ತೀರ್ಥಹಳ್ಳಿಯಲ್ಲಿ ಭಾರಿ ಮಳೆ: ಕೈಕೊಟ್ಟ ಬೆಳೆ!
– ರೈತ ಸಂಘದಿಂದ ಸೆ. 19ರಂದು ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ
– ಒತ್ತುವರಿ ತೆರವು, ಕಾಳಿಂಗ ಹಾವು ಬಿಡುವ ಕೆಲಸ ವಿರುದ್ಧ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: 2025ರಲ್ಲಿ ಮುಂಗಾರು ಪೂರ್ವ ಮಳೆ ಮಾರ್ಚ್ ತಿಂಗಳಿನಿಂದ ಮೇವರೆಗೆ ಸಾಕಷ್ಟು ಬಿದ್ದು, ಮೇನಲ್ಲಿಯೇ ಮಾನ್ಸೂನ್ ಮಳೆ ಆರಂಭಗೊಂಡು ಸೆಪ್ಟೆಂಬರಿನಲ್ಲೂ ಮುಂದುವರಿದಿದೆ. ಏಳೆಂಟು ತಿಂಗಳಿನ ದೀರ್ಘಾವಧಿ ಮಳೆಯಿಂದ ಮಲೆನಾಡು ಸೇರಿ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲ ಬೆಳೆಗಳಿಗೂ ವಿಪರೀತ ಹಾನಿಯಾಗಿದೆ.
ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಹಸೀಲ್ದಾರ್ ಮೂಲಕ ರವಾನಿಸಿ ಪರಿಹಾರ ಹಾಗೂ ವಿಶೇಷ ಸೌಲಭ್ಯ ನೀಡಲು ಒತ್ತಾಯದ ಜತೆಗೆ ಒತ್ತುವರಿ ತೆರವು ವಿರುದ್ಧ ಮತ್ತು ಊರು ತುಂಬಾ ಕಾಳಿಂಗನ ಹಾವು ಬಿಡುವ ಆಗುಂಬೆಯ ರೀಸರ್ಚ್ ಸೆಂಟರ್ ಗಳನ್ನು ಮುಚ್ಚಿಸುವಂತೆ ಇನ್ನೊಂದು ಪತ್ರವನ್ನೂ ರವಾನಿಸಲು ನಿರ್ಧಾರ ಮಾಡಲಾಗಿದೆ.
19-9-2025 ಶುಕ್ರವಾರ ಬೆಳಿಗ್ಗೆ 10.30 ಕ್ಕೆ ತೀರ್ಥಹಳ್ಳಿ ತಾಲ್ಲೂಕು ಕಛೇರಿ ಮುಂದೆ ಈ ಸಭೆ ಇರಲಿದ್ದು, ಸರ್ವರನ್ನು ರೈತ ಸಂಘದ ಅಧ್ಯಕ್ಷರಾದ
ಕೋಡ್ಲು ವೆಂಕಟೇಶ್, ಪ್ರಧಾನ ಕಾರ್ಯದರ್ಶಿ
ಹೊರಬೈಲು ರಾಮಕೃಷ್ಣ ಮನವಿ ಮಾಡಿದ್ದಾರೆ.
