Categories
ಬೆಂಗಳೂರು ಮಲ್ನಾಡ್

ಬೆಂಗಳೂರಲ್ಲಿ ಮಲೆನಾಡಿಗರ ಸಮಾಗಮ!

ಬೆಂಗಳೂರಲ್ಲಿ ಮಲೆನಾಡಿಗರ ಸಮಾಗಮ!
– ಮಲೆನಾಡು ಮಿತ್ರ ವೃಂದದಿಂದ ಕ್ರೀಡಾಕೂಟ
– ಕುಟುಂಬ ಸಮೇತ ಆಗಮಿಸಿದ ಮಲೆನಾಡಿಗರು
– ಸಂಜೆ ಸಮಾರೋಪ: ಗೆದ್ದವರಿಗೆ ಬಹುಮಾನ

NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿರುವ ಮಲೆನಾಡಿಗರ ಸಂಘಟನೆ ಮಲೆನಾಡು ಮಿತ್ರ ವೃಂದದಿಂದ ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮಗಳು ಈಗ ಬೆಂಗಳೂರಿನ ಜಾಲಹಳ್ಳಿ ಎಚ್ ಎಂ ಟಿ ಮೈದಾನದಲ್ಲಿ ಶುರುವಾಗಿದೆ. ಮಲೆನಾಡು ಮಿತ್ರವೃಂದ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು, ಮಾಜಿ ಅಧ್ಯಕ್ಷರಾದ ಸುಬ್ಬಯ್ಯ, ಅನಿಲ್ ಹೊಸಕೊಪ್ಪ, ವನಮಾಲಯ್ಯ ಇಳಿಮನೆ ಸೇರಿ ಎಲ್ಲಾ ಪದಾಧಿಕಾರಿಗಳು ಕುವೆಂಪು ಅವರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಪ್ರದೀಪ್ ವಾಲಿಬಾಲ್ ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಲೆನಾಡು ಭಾಗದ ಬೆಂಗಳೂರು ವಲಸಿಗರ ಹೆಮ್ಮೆಯ ಕಾರ್ಯಕ್ರಮ ಇದಾಗಿದೆ. ಸಂಜೆವರೆಗೂ ನಡೆಯಲಿದೆ.

ಕ್ರೀಡಾಕೂಟದಲ್ಲಿ ಮಲೆನಾಡಿಗರು ತಮ್ಮ ಮಕ್ಕಳು, ಕುಟುಂಬದೊಂದಿಗೆ ಒಂದು ದಿನ ಕಳೆಯಲಿದ್ದಾರೆ, ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಮಲೆನಾಡಿನ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಸರ್ವರನ್ನು ಆಹ್ವಾನಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.