Categories
ತೀರ್ಥಹಳ್ಳಿ ಮಲ್ನಾಡ್

ತೀರ್ಥಹಳ್ಳಿಯಲ್ಲಿ ಜೀವ ವಿಮಾ ಪ್ರತಿನಿಧಿಗಳ ಸಂಘದ ಬೆಳ್ಳಿ ಹಬ್ಬ

ತೀರ್ಥಹಳ್ಳಿಯಲ್ಲಿ ಜೀವ ವಿಮಾ ಪ್ರತಿನಿಧಿಗಳ ಸಂಘದ ಬೆಳ್ಳಿ ಹಬ್ಬ
– ಅ.16ರಂದು ತೀರ್ಥಹಳ್ಳಿ- ಹೊಸನಗರ ಶಾಖೆಯ ವಿಶೇಷ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ಹಿರಿಯ ಜೀವವಿಮಾ ಪ್ರತಿನಿಧಿಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕ ಜೀವ ವಿಮಾ ಪ್ರತಿನಿಧಿಗಳಿಗೆ ಸನ್ಮಾನ

NAMMUR EXPRESS NEWS
ತೀರ್ಥಹಳ್ಳಿ: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘ ತೀರ್ಥಹಳ್ಳಿ ಹೊಸನಗರ ಶಾಖೆಯಿಂದ ಅಕ್ಟೋಬರ್ -16 ರಂದು ಬೆಳ್ಳಿ ಹಬ್ಬ ಎಂಬ ಸಂಭ್ರಮವನ್ನು ಆಯೋಜನೆ ಮಾಡಲಾಗಿದೆ. ಶಾಂತವೇರಿ ಗೋಪಾಲಗೌಡ ರಂಗಮಂದಿರ ಸೊಪ್ಪುಗುಡ್ಡೆ ತೀರ್ಥಹಳ್ಳಿಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಜೀವವಿಮಾ ಪ್ರತಿನಿಧಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ಜೀವ ವಿಮಾ ಪ್ರತಿನಿಧಿಗಳಿಗೆ ಸನ್ಮಾನವನ್ನು ಆಯೋಜನೆ ಮಾಡಲಾಗಿದೆ.
2000ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ 25 ವರ್ಷಗಳ ಕಾಲ ಆರು ಜನರು ಅಧ್ಯಕ್ಷರು ಈ ಸಂಸ್ಥೆ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಈಗ ಕೋರನಕೋಟೆ ಶ್ರೀನಿವಾಸ್ ಅವರು ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಮಾ ಪ್ರತಿನಿಧಿಗಳ ಸಂಘವನ್ನು ಆರಂಭ ಮಾಡಿ ಎಲ್ಲಾ ಪ್ರತಿನಿಧಿಗಳನ್ನು ಒಟ್ಟು ಮಾಡಬೇಕು ಎಂಬ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ. ತೀರ್ಥಹಳ್ಳಿ ಹಾಗೂ ಹೊಸನಗರ ಪ್ರತಿನಿಧಿ ಸಂಘಗಳಲ್ಲಿ ಏಳೂರಕ್ಕೂ ಹೆಚ್ಚು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿನಿಧಿಗಳಿಗೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಈ ಸಂಘಟನೆ ನಿರ್ವಹಿಸುತ್ತಾ ಬಂದಿದೆ. ನಿರಂತರವಾಗಿ 25 ವರ್ಷಗಳಿಂದ ಸೇವೆಯನ್ನು ನಿರ್ವಹಿಸುತ್ತಾ ಬಂದಿದೆ. 25ನೇ ವರ್ಷದ ಬೆಳ್ಳಿ ಹಬ್ಬದಲ್ಲಿ ಪ್ರತಿನಿಧಿಗಳ ಜೊತೆಗೆ ಎಲ್ಲರೂ ಕೂಡ ಈ ಸಮಾರಂಭದಲ್ಲಿ ಭಾಗವಹಿಸಬೇಕು ಆಯೋಜಕರು ಎಂಬುದಾಗಿ ತಿಳಿಸಿದರು.

ಮಕ್ಕಳಿಗೆ ಪ್ರತಿಭಾ ಪ್ರದರ್ಶನ, ಹಾಸ್ಯ ಕಾರ್ಯಕ್ರಮ, ಯಕ್ಷಗಾನ

ಬೆಳ್ಳಿ ಹಬ್ಬ ಒಂದು ದಿನದ ಪರಿಪೂರ್ಣ ಹಬ್ಬವನ್ನು ಆಯೋಜನೆ ಮಾಡಲಾಗಿದೆ. ಪ್ರತಿನಿಧಿಗಳು, ವಿಮಾ ಸಲಹೆಗಾರರು ಹಾಗೂ ಅವರ ಮಕ್ಕಳಿಗೆ ಪ್ರತಿಭಾ ಪ್ರದರ್ಶನವನ್ನು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಆಯೋಜನೆ ಮಾಡಲಾಗಿದೆ.
ಸಂಜೆ 7:00ಗೆ ಹಾಸ್ಯ ಮಾತು ಪ್ರೊಫೆಸರ್ ಕೃಷ್ಣೇಗೌಡರಿಂದ, ಹಾಗೂ ಸಂಜೆ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ಜರುಗಲಿದೆ. ಸಂಜೆ ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯರಿಗೂ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಎಲ್ ಐಸಿ ಪ್ರಮುಖರಾದ ಬಿ. ಕೆ ವಾದಿರಾಜ್, ಅಧ್ಯಕ್ಷರಾದ ಕೆ ಶ್ರೀನಿವಾಸ್, ಉಪಾಧ್ಯಕ್ಷರಾದ ಶಿವಪ್ಪ ಗೌಡ, ಎಂ ಗಿರೀಶ್ ಅಂಬಳಿಕೆ, ಕೆ ಎ ಹರೀಶ್, ಡಿ ಚಂದ್ರಶೇಖರ, ಎಂ ಕೃಷ್ಣಮೂರ್ತಿ, ರಾಘವೇಂದ್ರ ಕೆ.ಎಸ್, ಕೇಶವ ಮೂರ್ತಿ, ರವೀಂದ್ರ, ಸತ್ಯನಾರಾಯಣ, ಶಾಲಿನಿ, ಚಂದ್ರಕಲಾ, ಜಯಂತಿ, ಮಂಜುನಾಥ ಟಿ ಇವರು ಈ ಕಾರ್ಯಕ್ರಮದಲ್ಲಿ ಆಗಮಿಸಿದ್ದರು.

 

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.