಹಲವೆಡೆ ಅನಾಹುತ
– ತುಂಗಾ, ಭದ್ರಾ ಸೇರಿ ನದಿಗಳಲ್ಲಿ ಪ್ರವಾಹ ಭೀತಿ!
– ಹೀಗೆ ಮಳೆ ಬಂದ್ರೆ ಅಡಿಕೆ ಕೊಳೆ ಹೆಚ್ಚಳ..!

NAMMUR EXPRESS NEWS
ಶಿವಮೊಗ್ಗ / ಚಿಕ್ಕಮಗಳೂರು: ಮಲೆನಾಡಲ್ಲಿ ಕಳೆದ ಎರಡು ವಾರದಿಂದ ಅಬ್ಬರದ ಮಳೆ ಎಲ್ಲೆಡೆ ಆಗುತ್ತಿದೆ. ಮಳೆ ಕಾರಣ ಅನಾಹುತ.. ಆಕ್ಸಿಡೆಂಟ್..ಅಸ್ತಿ ಮುಳುಗಡೆ ಆಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಳೆಗೆ ಮರ ಬಿದ್ದು ಹಲವೆಡೆ ಅನಾಹುತ ಸಂಭವಿಸಿದೆ. ತುಂಗಾ, ಭದ್ರಾ, ಶರಾವತಿ, ಮಾಲತಿ ಸೇರಿ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗೆ ಮಳೆ ಬಂದ್ರೆ ಅಡಿಕೆ ಕೊಳೆ ಹೆಚ್ಚಳ ಆಗಿ ರೈತರ ಬದುಕು ಅಧೋಗತಿ ತಲುಪಲಿದೆ.
ಕೊಪ್ಪದ ಜಯಪುರದಲ್ಲಿ, ಗೆದ್ದೇಹಳ್ಳ, ಶಿವಪುರ, ಕುದುರೆಗುಂಡಿ ಮುಡುಬದಲ್ಲಿ ಮರ ಬಿದ್ದಿದೆ. ಶೃಂಗೇರಿ ಕೆರೆ ಕಟ್ಟೆಯಲ್ಲಿ ಧರೆ ಕುಸಿತವಾಗಿದೆ. ತೀರ್ಥಹಳ್ಳಿ, ಶೃಂಗೇರಿ, ಸಾಗರ, ಹೊಸನಗರ ಭಾಗದಲ್ಲಿ ಭಾರಿ ಮಳೆ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ. ಗಾಳಿಗೆ ಮಳೆಗೆ ಶೃಂಗೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಹಲವೆಡೆ ಮರ ಬಿದ್ದಿವೆ.

ತುಂಬಿ ಹರಿಯುವ ನದಿಗಳು ಎಚ್ಚರ..!

ಮಲೆನಾಡಿನಲ್ಲಿ ಹರಿಯುವ ನದಿಗಳು ಭಾರಿ ಮಳೆ ಕಾರಣ ತುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಶರಾವತಿ, ಮಾಲತಿ ಸೇರಿ ನದಿ ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಈ ಬಗ್ಗೆ ಎಚ್ಚರ ವಹಿಸಲು ಸ್ಥಳೀಯ ಆಡಳಿತ ಮನವಿ ಮಾಡಿದೆ.

ಹೀಗೆ ಮಳೆ ಬಂದ್ರೆ ಅಡಿಕೆ ಕೊಳೆ ಹೆಚ್ಚಳ..!

ಮಳೆ ಕಾರಣ ಮಲೆನಾಡಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗದ ಭೀತಿ ಎದುರಾಗಿದೆ. ಕಳೆದ ವರ್ಷ ಕೂಡ ಕೊಳೆ ರೋಗ ಹಾಗೂ ಎಲೆ ಚುಕ್ಕಿ ರೋಗದ ಕಾರಣ ಅರ್ಧಕರ್ಧ ಫಸಲು ಕಡಿಮೆ ಆಗಿತ್ತು. ಈ ವರ್ಷ ಅದೇ ಆತಂಕ ಎದುರಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.