Categories
ಮಲ್ನಾಡ್

ಮಲೆನಾಡಿನಲ್ಲಿ ವರ್ಷ ತೊಡಕು ಸಂಭ್ರಮ!

ಮಲೆನಾಡಿನಲ್ಲಿ ವರ್ಷ ತೊಡಕು ಸಂಭ್ರಮ!
– ದೀಪಾವಳಿ ಜತೆ ಜತೆಗೆ ಹಬ್ಬದ ಆಚರಣೆ
– ಭತ್ತದ ಪೈರು ಪೂಜೆ : ಮನೆ ಮನೆಯಲ್ಲಿ ಹಬ್ಬದ ವಾತಾವರಣ!

NAMMUR EXPRESS NEWS
ಮಲೆನಾಡು: ದೀಪಾವಳಿ ಹಬ್ಬ ಮುಗಿದ ನಂತರ ಹಬ್ಬವೇ ವರ್ಷ ತೊಡಕು, ವರ್ಷದ ತೊಡಕು ದಿನ ಮಲೆನಾಡಿನ ಪ್ರತಿಯೊಂದು ಮನೆಯಲ್ಲಿ ಹೆಚ್ಚು ಮಾಂಸದೂಟ ಮಾಡುತ್ತಾರೆ.ಹಾಗೂ ಮಧ್ಯಾಹ್ನ ಹಬ್ಬದಂತೆ ಸಿಹಿ ಊಟ ಕೂಡ ತಯಾರಿ ಮಾಡಿ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಮಲೆನಾಡಿಗರ ಸಂಪ್ರದಾಯದಂತೆ ಇಂದಿನ ದಿನ ದಿನ ನಾವು ಏನು ಒಳ್ಳೆಯ ಕೆಲಸ ಮಾಡುತ್ತೇವೋ ವರ್ಷವೆಲ್ಲ ಆಗುತ್ತದೆ ಎಂಬ ನಂಬಿಕೆ ಇದೆ. ಕಾಲ ಬದಲಾದಂತೆ ಹಳೇ ಸಂಪ್ರದಾಯಗಳಲ್ಲಿಯೂ ಬದಲಾವಣೆ ಆಗುತ್ತಿವೆ.

ದೀಪಾವಳಿ ಮಾರನೇ ದಿನದ ಹಬ್ಬದ ಸಂಭ್ರಮ!

ಎರಡು ದಿನಗಳ ಕಾಲ ಹಬ್ಬ ಮುಗಿದು ಮೂರನೇ ದಿನದತ್ತ ಹಬ್ಬದ ಆಚರಣೆ ಜೋರಾಗಿ ನಡೆಯುತ್ತಿದೆ. ಮೂರು ನಾಲ್ಕು ದಿನ ರಜೆ ಇರುವುದರಿಂದ ದೀಪಾವಳಿ ಯನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.ವಿವಿಧ ಊಟ ಸಿಹಿ ತಿಂಡಿ, ಬಗೆ ಬಗೆಯ ಆಹಾರವನ್ನು ಸವಿದಿದ್ದಾರೆ.ಮನೆ ಗೆ ದೀಪದ ಅಲಂಕಾರ ಮಾಡಿ ಸಂಭ್ರಮಿಸಿದ್ದಾರೆ. ಇಂದು ವರ್ಷ ತೊಡಕು ಆಗಿರುವುದರಿಂದ ಮಾಂಸಹಾರ ಅಡುಗೆ ಹೆಚ್ಚು ಮಾಡುತ್ತಾರೆ.

ಭತ್ತದ ಪೈರು ಪೂಜೆ: ಮನೆ ಮನೆಯಲ್ಲಿ ಹಬ್ಬದ ವಾತಾವರಣ!

ದೀಪಾವಳಿ ದಿನದಂದು ಭತ್ತದ ಪೈರು ಪೂಜೆ ಮಾಡುವುದು ಮಲೆನಾಡಿನ ವಾಡಿಕೆ ಆಗಿದೆ.ತಾವು ಬೆಳೆಸಿದ ಭತ್ತ ಗದ್ದೆಗೆ ದೀಪಾವಳಿ ಹಬ್ಬದ ಸಮಯದಲ್ಲಿ ಪೂಜೆ ಮಾಡುವ ಸಂಪ್ರದಾಯವೇ ಹಿಂದಿನ ಕಾಲದಿಂದಲೂ ಬಂದಿದೆ. ಒಂದು ವೇಳೆ ಗದ್ದೆ ಕೊಯಲು ಆದರೆ ಸಂಜೆ ವೇಳೆಯಲ್ಲಿ ಮನೆಯಲ್ಲಿ ಹೊಸ ಭತ್ತಕ್ಕೆ ಪೂಜೆ ಸಲ್ಲಿಸುತ್ತಾರೆ ಈ ಕಾರ್ಯಕ್ರಮ ಕೃಷಿಕರಿಗೆ ಹೆಚ್ಚು ಸಂಭ್ರಮ ಕೊಡುವ ದಿನವು ಆಗಿದೆ. ಈ ದೇವರ ಆರಾಧನೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಮಲೆನಾಡಿಗರ ಪ್ರತಿ ಮನೆ ಮನೆಯಲ್ಲಿ ಹಬ್ಬದ ವಾತಾವರಣ ನೋಡಬಹುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.