ನ್ಯಾಷನಲ್ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
– ಹಾಜಿಶೇಖ್ ಅಹಮ್ಮದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
– 15 ವರ್ಷಗಳಿಂದ ಮಾಡಿಕೊಂಡು ಬಂದಿರುವ ಮಾದರಿ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರತಿಷ್ಠಿತ ನ್ಯಾಷನಲ್ ಸಂಸ್ಥೆ ಇದೀಗ ವಿದ್ಯಾ ಸೇವೆಯಲ್ಲೂ ತನ್ನದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಪ್ರತಿ ವರ್ಷ ಲಕ್ಷ ಲಕ್ಷ ಹಣವನ್ನು ವಿದ್ಯಾರ್ಥಿ ವೇತನವಾಗಿ ನೀಡುತ್ತಿದೆ. ನೂರಾರು ಮಕ್ಕಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಹೌದು. ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಭಾನುವಾರ ಹಾಜಿ ಶೇಖ್ ಅಹಮ್ಮದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತವಿಕ ಭಾಷಣ ಮಾಡಿದ ನ್ಯಾಷನಲ್ ಸಂಸ್ಥೆಯ ಮುಖ್ಯಸ್ಥರಲ್ಲಿ ಒಬ್ಬರಾದ ಹೈದರ್, ನ್ಯಾಷನಲ್ ಸಂಸ್ಥೆಯಿಂದ ಕಳೆದ 15 ವರ್ಷಗಳಿಂದ ಮಾಡಿಕೊಂಡು ಬಂದಿರುವ ಪ್ರತಿಭಾ ಪುರಸ್ಕಾರ ಹಾಗೂ ಸ್ಕಾಲರ್ ಶಿಪ್ ವಿತರಣಾ ಕಾರ್ಯಕ್ರಮ ನಡೆಸುತ್ತಿದೆ. ಸಮಾಜ ಸೇವೆಯಲ್ಲಿ ನಮ್ಮ ತಂದೆ ಹೇಳಿಕೊಟ್ಟಂತೆ ಜಾತಿ, ಧರ್ಮ, ಲಿಂಗ ಇವನ್ನೆಲ್ಲವನ್ನು ಮೀರಿದಂತಹ ಸಾಮಾಜಿಕ ಸೇವೆಯನ್ನು ಮಾಡಬೇಕು. ಅದರಂತೆ ನಾವು ಕೂಡ ದುಡಿದ ಹಣದಲ್ಲಿ ಒಂದಿಷ್ಟು ಹಣವನ್ನು ಸಾಮಾಜಿಕ ಸೇವೆಗೆ ಮೀಸಲಿಟ್ಟಿದ್ದೇವೆ ಎಂದರು.
2010 ರಲ್ಲಿ 50,000 ರೂ ಗಳಲ್ಲಿ ಪ್ರಾರಂಭ ಮಾಡಿದ ಕಾರ್ಯಕ್ರಮ ಇಂದು 9 ಲಕ್ಷಕ್ಕೂ ಹೆಚ್ಚಿನ ಹಣವನ್ನು ಈ ವರ್ಷ ಕೊಟ್ಟಿದ್ದೇವೆ, 2010 ರಿಂದ 2024 ರವರೆಗೆ ಸುಮಾರು 50 ಲಕ್ಷ ರೂ. ಗಳನ್ನು ಈ ಕಾರ್ಯಕ್ರಮಕ್ಕೆ ನೀಡಿದ್ದೇವೆ. ವಿದ್ಯಾರ್ಥಿಗಳಿಗೆ ಟಿವಿ ಮುಂದೆ ಕೂರಬೇಡಿ ಮೊಬೈಲ್ ಬಳಕೆ ಮಾಡಬೇಡಿ ಟಿವಿ ಮುಂದೆ ಕೂತವರು ಯಾರು ಟಿವಿ ಕಾರ್ಯಕ್ರಮದಲ್ಲಿ ಬರಲಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶ್ರಮಪಟ್ಟು ಪುಸ್ತಕಗಳನ್ನು ಓದಿ ಜ್ಞಾನವನ್ನು ವೃದ್ಧಿಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿ.ಎಸ್ ಅಬ್ದುಲ್ ರೆಹಮಾನ್ ಮಾತನಾಡಿ,, ನಮ್ಮ ತಂದೆಯ ಆಸೆಯಂತೆಯೇ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ಕೊಡಬೇಕು ಹಾಗೂ ಸಮಾಜ ಸೇವೆ ಮಾಡಬೇಕು ಎಂದು ನಾವು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸ್ಕಾಲರ್ ಶಿಪ್ ಕಾರ್ಯಕ್ರಮವನ್ನು ನ್ಯಾಷನಲ್ ಸಂಸ್ಥೆ, ಹಾಜಿ ಶೇಕ್ ಅಹಮದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಬೇಕು ಎಂದರು.
ನ್ಯಾಷನಲ್ ಸಂಸ್ಥೆ ತುಂಬಾ ಕಷ್ಟಪಟ್ಟು ದುಡಿದು ಈ ಮಟ್ಟಕ್ಕೆ ನಾವು ಬಂದಿದ್ದೇವೆ. ಇದರಲ್ಲಿ ಬಂದಂತ ಲಾಭಾಂಶದಲ್ಲಿ ಒಂದಿಷ್ಟು ಹಣವನ್ನು ವಿದ್ಯಾರ್ಥಿಗಳಿಗೆ ನೀಡುವಂತ ಕಾರ್ಯಕ್ರಮವನ್ನು ಕಳೆದ ಕೆಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಮಣಿಪಾಲ್ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಮಾತನಾಡಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಲ ಸೌಲಭ್ಯದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಬಗ್ಗೆ ಮಾತನಾಡಿ ನ್ಯಾಷನಲ್ ಸಂಸ್ಥೆ, ಈ ಒಂದು ಉತ್ತಮವಾದ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಇದು ಸಮಾಜಕ್ಕೆ ಕೊಡುವ ಉತ್ತಮ ಕೊಡುಗೆ. ನನಗೆ ತೀರ್ಥಹಳ್ಳಿ ಕುವೆಂಪು ಹುಟ್ಟಿದ ಊರಿಗೆ ಬಂದು ಇಂಥ ಒಂದು ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು. ಮುಖ್ಯ ಅತಿಥಿಯಾದ ಮಣಿಪಾಲ್ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಜಗದೀಶ್, ಶಿವಮೊಗ್ಗ ಕೆನರಾ ಬ್ಯಾಂಕಿನ ಡಿವಿಜನಲ್ ಮ್ಯಾನೇಜರ್ ದೇವರಾಜ್, ತೀರ್ಥಹಳ್ಳಿ ಕೆನರಾ ಬ್ಯಾಂಕಿನ ಮಹಮ್ಮದ್ ಸಮೀರ್ ಹಾಗೂ ನ್ಯಾಷನಲ್ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಇಬ್ರಾಹಿಂ ಶರೀಫ್, ಅಬ್ದುಲ್ ರೆಹಮಾನ್, ಸುಲೇಮಾನ್, ಕಬೀರ್, ಅಬ್ದುಲ್ ಕಲಾಂ, ಯೂಸೆಫ್ ಹೈದರ್, ಮಂಜುನಾಥ್ ಮಲ್ಯ ಹಾಗೂ ನ್ಯಾಷನಲ್ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
