ತೀರ್ಥಹಳ್ಳಿ ಬಾಳೆಬೈಲಿನಲ್ಲಿ ಆಕ್ರಮ ಗೋಸಾಗಾಟ…!
* ರಾತ್ರಿ ವೇಳೆ ಪೋಲಿಸ್ ಠಾಣೆ ಎದುರು ಧರಣಿಗೆ ಕೂತ ಯುವಕರು
* ಮಲೆನಾಡಲ್ಲಿ ಹಬ್ಬಿದ ಅಕ್ರಮ ಗೋ ಸಾಗಣೆ ದಂಧೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಬಾಳೆಬೈಲು ಸಮೀಪ ಅಕ್ಟೋಬರ್ 23 ರಂದು ರಾತ್ರಿ ಸುಮಾರು 11:30 ಸಮಯದಲ್ಲಿ ಅಕ್ರಮ ಗೋಸಾಗಾಟದ ಕೃತ್ಯಗಳಲ್ಲಿ ಹಿಂದೆ ಹಲವಾರು ಬಾರಿ ಸಿಕ್ಕಿಬಿದ್ದಿದ್ದ ಮಾಳೂರು ಶರತ್ ಎಂಬ ವ್ಯಕ್ತಿ ಇದೀಗ ಮತ್ತೆ ಹಳೆಯ ದಂಧೆಗೆ ಕೈ ಹಾಕಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೊನ್ನೆ ಮೊನ್ನೆ ತಾನೆ ಅಕ್ರಮ ಗೋಸಾಗಾಟ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಈತನ ವಿರುದ್ಧ ಈಗ ಮತ್ತೆ ಅಕ್ರಮ ಗೋ ಸಾಗಾಟ ಪ್ರಕರಣ ದಾಖಲಾಗಿದೆ.
ಪೊಲೀಸರು ಮತ್ತು ಗೋ ರಕ್ಷಕರು ಈತನ ಮೊಬೈಲ್ ಪರಿಶೀಲನೆ ವೇಳೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿದೆ, ಗೋ ರಕ್ಷಕರ ಹತ್ಯೆ ಹುನ್ನಾರ, ಆಂತರಿಕ ಸಂಚುಗಳ ಶಂಕೆ ಮತ್ತಷ್ಟು ಗಂಭೀರವಾಗಿದೆ.ಈತನ ಮೊಬೈಲ್ನಲ್ಲಿ ದೊರೆತ ಫೋಟೋಗಳು ಹಾಗೂ ಸಂವಹನ ದಾಖಲೆಗಳು, ಸಂಶಯಾಸ್ಪದ ಸಂಪರ್ಕವನ್ನು ತೋರಿಸುತ್ತಿವೆ. ಜನಪ್ರತಿನಿಧಿಗಳೂ, ಸಾಮಾಜಿಕ ಮುಖಂಡರೂ ಈ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.
ಗೋಸಾಗಾಟದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆ ಕೇವಲ ಆರ್ಥಿಕ ಲಾಭಕ್ಕಾಗಿ ಅಲ್ಲ, ರಾಜಕೀಯ ಲಾಭಕ್ಕೂ ಪೂರಕವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೊಲೀಸರು ಈತನಿಂದ ವಶಪಡಿಸಿಕೊಂಡ ಮೊಬೈಲ್ ಡೇಟಾ, ಗೋಸಾಗಾಟದ ಹಿಂದಿರುವ ‘ಮಾಸ್ಟರ್ ಮೈಂಡ್’ ಹುಡುಕಾಟ ತೀವ್ರಗೊಂಡಿದ್ದು, ಹಲವು ಅನುಮಾನಿತರು ಈಗ ಪೊಲೀಸರ ಕಣ್ಣಿನ ನಂಟಿನಲ್ಲಿ ಇದ್ದಾರೆ.ಹಿಂದೆ ಕಳ್ಳತನ ಪ್ರಕರಣದಲ್ಲೂ ಇದೇ ವ್ಯಕ್ತಿ ಸಿಕ್ಕಿಬಿದ್ದಿದ್ದ. ಈಗ ಮತ್ತೆ ಇದೇ ರೀತಿಯ ಕೃತ್ಯಕ್ಕೆ ಕೈ ಹಾಕಿರುವುದು ಆತ ಏಕಾಂಗಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುವುದು ತಿಳಿದು ಬರುತ್ತಿದೆ.
ಪೊಲೀಸ್ ಇಲಾಖೆಯು ಇವನನ್ನು ಮತ್ತೆ ಎರಡೇ ದಿನಕ್ಕೆ ನಿರಪರಾಧಿ ಎಂದು ಘೋಷಣೆ ಮಾಡಿ ಹೊರಬಿಡುತ್ತಾರೆ ಎಂಬ ನಿರಾಸೆಯನ್ನು ಹೊತ್ತ ಗೋ ಸಂರಕ್ಷಕ ಯುವಕರು ತೀರ್ಥಹಳ್ಳಿ ಪೊಲೀಸ್ ಠಾಣೆ ಎದುರು ರಾತ್ರಿ ಧರಣಿಗೆ ಕುಳಿತಿದ್ದರು. ನಂತರ ಪಿಎಸ್ಐ ಅವರು ಯುವಕರನ್ನು ಅವರ ಪ್ರತಿಭಟನೆಯನ್ನ ಶಾಂತ ಗೊಳಿಸಿ ಅಶೋಕ್ ಐಲ್ಯಾಂಡ್ ವಾಹನವನ್ನು ಮತ್ತು ಗೋ ಕಳ್ಳನನ್ನು ಕಷ್ಟಡಿಗೆ ತೆಗೆದುಕೊಂಡು ಎಫ್ಐಆರ್ ದಾಖಲಿಸಿದ್ದಾರೆ.
ಸ್ಥಳೀಯರು ಹೇಳೋದೇನು..?
ಬಿಜೆಪಿಯವರು ಮೊನ್ನೆ ಮೊನ್ನೆ ಅಷ್ಟೇ ಗೋ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಘೋಷಣೆ ಕೂಗಿ ಪ್ರತಿಭಟನೆ ಮಾಡಿದ ಹೆಜ್ಜೆಯ ಗುರುತುಗಳೇ ಇನ್ನು ಅಳಿಸಿಲ್ಲ ಇಂತಹ ಸ್ಥಿತಿಯಲ್ಲಿ ಮತ್ತೆ ಗೋ ಅಕ್ರಮ ಮಾರಾಟ ಮುನ್ನೆಲೆಗೆ ಬರುತ್ತಿರುವುದು ತೀರಾ ಅಸಹಜ ಪ್ರಕ್ರಿಯೆಯಾಗಿದೆ. ಸ್ಥಳೀಯರು ಪೊಲೀಸರ ಕ್ರಮವನ್ನು ಸ್ವಾಗತಿಸಿ, ಈಗ ಮತ್ತೆ ಸಿಕ್ಕಿಬಿದ್ದ ವ್ಯಕ್ತಿಗೆ ಹಿಂದಿನ ಬಾರಿ ಕಾನೂನು ತೀವ್ರ ಶಿಕ್ಷೆ ನೀಡದಿರುವುದೇ ಈಗಿನ ಪುನರಾವರ್ತನೆಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಂತಹವರು ಕೇವಲ ಕಳ್ಳರಲ್ಲ, ಸಮಾಜದ ನೈತಿಕತೆಯ ಕಳ್ಳರು. ಕಠಿಣ ಕ್ರಮದಷ್ಟೇ ಈ ರೀತಿ ಅಕ್ರಮ ದಂಧೆಗಳನ್ನು ತಡೆಯಬಹುದು ಎಂದು ಹಿರಿಯ ನಾಗರಿಕರೊಬ್ಬರು ವಿಷಾದಿಸಿದ್ದಾರೆ.ಒಮ್ಮೆ ಸಿಕ್ಕಿಬಿದ್ದರೂ, ಮತ್ತೆ ಹಳೆಯ ದಂಧೆಗೆ ಕೈ ಹಾಕಿದ ವ್ಯಕ್ತಿಯ ಈ ಕೃತ್ಯ ಅಕ್ರಮ ಗೋಸಾಗಾಟದ ಆಳವಾದ ಜಾಲವನ್ನು ಬಹಿರಂಗಪಡಿಸಿದೆ.
