Categories
ಮಲ್ನಾಡ್

ಶಿವಮೊಗ್ಗ : ಮಣ್ಣಿನ ಮನೆ ಗೋಡೆ ಕುಸಿದು ಶತಾಯುಷಿ ಸಿದ್ದಮ್ಮ ಸಾವು!

ಮಲ್ನಾಡ್ ಟಾಪ್ 3 ನ್ಯೂಸ್

ಶಿವಮೊಗ್ಗ : ಮಣ್ಣಿನ ಮನೆ ಗೋಡೆ ಕುಸಿದು ಶತಾಯುಷಿ ಸಿದ್ದಮ್ಮ ಸಾವು!
– ಸಕಲೇಶಪುರ : ವಿದ್ಯುತ್ ತಂತಿ ತುಳಿದು ಎರಡು ಕಾಡಾನೆ ಸಾವು..!!
– ಶಿವಮೊಗ್ಗ : ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತದಿಂದ ಇನ್ನೋವಾ, ಲಾರಿಗೆ ಡಿಕ್ಕಿ..!!

NAMMUR EXPRESS NEWS
ಶಿವಮೊಗ್ಗ: ರಾಜ್ಯದಲ್ಲಿ ಮಳೆ ನೂರಾರು ಅವಾಂತರಗಳನ್ನು ಸೃಷ್ಟಿಸುತ್ತಿದೆ. ಒಂದೆಡೆ ಮುಂಗಾರು ಅಬ್ಬರ ಹೆಚ್ಚಾಗಿದ್ದರೆ ಮತ್ತೊಂದೆಡೆ ವಾಯುಭಾರ ಕುಸಿತದಿಂದ ಸೈಕ್ಲೋನ್ ಶುರುವಾಗಿದೆ. ಇದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಭಾಗದಲ್ಲಿ ಮಳೆ
ಹೆಚ್ಚಾಗಿದೆ. ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿದೆ. ಇದರ ಜೊತೆಗೆ ಶಿವಮೊಗ್ಗದಲ್ಲಿ ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಗೋಡೆ ಕುಸಿದು ಶತಾಯುಷಿ ಅಜ್ಜಿ ಬಲಿಯಾಗಿದ್ದಾರೆ. ಮನೆಯಲ್ಲಿದ್ದ ಇನ್ನೂ ಮೂರ್ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ದುರಂತವೊಂದರಲ್ಲಿ ಶತಾಯುಷಿ ವೃದ್ಧೆಯೊಬ್ಬರು ದಾರುಣವಾಗಿ ಸಾವನಪ್ಪಿದ್ದಾರೆ. ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಆಡಗಡಿ ಗ್ರಾಮದಲ್ಲಿ ತಡರಾತ್ರಿ ಸುರಿದ ಮಳೆಯಿಂದಾಗಿ ಮಣ್ಣಿನ ಮನೆಯ ಗೋಡೆ ಕುಸಿದು, ಒಂದು ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ.

– ಸಕಲೇಶಪುರ : ವಿದ್ಯುತ್ ತಂತಿ ತುಳಿದು ಎರಡು ಕಾಡಾನೆ ಸಾವು..!!

ಸಕಲೇಶಪುರ: ತಾಲೂಕಿನ ಉದೇವಾರ ಗ್ರಾಮದ ಹೊರವಲಯದ ಎಬಿಸಿ ಕಾಫಿ ಎಸ್ಟೇಟ್‌ನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಹೆಣ್ಣಾನೆ ಹಾಗೂ ಮರಿಯಾನೆ ಮೃತಪಟ್ಟಿದೆ. ಗಾಳಿಯಿಂದಾಗಿ ಮರದ ರಂಬೆಯೊಂದು ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿ ನೆಲಕ್ಕೆಬಿದ್ದಿದೆ. ಮುಂಜಾನೆ ಆಹಾರ ಅರಸಿ ತೋಟದಲ್ಲಿ ಸುತ್ತಾಡುತ್ತಿದ್ದ ಸುಮಾರು 30 ವರ್ಷದ ಹೆಣ್ಣಾನೆ ಹಾಗೂ ಮೂರು ವರ್ಷದ ಮರಿಯಾನೆ ತಂತಿ ತುಳಿ ಸ್ಥಳದಲ್ಲೇ ಮೃತಪಟ್ಟಿವೆ. ಕಾರ್ಮಿಕರು ತೋಟಕ್ಕೆ ತೆರಳಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನಡೆಸಿದ್ದಾರೆ.

– ಶಿವಮೊಗ್ಗ : ಸವಳಂಗ ರಸ್ತೆಯಲ್ಲಿ ಭೀಕರ ಅಪಘಾತದಿಂದ ಇನ್ನೋವಾ, ಲಾರಿಗೆ ಡಿಕ್ಕಿ..!!

ಶಿವಮೊಗ್ಗ: ಡಿವೈಡರ್‌ ಹಾರಿ ಬಂದ ಇನ್ನೋವಾ ಕಾರು ಎದುರಿನಿಂದ ಬರುತ್ತಿದ್ದ ಕ್ಯಾಂಟರ್‌ ಲಾರಿಗೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಸವಳಂಗ ರಸ್ತೆಯ ಮತ್ತೋಡು ಮತ್ತು ಅಬ್ಬಲಗೆರೆಯ ಮಧ್ಯೆ ಸಂಜೆ ಘಟನೆ ಸಂಭವಿಸಿದೆ. ಶಿಕಾರಿಪುರ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಡಿವೈಡರ್‌ ಹಾರಿ ಬಂದಿದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಶಿವಮೊಗ್ಗ ಕಡೆಯಿಂದ ತೆರಳುತ್ತಿದ್ದ ಕ್ಯಾಂಟರ್‌ ಲಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಮುಂಭಾಗಕ್ಕು ಹಾನಿಯಾಗಿದೆ ಎಂದು ಆರೋಪಿಸಲಾಗಿದೆ. ಪೂರ್ವ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.