Categories
ತೀರ್ಥಹಳ್ಳಿ

ತೀರ್ಥಹಳ್ಳಿ ಸಾಧಕ ವಿದ್ಯಾರ್ಥಿಗಳು!

ತೀರ್ಥಹಳ್ಳಿ ಸಾಧಕ ವಿದ್ಯಾರ್ಥಿಗಳು!
– ತುಂಗಾ ಕಾಲೇಜಿನ ಶ್ರಾವ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ
– ಪುಟ್ಬಾಲ್: ತೀರ್ಥಹಳ್ಳಿ ಹುಡುಗ ಹುಮೈದ್ ರಾಷ್ಟ್ರ ಮಟ್ಟಕ್ಕೆ

NAMMUR EXPRESS NEWS
ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಶ್ರಾವ್ಯ.ಬಿ.ಎನ್ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಈಗ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾಳೆ. 2023-24 ನೇ ಸಾಲಿನಲ್ಲಿ ಹ್ಯಾಂಡ್ ಬಾಲ್, ಸಪಕ್ ಟ್ರೈಕ್ ರೋ, ,ಸಾಫ್ಟ್ ಬಾಲ್ ಕ್ರೀಡೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ತಂಡದಿಂದ ರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಹ್ಯಾಂಡ್ ಬಾಲ್ ತಮಿಳುನಾಡು, ಸಪಕ್ ಟ್ರೈಕ್ ಕೇರಳ ಹಾಗೂ 04-06-2024 ರಿಂದ 08-06-2024 ರಂದು ಪಂಜಾಬಿನಲ್ಲಿ ನಡೆಯುತ್ತಿರುವ ಸಾಫ್ಟ್ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆಯೆ ತರಬೇತಿಯನ್ನು ನೀಡಿದ್ದ ಸುಜನ್ ಹಾಗೂ ಸಹಕಾರ ನೀಡಿದ ಸರ್ವರಿಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ಇವರು ಕುರುವಳ್ಳಿ ಶ್ರೀ ವಿಶ್ವವಿನಾಯಕ ವರ್ಕ್ ಶಾಪ್ ಮಾಲೀಕ ನಾರಾಯಣ ಆಚಾರ್ ಅವರ ದ್ವಿತೀಯ ಪುತ್ರಿ. ಸಾಧಕಿಗೆ ತುಂಗಾ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಿನ್ಸಿಪಾಲರಾದ ಕುಮಾರಸ್ವಾಮಿ, ಪಿಯು ಪ್ರಿನ್ಸಿಪಾಲ್ ಪ್ರಸನ್ನ, ಆಡಳಿತ ಮಂಡಳಿ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.

ತೀರ್ಥಹಳ್ಳಿ ಹುಡುಗ ಹುಮೈದ್ ರಾಷ್ಟ್ರ ಮಟ್ಟಕ್ಕೆ
– ಪುಟ್ಬಾಲ್ ಆಟದಲ್ಲಿ ತೀರ್ಥಹಳ್ಳಿಯ ಸೈoಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಸಾಧನೆ

ತೀರ್ಥಹಳ್ಳಿಯ ಸೈoಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಇಂದಿರಾನಗರ ತೀರ್ಥಹಳ್ಳಿ ಇಲ್ಲಿಯ 9 ನೇ ತರಗತಿಯ ವಿದ್ಯಾರ್ಥಿ ಹುಮೈದ್ ಮಂಗಳೂರಿನಲ್ಲಿ ನಡೆದ ಐ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ರಾಜ್ಯಕ್ಕೆ ಆಯ್ಕೆಗೊಂಡು, 15 ವರ್ಷದೊಳಗಿನ ರಾಷ್ಟ್ರ ಮಟ್ಟದ ಫುಟ್ಬಾಲ್ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿದಿಸಲಿದ್ದಾರೆ, ಇವರಿಗೆ ಶಾಲೆಯ ಮಖ್ಯ ಉಪಾಧ್ಯಾಯಿನಿ, ಶಿಕ್ಷಕ ವೃಂದ , ಶಾಲೆಯ ಆಡಳಿತ ಮಂಡಳಿ, ಪೋಷಕರು ಮತ್ತು ವಿದ್ಯಾರ್ಥಿ ವೃಂದ ಶುಭ ಹಾರೈಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.