ಶೃಂಗೇರಿ ಟಾಪ್ ನ್ಯೂಸ್
ಶೃಂಗೇರಿ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಹೋರಾಟ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಶೃಂಗೇರಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಮತ್ತು ವೈದ್ಯರ ಕೊರತೆಗೆ ಸಂಬಂಧಿಸಿದಂತೆ ಸೋಮವಾರದಂದು ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಶೃಂಗೇರಿ ತಾಲೂಕಿನಲ್ಲಿ ವೈದ್ಯರ ಕೊರತೆಯಿಂದಾಗಿ ಜನರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕುತ್ತಿಲ್ಲ, ಅಲ್ಲದೆ ಅವ್ಯವಸ್ಥೆಯಿಂದಾಗಿ ಕಾಯಿಲೆ ವಾಸಿಯಾಗುವ ಬದಲು, ಉಲ್ಬಣಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದಂತಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳುಗಳ ಹಿಂದೆ ಪ್ರತಿಭಟನೆಯನ್ನು ನಡೆಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಯು 2 ತಿಂಗಳುಗಳ ಕಾಲ ಸಮಯಾವಕಾಶವನ್ನು ಕೇಳಿತ್ತು. ಆದರೆ, ಆಸ್ಪತ್ರೆಗೆ ಸಂಬಂಧಿಸಿದಂತೆ ಈ 5 ತಿಂಗಳಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬಾರದಿರುವ ಕಾರಣ ಪುನಃ ಪ್ರತಿಭಟನೆ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ಪ್ರಮುಖರಾದ ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಉಮೇಶ್ ತಲಗಾರು, ನೂತನ್ ಕುಮಾರ್, ವೇಣುಗೋಪಾಲ್, ಹರೀಶ್ ಶೆಟ್ಟಿ, ಶೃಂಗೇರಿ ಶಿವಣ್ಣ, ರಾಘವೇಂದ್ರ ಹಂಚಲಿ, ಅಂಗುರ್ಡಿ ದಿನೇಶ್ ಸೇರಿದಂತೆ ಇತರರು ತಿಳಿಸಿದ್ದಾರೆ.
• ಶೃಂಗೇರಿಯಲ್ಲಿ 2 ದಿನಗಳ ಅವರೇಬೇಳೆ ಮೇಳ
ಶೃಂಗೇರಿ: ಶೃಂಗೇರಿಯಲ್ಲಿ ಇದೇ ಮೊದಲ ಬಾರಿಗೆ, ಮಾರ್ಚ್ 3ರ ಮಂಗಳವಾರ ಹಾಗೂ 4ರ ಬುಧವಾರದಂದು ಕಾಳಿಕಾಂಬ ರಸ್ತೆಯಲ್ಲಿರುವ ಈಡಿಗರ ಭವನದಲ್ಲಿ ಅವರೇಬೇಳೆ ಮೇಳ ಮತ್ತು ಜೀವನಶೈಲಿ ಪ್ರದರ್ಶನವನ್ನು ಶ್ರೀಸಾಯಿ ಇವೆಂಟ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಅವರೇಬೇಳೆಯಿಂದ ತಯಾರಿಸಲಾದ ವಿವಿಧ ಬಗೆಯ ರುಚಿಕರ ಖಾದ್ಯಗಳ ಸವಿಯೊಂದಿಗೆ, ಸೀರೆಗಳು ಕುರ್ತಾಗಳು, ಆಭರಣಗಳು, ಜರ್ಮನ್ ಸಿಲ್ವರ್ ಪೂಜಾ ಸಾಮಗ್ರಿಗಳು, ಸುಂದರ ಕಸೂತಿಯುಳ್ಳ ಕೈಚೀಲಗಳು, ಚನ್ನಪಟ್ಟಣದ ಗೊಂಬೆಗಳು, ಪ್ರಸಾಧನ ವಸ್ತುಗಳು ಶೇಕಡ 20 ರಿಂದ ಶೇಕಡ 70ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಿದೆ. ಜೊತೆಗೆ ಹಳೆಯ ರೇಷ್ಮೆಸೀರೆಗಳನ್ನು ನೀಡಿದಲ್ಲಿ, ಒಳ್ಳೆ ಬೆಲೆ ಕೂಡ ನೀಡಲಿದ್ದಾರೆ. ಈ ಸುವರ್ಣಕಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶ್ರೀಸಾಯಿ ಇವೆಂಟ್ಸ್ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
