Categories
ಮಲ್ನಾಡ್

ಶಿವಮೊಗ್ಗ : ಅಂತರ ರಾಜ್ಯ ಕಳ್ಳನೊಬ್ಬನ ಕಾಲಿಗೆ ಗುಂಡೇಟು…!!

ಟಾಪ್ 4 ನ್ಯೂಸ್ ಮಲ್ನಾಡ್ 

ಶಿವಮೊಗ್ಗ : ಅಂತರ ರಾಜ್ಯ ಕಳ್ಳನೊಬ್ಬನ ಕಾಲಿಗೆ ಗುಂಡೇಟು…!!
– ಕಡೂರು: ಮಾತಿನ ಚಕಮಕಿ ನಡುವೆ ಎರಡು ಕೋಮಿನ ಯುವಕರ ನಡುವೆ ಹಲ್ಲೆ..!!
– ಶಿವಮೊಗ್ಗ : ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ..!!
– ಶಿವಮೊಗ್ಗ : ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತದಿಂದ ಒಬ್ಬ ಸಾವು..!!

NAMMUR EXPRESS NEWS
ಶಿವಮೊಗ್ಗ: ಅಂತರ ರಾಜ್ಯ ಕಳ್ಳನೊಬ್ಬನ ಕಾಲಿಗೆ ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಅಂತರ ರಾಜ್ಯ ಕಳ್ಳ ಮಂಜುನಾಥ್‌ ಅಲಿಯಾಸ್‌ ಕಲ್ಕೆರೆ ಮಂಜು ಎಂಬಾತನ ಕಾಲಿಗೆ ಬೆಳಗ್ಗೆ ಗುಂಡು ಹಾರಿಸಲಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಕಲ್ಕೆರೆ ಮಂಜ ಶಿವಮೊಗ್ಗದಲ್ಲಿ ಓಡಾಡುತ್ತಿರುವ ಸುಳಿವು ಲಭಿಸಿತ್ತು. ಖಚಿತ ಮಾಹಿತಿ ಮೇರೆಗೆ ಇಂದು ಬೆಳಗ್ಗೆ ಪೊಲೀಸರು ಬಂಧಿಸಲು ತೆರಳಿದ್ದರು. ಈ ಸಂದರ್ಭ ಪೊಲೀಸ್‌ ಸಿಬ್ಬಂದಿ ದ್ಯಾಮಪ್ಪ ಅವರ ಮೇಲೆ ಮಂಜ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆತ್ಮರಕ್ಷಣೆಗಾಗಿ ಜಯನಗರ ಪಿಎಸ್‌ಐ ನವೀನ್‌ ಬ್ಯಾಕೋಡು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಬಳಿಕ ಕಲ್ಕೆರೆ ಮಂಜನ ಕಾಲಿಗೆ ಗುಂಡು ಹೊಡೆದಿದ್ದಾರೆ. ಮಂಜನ ಎಡಗಾಲಿಗೆ ಗುಂಡು ತಗುಲಿದೆ. ಗಾಯಾಳು ಪೊಲೀಸ್‌ ಸಿಬ್ಬಂದಿ ದ್ಯಾಮಪ್ಪ ಮತ್ತು ಕಲ್ಕೆರೆ ಮಂಜನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

– ಕಡೂರು: ಮಾತಿನ ಚಕಮಕಿ ನಡುವೆ ಎರಡು ಕೋಮಿನ ಯುವಕರ ನಡುವೆ ಹಲ್ಲೆ..!!

ಕಡೂರು: ಕ್ಷುಲ್ಲಕ ಕಾರಣಕ್ಕಾಗಿ ಎರಡು ಕೋಮಿನ ಯುವಕರ ನಡುವೆ ಜಗಳ ಆಗಿದ್ದು, ಓರ್ವನ ಕೈ ಬೆರಳಿಗೆ ಗಾಯವಾಗಿದೆ. ಪಟ್ಟಣದ ಕನಕ ವೃತ್ತದಲ್ಲಿ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಯುವಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಸಂಭವಿಸಿ ಕನಕ ವೃತ್ತದಲ್ಲಿ ಜನರು ಗುಂಪುಗೂಡಿದ್ದರು. ಕಡೂರು ಪೊಲೀಸರು ಗುಂಪನ್ನು ಚದರಿಸಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

– ಶಿವಮೊಗ್ಗ : ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ..!!

ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಇಬ್ಬರು ಯುವಕರ ಮೇಲೆ ಹಲ್ಲೆಯಾಗಿದೆ. ಗಾಯಾಳುಗಳು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಕೊಂಡಿದ್ದಾರೆ. ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಆರ್‌ಸಿಬಿ ಪಂದ್ಯ ಗೆಲುತ್ತಿದ್ದಂತೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಯುವಕರು ಡೊಳ್ಳು ಹೊಡೆಸಿ ಡಾನ್ಸ್‌ ಮಾಡುತ್ತಿದ್ದರು. ಪಕ್ಕದಲ್ಲಿ ನಿಂತು ಇದನ್ನು ವೀಕ್ಷಿಸುತ್ತಿದ್ದ ಗಣೇಶ, ಅವರ ಸಹೋದರ ಪ್ರಸನ್ನ ಮತ್ತು ಸ್ನೇಹಿತ ಶಿವು ಮೇಲೆ ಹಲ್ಲೆಯಾಗಿದೆ. ನೃತ್ಯ ಮಾಡುತ್ತಿದ್ದರ ಪೈಕಿ ಒಬ್ಬಾತ ಗಣೇಶ್‌ ತಲೆಗೆ ಹೊಡೆದಿದ್ದಾನೆ. ಸಹೋದರ ಪ್ರಸನ್ನನ ಕಿವಿ ಭಾಗಕ್ಕೆ ಹೊಡೆಯಲಾಗಿದೆ. ಸ್ನೇಹಿತ ಶಿವುಗೆ ಕೆನ್ನೆಗೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಗಣೇಶ್‌ ಮತ್ತು ಪ್ರಸನ್ನ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಶಿವಮೊಗ್ಗ : ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತದಿಂದ ಒಬ್ಬ ಸಾವು..!!

ಶಿವಮೊಗ್ಗ: ಖಾಸಗಿ ಬಸ್‌ ಮತ್ತು ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ನಗರದ ಎಲ್‌ಎಲ್‌ಆರ್‌ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರದೀಪ್‌ ಎಂಬುವವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಖಾಸಗಿ ಬಸ್‌ ರಾಯಲ್‌ ಆರ್ಕಿಡ್‌ ಹೊಟೇಲ್‌ ಎದುರು ಬಿ.ಹೆಚ್‌.ರಸ್ತೆಯಿಂದ ಎಲ್‌ಎಲ್‌ಆರ್‌ ರಸ್ತೆಯಲ್ಲಿ ತೆರಳುತ್ತಿತ್ತು. ಈ ಸಂದರ್ಭ ಗೋಪಿ ಸರ್ಕಲ್‌ ಕಡೆಯಿಂದ ಸವರ್‌ಲೈನ್‌ ರಸ್ತೆಯಲ್ಲಿ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಬಸ್ಸು ಪಕ್ಕದ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರು ಕೂಡ ಜಖಂ ಆಗಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.