Categories
ಕಾರ್ಕಳ

ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ!

ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ!
– ಯುವ ಸಪ್ತಾಹದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆ
– ಯುವ ಜನತೆಗೆ ನೀತಿ ಪಾಠ ಹೇಳಿದ ಗಣ್ಯರು

NAMMUR EXPRESS NEWS
ಕಾರ್ಕಳ: ಸ್ವಾಮಿ ವಿವೇಕಾನಂದರ ಚಿಂತನೆಗಳು ಭಾರತ ಮಾತ್ರವಲ್ಲ ವಿಶ್ವವ್ಯಾಪಿಯಾದುದು. ಯುವಕರು ದೇಶದ ಭವಿಷ್ಯ ಉಜ್ವಲಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆತ್ರೋದ್ಧಾರ ಮಾರ್ಗವೇ ಜಗವನ್ನು ಹಾಗೂ ಮನುಷ್ಯರನ್ನು ಅರಿಯಲು ಇರುವ ದಾರಿ.ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿ, ಸಿಡಿಲ ಸಂತನಾಗಿ ವಿಶ್ವವೇ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಮಹಾತ್ಮ ಮಾತ್ರವಲ್ಲದೇ ಎಲ್ಲರಿಗೂ ಸ್ಪೂರ್ತಿಯ ಚಿಲುಮೆ ಎಂದು ಪ್ರದೀಪ್ ಅಂಚನ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ‘ಯುವ ಸಪ್ತಾಹದ ಅಂಗವಾಗಿ ನಡೆದ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜಗತ್ತು ಭಾರತದ ಕಡೆಗೆ ಕೀಳಾಗಿ ಕಾಣುತ್ತಿರುವಾಗ ಭಾರತದ ಅಂತಃಶಕ್ತಿ ಆತ್ಮಜ್ಞಾನ, ಆಧ್ಯಾತ್ಮ ಕೊಡುಗೆಗಳ ಕುರಿತು ಪಾಶ್ಚಿಮಾತ್ಯರ ಕಣ್ಣು ತೆರೆಸಿ, ಶ್ರೇಷ್ಠ ಜ್ಞಾನ ಪರಂಪರೆ, ಮೌಲ್ಯಗಳ ಭಂಡಾರ ಭಾರತ ಎಂಬುದನ್ನು ತಿಳಿಸಿಕೊಟ್ಟವರು ವಿವೇಕಾನಂದರು. ವಿವೇಕಾನಂದರ ಜೀವನಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ ನೈತಿಕ ಶಕ್ತಿ ಉತ್ತಮ ವಿಚಾರಧಾರೆಗಳು, ಎಲ್ಲರೂ ಸಮಾನರು ಹಾಗೂ ಮನುಷ್ಯತ್ವದಲ್ಲಿ ದೇವರನ್ನು ಕಂಡವರು ವಿವೇಕಾನಂದರು. ಅವರ ಮಾತುಗಳು ನಮ್ಮ ನಡೆ-ನುಡಿಯಲ್ಲಿ ಪ್ರೇರಣೆ ಪಡೆದು ಹಾಗೆಯೇ ಜೀವಿಸುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ಚಂದ್ರಕಾಂತ್, ರಾಮಕೃಷ್ಣ ಹೆಗಡೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕು. ಸಂಹಿತಾ ಹೆಬ್ಬಾರ್ ವಂದಿಸಿದರು. ಕು. ಶೃದ್ಧಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.