Categories
ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ಟಾಪ್ 3 ನ್ಯೂಸ್ ತೀರ್ಥಹಳ್ಳಿ

ತೀರ್ಥಹಳ್ಳಿ: ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ..!!
– ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಕಾರು ಅಪಘಾತ!
– ತೀರ್ಥಹಳ್ಳಿ: ದಲಿತ ಹುಡುಗನ ಮೇಲೆ ಹಲ್ಲೆ, ಪಟಾಕಿ ಮಳಿಗೆಗೆ ಬೆಂಕಿ ಇಡುವುದಾಗಿ ಬೆದರಿಕೆ!

NAMMUR EXPRESS NEWS
ತೀರ್ಥಹಳ್ಳಿ : ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ತೀರ್ಥಹಳ್ಳಿ ಕೊಪ್ಪ ಮಾರ್ಗ ಮಧ್ಯೆಯ ಕುಂಬಾರದಡಿಗೆ ಬಳಿ ನಡೆದಿದೆ. ತೀರ್ಥಹಳ್ಳಿಯ ಕುರುವಳ್ಳಿ ಸಮೀಪದ ಕುಂಬಾರದಡಿಗೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೊಪ್ಪ ಭಾಗದಿಂದ ತೀರ್ಥಹಳ್ಳಿಗೆ ಬರುವಾಗ ಈ ಅವಘಡ ಸಂಭವಿಸಿದೆ. ವಿದ್ಯುತ್ ಕಂಬ ಮುರಿದು ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದ್ದು ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ..

– ತೀರ್ಥಹಳ್ಳಿ : ಮೇಗರವಳ್ಳಿ ಬಳಿ ಕಾರು ಅಪಘಾತ!

ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿ ತಿರುವಿನಲ್ಲಿ ಕಾರೊಂದು ಅಪಘಾತಕ್ಕಿಡಾಗಿದೆ. ಶಿವಮೊಗ್ಗದಿಂದ ಮಂಗಳೂರು ಮಾರ್ಗವಾಗಿ ಚಲಿಸುತಿದ್ದ ಕಾರು ಮೇಗರವಳ್ಳಿ ತಿರುವಿನಲ್ಲಿ ಚಾಲಕನ ಹಿಡಿತಕ್ಕೆ ಸಿಗದೇ ಪಲ್ಟಿಯಾಗಿದ್ದು ನಾಲ್ಕು ಚಕ್ರ ಮೇಲಾಗಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂ ಆಗಿದೆ ಈ ಘಟನೆಯಲ್ಲಿ ಕಾರಿನಲ್ಲಿದ್ದವರು ಉಡುಪಿ ಮೂಲದವರಾಗಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆ. ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

– ತೀರ್ಥಹಳ್ಳಿ: ದಲಿತ ಹುಡುಗನ ಮೇಲೆ ಹಲ್ಲೆ, ಪಟಾಕಿ ಮಳಿಗೆಗೆ ಬೆಂಕಿ ಇಡುವುದಾಗಿ ಬೆದರಿಕೆ!

ತೀರ್ಥಹಳ್ಳಿ : ತಾಲೂಕಿನ ಸಾರ್ವಜನಿಕ ಕ್ರೀಡಾಂಗಣದಲ್ಲಿ ಪಟಾಕಿ ಮಳಿಗೆ ಇಟ್ಟುಕೊಂಡಿದ್ದ ವ್ಯಾಪಾರಿಗಳು ಹಾಗೂ ಕೆಲಸಕ್ಕಿರುವ ದಲಿತ ಹುಡುಗನ ಮೇಲೆ ಕೆಲವು ರಾಜಕೀಯ ಮುಖಂಡ ಜೊತೆಗೆ ಅವರ ತಂಡ ಬೈಕಿನಲ್ಲಿ ಬಂದು ಹಲ್ಲೆ ಮಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಟಾಕಿ ಮಳಿಗೆ ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದು ಬೆಳಕಿಗೆ ಬಂದಿದೆ. ಇನ್ನು ಇಬ್ಬರಿಗೆ ಮೂರ್ನಾಲ್ಕು ಜನರಿಂದ ಹಲ್ಲೆ ಮಾಡಿದ್ದ ಪರಿಣಾಮ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅವರನ್ನು ತಡೆದಿದ್ದಲ್ಲದೆ ಪೋಷಕರಿಗೂ ಬೆದರಿಕೆ ನೀಡಿದ್ದು, ಈ ಸಂಬಂಧ ಗಾಯಳುಗಳು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಯಲ್ಲಿ 50ಗ್ರಾಂ ಚಿನ್ನದ ಚೈನ್ ಹಾಗೂ 1 ಲಕ್ಷ ರು ನಗದು ಕಳೆದಿದ್ದು ಸದ್ಯ ಪೊಲೀಸ್ ವಿಚಾರಣೆ ನಂತರ ಪೂರ್ಣ ಮಾಹಿತಿ ಸಿಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.