Categories
ತೀರ್ಥಹಳ್ಳಿ ಪ್ರತಿಭೆಗಳು ಮಲ್ನಾಡ್

ತೀರ್ಥಹಳ್ಳಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕಾರ್ಮಿಕರ ದಿನಾಚರಣೆ.!

ತೀರ್ಥಹಳ್ಳಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಕಾರ್ಮಿಕರ ದಿನಾಚರಣೆ.!

– ಪೃಥ್ವಿಶ್ರಮ ಕಲ್ಲುಗಣಿ ಮತ್ತು ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದಿಂದ ಕಾರ್ಯಕ್ರಮ
– ತಾಲೂಕಿನ ಅನೇಕ ಗಣ್ಯರ ಉಪಸ್ಥಿತಿ: ಸರ್ವರನ್ನು ಸ್ವಾಗತಿಸಿದ ಮಂಜುನಾಥ್

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯ ಪೃಥ್ವಿಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ವತಿಯಿಂದ ದಿನಾಂಕ : 11-06-2024 ನೇ ಮಂಗಳವಾರ ಬೆಳಗ್ಗೆ 10.30 ಕ್ಕೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ಬಂಟರ ಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಆರಗ ಜ್ಞಾನೇಂದ್ರ ಅವರು ನೆರವೇರಿಸಲಿದ್ದು, ಪೃಥ್ವಿ ಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಎಸ್ ರವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ. ಆರ್ ಎಂ ಮಂಜುನಾಥ್ ಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್,ತಹಶೀಲ್ದಾರ್ ಜಿ ಬಿ ಜಕ್ಕನಗೌಡರ್, ನಿವೃತ್ತ ಅರಕ್ಷಕ ಜಿ ವಿ ಗಣೇಶಪ್ಪ, ಕಾರ್ಮಿಕ ನಿರೀಕ್ಷಕರು ಸುಖಿತ ಕೆ ಸಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಬಂಡೆ ವೆಂಕಟೇಶ್, ಪೃಥ್ವಿ ಶ್ರಮ ಕಲ್ಲು ಗಣಿ ಮತ್ತು ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಅಧ್ಯಕ್ಷರಾದ ಸತ್ಯವೇಲು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸರ್ವರನ್ನು ಪೃಥ್ವಿ ಶ್ರಮ ಕಲ್ಲುಗಣಿ ಹಾಗೂ ನಿರ್ಮಾಣ ಶ್ರಮಿಕರ ಸರ್ವೋದಯ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಎಸ್ ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.