Categories
ಮಲ್ನಾಡ್

ಮಳೆ ಬಂತು.. ಈಗ ಅಣಬೆ ಹುಡುಕಾಟ!

ಮಳೆ ಬಂತು.. ಈಗ ಅಣಬೆ ಹುಡುಕಾಟ!
– ಮಲೆನಾಡ ಅಣಬೆ ಅಂದ್ರೆ ಎಲ್ಲರಿಗೂ ಇಷ್ಟ
– ವಿಷಕಾರಿ ಅಣಬೆಗಳು ಇರುತ್ತವೆ ಹುಷಾರ್!

NAMMUR EXPRESS NEWS
ಮಲೆನಾಡು: ಮಳೆಗಾಲ ಶುರು ಆಯ್ತು, ಮಳೆ ಗುಡುಗು ಮಿಂಚು ಹೀಗೆ ದಿನ ಮಲೆನಾಡು ಮಳೆಗಾಲಕ್ಕೆ ಸಜ್ಜಾಗುತ್ತಿದೆ. ಮಳೆಗಾಲದ ಫೇವರಿಟ್ ಫುಡ್ ಅಂದ್ರೆ ಅದು ಅಣಬೆ. ಮಲೆನಾಡ ಅಣಬೆ ಎಲ್ಲರಿಗೂ ಅಚ್ಚುಮೆಚ್ಚು. ಅಣಬೆ ಏಳುವ ಜಾಗಗಳಲ್ಲಿ ಚುಳ್ ಅಣಬೆ, ಹೆಗ್ಗಲ್ ಅಣಬೆ, ಭೂಗಿ ಅಣಬೆ, ಅಕ್ಕಿ ಅಣಬೆ, ಹುಲ್ಲು ಅಣಬೆ, ಕಲ್ ಅಣಬೆ , ಮೊಟ್ಟೆ ಅಣಬೆ, ಹಗ್ಗಿನ್ ಅಣಬೆ ಇನ್ನೂ ಮುಂತಾದ ರೀತಿಯ ಅಣಬೆಗಳನ್ನು ಹುಡುಕುವುದು ಮಲೆನಾಡ ಜನರ ಆಸಕ್ತಿದಾಯಕ ಕೆಲಸ. ಮಳೆಗಾಲದಲ್ಲಿ ಹತ್ಮೀನ್ ಕಡಿಯದು, ಅಣಬೆ ಕೀಳದು, ಏಡಿ ಹಿಡಿಯದು, ಗಾಳ ಹಾಕದು ಬಲೆ ಬೀಸದು ಎಲ್ಲವೂ ಸಹ ಮಲೆನಾಡಿಗರ ವಿಶಿಷ್ಟ ಹವ್ಯಾಸಗಳು.

ಮಲೆನಾಡಿಗರ ಈ ಎಲ್ಲಾ ವಿಷಯಗಳಲ್ಲಿ ಅತೀವ ಅಭಿರುಚಿಯನ್ನು ಹೊಂದಿರುತ್ತಾರೆ. ದಿನ ಬೆಳಗಾದರೆ ಸಾಕು ಅಕ್ಕ ಪಕ್ಕದ ಮನೆಯವರ ಕಾಂಪಿಟೇಶನ್. ಎಲ್ಲೆಲ್ಲಿ ಯಾವ ಯಾವ ಅಣಬೆ ಎದ್ದಿರಬಹುದು, ಹೈಗನ್ ಮರದ ಕೆಳಗೆ, ಭೋಗಿ ಮರದ ಅಂಡಲ್ಲಿ, ಪ್ರತಿವರ್ಷ ಚುಳ್ ಅಣಬೆ ಏಳೋ ಜಾಗ, ಗದ್ದೆ ಅಂಚಲ್ಲಿ, ಗುಡ್ಡದಲ್ಲಿ ಎಲ್ಲಾ ಕಡೆ ಅಣಬೆ ಹುಡ್ಕೋದೆ ಸಂಭ್ರಮ.
ಅಣಬೆ ಪಲ್ಯ ಕಡಬು, ಹುಲ್ ಅಣಬೆ ಸಾರು, ಚುಲ್ ಅಣಬೆ ಸೂಸಿ ಉಪ್ಪು ಖಾರದಪುಡಿ ಹಾಕಿ ಬೇಯಿಸಿ ತಿಂದ್ರೆ ಆಹಾ ಮಲೆನಾಡಿನ ಸ್ವರ್ಗನೆ ಸವಿದ ಹಾಗೆ ಅನ್ನಿಸುತ್ತೆ. ಈಗಿನ ದಿನದಲ್ಲಿ ಮಾರ್ಕೆಟುಗಳಲ್ಲಿ ಎಷ್ಟೇ ವಿಧವಾದ ಮಶ್ರೂಮ್ ಅಣಬೆ ಸಿಕ್ಕಿದ್ರು ಸಹ, ಈ ಮಳೆಗಾಲದಲ್ಲಿ ಸಿಗೋ ನ್ಯಾಚುರಲ್ ಮಲ್ನಾಡ್ ಅಣಬೆ ಗಮ್ಮತ್ತೆ ಬೇರೆ..!

ವಿಷದ ಅಣಬೆ ಇವೆ ಹುಷಾರ್..!

ಕಾಡು ಹಾಗೂ ನಮ್ಮ ಪರಿಸರದಲ್ಲಿ ಅನೇಕ ಬಗೆಯ ಅಣಬೆಗಳು ಸಿಗುತ್ತವೆ. ಆದರೆ ಎಲ್ಲವೂ ತಿನ್ನಲು ಯೋಗ್ಯವಲ್ಲ. ಹಾಗಾಗಿ ಈ ಬಗ್ಗೆ ಎಚ್ಚರ ಇರಲಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.