ಮಲೆನಾಡು ಮಿತ್ರ ವೃಂದದ ಆಟಕ್ಕೆ ಜನವೋ ಜನ!
– ಒತ್ತಡ ಬಿಟ್ಟು ಕುಟುಂಬ ಸಮೇತ ಆಡಿದ ಮಲೆನಾಡಿಗರು
– 8 ಕಡುಬು ತಿಂದು ದಾಖಲೆ ಮಾಡಿದ 73ರ ಅಜ್ಜಿ!
– ನಟ ಮನೋರಂಜನ್ ಅವರಿಂದ ಕ್ಯಾಲೆಂಡರ್ ಬಿಡುಗಡೆ
NAMMUR EXPRESS NEWS
ಬೆಂಗಳೂರು: ಬೆಂಗಳೂರಿನಲ್ಲಿರುವ ಮಲೆನಾಡಿಗರ ಸಂಘಟನೆ ಮಲೆನಾಡು ಮಿತ್ರ ವೃಂದದಿಂದ ಕ್ರೀಡಾಕೂಟದಲ್ಲಿ ಭಾನುವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಜನರು ಭಾಗಿಯಾಗಿ ಸಂತಸ ಪಟ್ಟರು. ಬೆಂಗಳೂರಿನ ಜಾಲಹಳ್ಳಿ ಎಚ್ ಎಂ ಟಿ ಮೈದಾನದಲ್ಲಿ ನಡೆದ ಕ್ರೀಡಾಕೂಟವನ್ನು ಕುವೆಂಪು ಫೋಟೋಗೆ ನಮನ ಸಲ್ಲಿಸುವ ಮೂಲಕ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು ಉದ್ಘಾಟನೆ ಮಾಡಿದರು. ಬಳಿಕ ಎಲ್ಲಾ ಸ್ಪರ್ಧೆಗಳಲ್ಲಿ ಸಾವಿರಾರು ಮಂದಿ ಭಾಗಿಯಾದರು. ಇಡೀ ಕ್ರೀಡಾಕೂಟದಲ್ಲಿ 2500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿತ್ತು. ರವಿಚಂದ್ರನ್ ಪುತ್ರ ಖ್ಯಾತ ನಟ ಮನೋರಂಜನ್ ಈ ವರ್ಷದ ಮಲೆನಾಡು ಮಿತ್ರ ವೃಂದದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಎದ್ದು ಬಿದ್ದು ಆಟ ಆಡಿದ ಮಲೆನಾಡಿಗರು!
ಮಲೆನಾಡಿನ ಜನರನ್ನ ಒಂದೆಡೆ ಸೇರಿಸುವ ಪ್ರಯತ್ನದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳ ವಿವಿಧ ಸ್ಪರ್ಧೆ, ಹಗ್ಗ ಜಗ್ಗಾಟ, ಕಡುಬು ತಿನ್ನುವ ಸ್ಪರ್ಧೆ ಗಮನ ಸೆಳೆಯಿತು. ಮಲೆನಾಡು ಮೂಲದ ಬೆಂಗಳೂರಿನಲ್ಲಿರುವವರು ತಮ್ಮ ಮಕ್ಕಳು, ಕುಟುಂಬದೊಂದಿಗೆ ಒಂದು ದಿನ ಕಳೆದರು.
8 ಕಡುಬು ತಿಂದು ದಾಖಲೆ ಮಾಡಿದ 73ರ ಅಜ್ಜಿ!
ಪುರುಷರು ಹಾಗೂ ಮಹಿಳೆಯರಿಗೆ ವಿಶೇಷವಾಗಿ ಕಡುಬು ತಿನ್ನುವ ಸ್ಪರ್ಧೆ ಅಯೋಜನೆ ಮಾಡಲಾಗಿತ್ತು. ಇದರಲ್ಲಿ 73 ವರ್ಷದ ಅಜ್ಜಿ ಮೂಡಿಗೆರೆ ಸೀತಮ್ಮ 8 ಕಡುಬು ತಿಂದು ಗಮನ ಸೆಳೆದರು. ಪುರುಷರು ಕೂಡ ಕಡುಬು ತಿಂದು ಗಮನ ಸೆಳೆದರು. ಪತ್ನಿಗೆ ಮೇಕಪ್ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆ ನಡೆದವು. ಇನ್ನು ಹರಿವು ಬುಕ್ಸ್ ಸಂಸ್ಥೆ ಬುಕ್ಸ್ ಹಾಗೂ ಮಲೆನಾಡಿನ ಆರ್ಟ್ ಮಾರಾಟ ಮಳಿಗೆ ತೆರೆದಿತ್ತು.
ಮಲೆನಾಡ ಪ್ರಮುಖರು ಭಾಗಿ!
ಮಲೆನಾಡು ಮಿತ್ರ ವೃಂದದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಯುವ ಜನತೆ ಭಾಗಿಯಾಗಿದ್ದರು. ಮಲೆನಾಡ ಹಿಲಿಕೆರೆ ಮೂಲದ ಪೊಲೀಸ್ ಅಧಿಕಾರಿ ಕಾಶಿ, ಬಿಜೆಪಿ ನಾಯಕ ದಿನೇಶ್ ವಾಟಗದ್ದೆ, ಅನಿಲ್ ಹೊಸಕೊಪ್ಪ, ಸುಬ್ಬಯ್ಯ ನಂಟೂರು, ವನಮಾಲಯ್ಯ ಇಳಿಮನೆ, ಶಶಿ ಅತ್ತಿಕೊಡಿಗೆ ಸೇರಿ ಅನೇಕರು ಭಾಗಿಯಾಗಿದ್ದರು. ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು, ಹರೀಶ್ ಹಿಂಬ್ರವಳ್ಳಿ, ಸಂದೇಶ ಹಂದಿಗೋಡು,ಕೃಷ್ಣಮೂರ್ತಿ ಭಟ್, ಸುಧಾಕರ ಯಡಹಳ್ಳಿ, ರಾಘವೇಂದ್ರ ಸಿಸ್ಲೆ, ದಿನೇಶ್ ಹೊಸನಗರ, ಸುಬ್ರಹ್ಮಣ್ಯ ನಂಟೂರು, ಕೆ.ಸಿ ಕರುಣಾಕರ ಕಿರುಕೊಡಿಗೆ, ಅನಿಲ್ ಹೊಸಕೊಪ್ಪ, ವಾಸಪ್ಪ ಪಡುಬೈಲು, ಜಗದೀಶ್ ಸಿಡ್ಲುಮನೆ, ನಾಗೇಶ್ ಕೇಳೂರು,ಸಿದ್ದಪ್ಪ ಹುಳ್ಕಳಿ, ಅಂಜೂರ ಕುಡುಮಲ್ಲಿಗೆ, ನವೀನ್ ಕಾನೊಳ್ಳಿ, ಸುಕೇಶ್ ದಾಸನಕೊಡಿಗೆ, ವನಮಾಲಯ್ಯ ಇಳಿಮನೆ, ನಿದರ್ಶನ್ ಗಾಡಿಗೆರೆ, ಗಿರೀಶ್ ಕಾರ್ ಗದ್ದೆ, ಮಂಜುನಾಥ್ ತಲ್ವಾನೆ, ಹೆಚ್ ಆರ್ ಸತ್ಯಪಾಲ್, ಷಣ್ಮುಖ ಎಸ್ ಕೆ, ರಮೇಶ್ ಶೆಟ್ಟಿ, ಸ್ವೀಕೃತ ಹೆಗ್ಡೆ ಯಡದಳ್ಳಿ ಸೇರಿ ಅನೇಕರು ಹಾಜರಿದ್ದರು.
