ಸಿದ್ದಾಪುರದಿಂದ ಸಕ್ರೆಬೈಲಿಗೆ ಬಂತು ಕಾಡಾನೆ..!
– 6 ಆನೆ 150 ಸಿಬ್ಬಂದಿ, ಜೆಸಿಬಿ ಸಹಾಯದಿಂದ ಆನೆ ಸೆರೆ
– ಕರಾವಳಿಯಲ್ಲಿ ಅಂತೂ ಸೆರೆ ಆಯ್ತು ಆನೆ
NAMMUR EXPRESS NEWS
ಕುಂದಾಪುರ / ತೀರ್ಥಹಳ್ಳಿ: ಮಲೆನಾಡು ಹಾಗೂ ಕರಾವಳಿ ಜನರನ್ನು ತಬ್ಬಿಬ್ಬು ಮಾಡಿದ್ದ ಕಾಡು ಆನೆ ಕೊನೆಗೂ ಸೆರೆ ಆಗಿದ್ದು ಅದನ್ನು ಶಿವಮೊಗ್ಗ ಸಮೀಪದ ಸಕ್ರೆಬೈಲು ಆನೆ ಬಿಡಾರಕ್ಕೆ ಬಿಡಲಾಗಿದೆ.
ಕುಂದಾಪುರದ ಸಿದ್ದಾಪುರದಲ್ಲಿ ಬೀಡು ಬಿಟ್ಟಿದ್ದ ಆನೆಯನ್ನು ಅರವಳಿಕೆ ಮದ್ದನ್ನು ನೀಡುವ ಮೂಲಕ ಕಾರ್ಯಚರಣೆಯಲ್ಲಿ ಆರು ಪಳಗಿದ ಆನೆಗಳ ಸಹಾಯ ಸೆರೆಹಿಡಿಯಲಾಯಿತು. ಸಕ್ರೆಬೈಲಿನ 3 ಆನೆ ಹಾಗೂ ನಾಗರಹೊಳೆಯ 3 ಆನೆಗಳು ಭಾಗವಹಿಸಿದ್ದು. ಕಾರ್ಯಚರಣೆಯಲ್ಲಿ 150 ಜನ ಭಾಗವಹಿಸಿದ್ದರು. ಸೆರೆಹಿಡಿದ ಆನೆಯನ್ನು ಸಕ್ರೆಬೈಲಿನ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಕರಾವಳಿಯಲ್ಲಿ ಅಂತೂ ಸೆರೆ ಆಯ್ತು
ಎನ್. ಆರ್. ಪುರ, ಕೊಪ್ಪ, ತೀರ್ಥಹಳ್ಳಿ, ಹೊಸನಗರ, ಸಿದ್ಧಾಪುರ ಮಾರ್ಗವಾಗಿ ಹಳ್ಳಿಗಳಲ್ಲಿ ಸಾಗುತ್ತಿದ್ದ ಕಾಡು ಆನೆಯನ್ನು ಅಂತೂ ಸೆರೆ ಹಿಡಿಯಲಾಗಿದೆ. ಹೊಸಂಗಡಿ ಇಂದ ಸ್ವಲ್ಪ ಮುಂದೆ ಸಿದ್ದಾಪುರದ ಹತ್ತಿರ ಹೊನ್ನಾ ಪಾಲು ಎಂಬಲ್ಲಿ ಹಿಡಿಯಲಾಗಿದೆ. ಅನೇಕ ಭಾಗದಲ್ಲಿ ಸಂಚಾರ ಮಾಡಿದ್ದ ಆನೆ ಯಾರಿಗೂ ತೊಂದರೆ ಮಾಡಿರಲಿಲ್ಲ. ಕೆಲವು ಕಡೆ ಶಾಲೆಗಳಿಗೆ ರಜೆ ಕೂಡ ನೀಡಲಾಗಿತ್ತು.
