Categories
ತೀರ್ಥಹಳ್ಳಿ

ಕುಂದಾದ್ರಿ ಜಾತ್ರೆ – ಬೆಟ್ಟದ ಮೇಲಿನ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನ

ಕುಂದಾದ್ರಿ ಜಾತ್ರೆ
– ಬೆಟ್ಟದ ಮೇಲಿನ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನ
– ಬೆಳಗಿನಿಂದಲೇ ಶುರುವಾದ ಪೂಜಾ ವಿಶೇಷಗಳು

NAMMUR EXPRESS NEWS
ತೀರ್ಥಹಳ್ಳಿ: ಮಕರ ಸಂಕ್ರಾತಿಯ ಪುಣ್ಯಕಾಲದಲ್ಲಿ, ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿ ಬೆಳಿಗ್ಗೆಯಿಂದಲೇ, ಕಲಿಕುಂಡ ಯಂತ್ರಾರಾಧನೆ, 11ಗಂಟೆಗೆ ಶ್ರೀ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ, ಶ್ರೀ ಪದ್ಮಾವತಿ ದೇವಿ ಅಮ್ಮನವರ ಷೋಡಶೋಪಚಾರ ಪೂಜೆ ಮತ್ತು ಆಚಾರ್ಯ ಶ್ರೀ ಕುಂದ ಕುಂದಾಚಾರ್ಯರ ಪಾದುಕಾ ಮಂದಿರದಲ್ಲಿ ವಿಶೇಷಪೂಜೆಗಳು ನಡೆದಿದ್ದು, ಮಧ್ಯಾಹ್ನ 12ರಿಂದ ಧಾರ್ಮಿಕ ಸಭೆ ಆರಂಭವಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು ಜಾತ್ರಾ ಮಹೋತ್ಸವ ಬರದಿಂದ ಸಾಗಿದೆ. ಸಂಜೆ ದೀಪೋತ್ಸವ ಕಾರ್ಯಕ್ರಮವೂ ಇರಲಿದೆ. ಹೊಂಬುಜ ಜೈನಮಠದ ಪರಮಪೂಜ್ಯ ಜಗದ್ಗುರುಗಳಾದ ಸ್ವಸ್ತಿಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.