Categories
ತೀರ್ಥಹಳ್ಳಿ ಮಲ್ನಾಡ್

ಶಾಸಕರ ತವರಲ್ಲೇ ಪಕ್ಷದ ಅಸಮಾಧಾನ ಸ್ಫೋಟ!

ಶಾಸಕರ ತವರಲ್ಲೇ ಪಕ್ಷದ ಅಸಮಾಧಾನ ಸ್ಫೋಟ!
– ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ
– ಶಾಸಕರ ಮಾತಿಗೂ ಬೆಲೆ ಕೊಡದ ಗ್ರಾಮ ಪಂಚಾಯತ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯ ಹಾಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಆಗಿದೆ. ಈ ಮೂಲಕ ಶಾಸಕರ ಊರಲ್ಲೂ ರಾಜಕೀಯ ಅಸಮಾಧಾನ ಸ್ಫೋಟಗೊಂಡಿದೆ.
ತೀರ್ಥಹಳ್ಳಿ ತಾಲ್ಲೂಕು ಗುಡ್ಡೆಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಒಟ್ಟು 10 ಸದಸ್ಯರುಗಳಿದ್ದು, ಅಗಸಾಡಿ ಶಾಮಪ್ಪ ಅಧ್ಯಕ್ಷರಾಗಿರುತ್ತಾರೆ. ಇವರು ಗ್ರಾಮ ಪಂಚಾಯತಿ ಇತರೆ ಸದಸ್ಯರುಗಳಿಗೆ ಸ್ಪಂದಿಸದೆ, ಯಾವುದೇ ಕಾಮಗಾರಿಗಳನ್ನು ನಡೆಸಲು ಸಹಕರಿಸುತ್ತಿರುವುದಿಲ್ಲ. ಇದರಿಂದಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರಿಗೆ ತೊಂದರೆಯಾಗಿರುತ್ತದೆ. ಆದುದರಿಂದ ಸದರಿ ಗ್ರಾಮಪಂಚಾಯತಿಯ ಇತರೆ ಎಲ್ಲಾ ಸದಸ್ಯರುಗಳು ಅಧ್ಯಕ್ಷರನ್ನು ಬದಲಾವಣೆ ಮಾಡುವ ಒಮ್ಮತಕ್ಕೆ ಬಂದಿರುತ್ತೇವೆ. ಗುಡ್ಡೆಕೊಪ್ಪ ಗ್ರಾಮಪಂಚಾಯತಿಯ ಇತರೆ ಸದಸ್ಯರುಗಳು ಹಾಲಿ ಅಧ್ಯಕ್ಷರಾದ ಅಗಸಾಡಿ ಶಾಮಪ್ಪ ವಿರುದ್ಧ ಆವಿಶ್ವಾಸವನ್ನು ಈ ಮೂಲಕ ಮಂಡಿಸಿರುವ ಪತ್ರವನ್ನು ಉಪ ವಿಭಾಗ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

ಗ್ರಾಮ ಪಂಚಾಯತ್ ಮೊದಲ ಅವಧಿ ಅಧ್ಯಕ್ಷರಾಗಿ ರಾಘವೇಂದ್ರ ಪವಾರ್, ಎರಡನೇ ಅವಧಿಗೆ ಶಾಮಪ್ಪ ಆಗಿದ್ದರು. ಒಪ್ಪಂದದ ಪ್ರಕಾರ ಗುರುಮೂರ್ತಿ ಇವರಿಗೆ ಅಧಿಕಾರ ಬಿಡಬೇಕಿತ್ತು. ಆದರೆ ಅಧಿಕಾರ ಬಿಡದ ಕಾರಣ ಖುದ್ದು ಆರಗ ಜ್ಞಾನೇಂದ್ರ ಅವರೇ ಮಾತುಕತೆ ಮಾಡಿದ್ದರೂ ಕೇಳಿರಲಿಲ್ಲ. 15 ತಿಂಗಳ ತಡೆ ಇದ್ದಿದ್ದರಿಂದ ಇದೀಗ ಆವಿಶ್ವಾಸ ತರಲಾಗಿದೆ.

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.