Categories
ಮಲ್ನಾಡ್

ಮಲೆನಾಡ ರಾಜಕೀಯ ಮುತ್ಸದ್ದಿ ಹೆಚ್.ಟಿ ರಾಜೇಂದ್ರ ಇನ್ನಿಲ್ಲ!

ಮಲೆನಾಡ ರಾಜಕೀಯ ಮುತ್ಸದ್ದಿ ಹೆಚ್.ಟಿ ರಾಜೇಂದ್ರ ಇನ್ನಿಲ್ಲ!
* ಹೆಚ್‌ಡಿಡಿ ಕುಟುಂಬ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜೇಂದ್ರ
* ಅಗಲಿದ ನಾಯಕನಿಗೆ ಗಣ್ಯರ,ಬೆಂಬಲಿಗರ ಸಂತಾಪ
* ಎನ್. ಆರ್. ಪುರ ದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

NAMMMUR EXPRESS NEWS
ಎನ್.ಆರ್ ಪುರ: ಜೆಡಿಎಸ್ ಪಕ್ಷದ ಮುಖಂಡ ಮಡಬೂರು ಹೆಚ್.ಟಿ ರಾಜೇಂದ್ರ (72) ಹೃದಯಾಘಾತದಿಂದ ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಹೆಚ್.ಟಿ ರಾಜೇಂದ್ರ ಅವರು ಹೆಚ್.ಡಿ ದೇವೇಗೌಡ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ರಾಜೇಂದ್ರರವರ ದಿಢೀರ್ ಸಾವಿನ ಸುದ್ದಿ ಕೇಳಿ ಬೆಂಬಲಿಗರು ಆಘಾತಕ್ಕೆ ಒಳಗಾಗಿದ್ದಾರೆ. ಜೆಡಿಎಸ್​ ಮುಖಂಡನ ನಿಧನಕ್ಕೆ ಶಾಸಕ ಟಿ.ಡಿ ರಾಜೇಗೌಡ,ಮಾಜಿ ಶಾಸಕ ಡಿ.ಎನ್ ಜೀವರಾಜ್ ಸೇರಿದಂತೆ ಗಣ್ಯರು,ಬೆಂಬಲಿಗರು ಸಂತಾಪ ಸೂಚಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಸೇರಿ ಮಲೆನಾಡಲ್ಲಿ ಜೆಡಿಎಸ್ ಪಕ್ಷದ ಜತೆಗೆ ಜನಪರ ಚಳುವಳಿ ಕಟ್ಟುವಲ್ಲಿ ಇವರ ಪಾತ್ರ ಹಿರಿದು.

ಎಂ ಎಲ್ ಎ ಎಲೆಕ್ಷನ್ ನಿಂತಿದ್ದರು!

* ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜೇಂದ್ರ
ಜೆಡಿಎಸ್ ಪಕ್ಷದಿಂದ ಶಾಸಕ ಸ್ಥಾನದ ಅಭ್ಯರ್ಥಿಯಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಮನೆಯಲ್ಲಿದ್ದ ಜೆಡಿಎಸ್ ಮುಖಂಡ ರಾಜೇಂದ್ರ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ನೋವಿನಿಂದ ರಾಜೇಂದ್ರ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ದೇವೇಗೌಡ, ಕುಮಾರಸ್ವಾಮಿ ಸಂತಾಪ

* ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ,ಕುಮಾರಸ್ವಾಮಿ ಸಂತಾಪ
ರಾಜೇಂದ್ರ ಅವರ ಸಾವಿನ ಸುದ್ದಿ ಕೇಳಿ ಬೆಂಬಲಿಗರು ಆಘಾತಕ್ಕೆ ಒಳಗಾಗಿದ್ದಾರೆ. ನಾಯಕ ಮನೆ ಮುಂದೆ ಕಣ್ಣೀರು ಹಾಕಿದ್ದಾರೆ. ಇತ್ತ ಟ್ವೀಟ್​ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಆರೋಗ್ಯವಾಗಿದ್ದವರೇ ನಿಂತಲ್ಲೇ ಕುಸಿದು ಬೀಳ್ತಿದ್ದು, ಜನರಲ್ಲೂ ಕೂಡ ಆತಂಕ ಮನೆ ಮಾಡಿದೆ.

ಎನ್. ಆರ್. ಪುರ ದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

ಮೃತರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಸಾರ್ವಜನಿಕರಿಗೆ ಬೆಳಿಗ್ಗೆ 11.30 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವರ ಸ್ವಗೃಹ ಮಡಬೂರಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಂತರ ಎನ್.ಆರ್ ಪುರದಲ್ಲಿರುವ ಒಕ್ಕಲಿಗ ಸಂಘದ ಶ್ರೀ ಶಾರದಾ ವಿದ್ಯಾ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 3:30ರವರೆಗೆ ಸಾರ್ವಜನಿಕರ ಅಂತಿಮ ದರ್ಶನ ಪಡೆಯಬಹುದಾಗಿದೆ.ಸಂಜೆ 5 ಗಂಟೆಗೆ ಮಡಬೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.