ಇಮ್ತಿಯಾಜ್ ಸಂಗೀತ ನೀಡಿದ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ!
– ತೀರ್ಥಹಳ್ಳಿಯ ಇಮ್ತಿಯಾಜ್ ಸುಲ್ತಾನ್ ಸಾಧನೆ
– ಬಿಸಿಲು ಕುದುರೆ ಸಿನಿಮಾದ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ
NAMMUR EXPRESS NEWS
ರಾಜ್ಯ ಸರ್ಕಾರ 2021ನೇ ಸಾಲಿನ ಕನ್ನಡ ಚಲನ ಚಿತ್ರ ಪ್ರಶಸ್ತಿ ಪ್ರಕಟ ಮಾಡಿದ್ದು, ಪ್ರಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಇಮ್ತಿಯಾಜ್ ಸುಲ್ತಾನ್ ಅವರಿಗೆ 2021ರ ರಾಜ್ಯ ಚಲನ ಚಿತ್ರ ಪ್ರಶಸ್ತಿ ದೊರಕಿದೆ.
ಬಿಸಿಲು ಕುದುರೆ ಚಿತ್ರದ ಇವರ ಸಂಗೀತ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ದೊರಕಿದೆ. ಹೃದಯ ಶಿವ ನಿರ್ದೇಶನದ “ಬಿಸಿಲು ಕುದುರೆ “ಚಿತ್ರಕ್ಕೆ ಇಮ್ತಿಯಾಜ್ ಸಂಗೀತ ನೀಡಿ ಹಾಡನ್ನು ಹಾಡಿದ್ದರು. ಇದು ಇವರು ಸಂಗೀತ ನೀಡಿರುವ ಮೊದಲನೇ ಚಿತ್ರವಾಗಿದೆ. ತನ್ನ ಮೊದಲನೇ ಚಿತ್ರದಲ್ಲಿಯೇ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಇಮ್ಮಿಯಾಜ್ ಜಿಲ್ಲೆ ಹಾಗೂ ತೀರ್ಥಹಳ್ಳಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ತಮ್ಮ ಎರಡನೇ ಚಿತ್ರವಾದ “ಮತ್ತೆ ಮತ್ತೆ”ಗೂ ಇವರು ಸಂಗೀತ ನೀಡಿದ್ದರು. ಖ್ಯಾತ ಗಜಲ್ ಗಾಯಕರು ಆಗಿ ಹೆಸರು ಮಾಡಿರುವ ಇಮ್ಮಿಯಾಜ್‌ರ ಈ ಸಾಧನೆಗೆ ಸಂಗೀತ ಹಾಗೂ ಸಿನಿಮಾ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ತೀರ್ಥಹಳ್ಳಿ ಕಲಾವಿದನಿಗೆ ಪ್ರಶಸ್ತಿ!: ಕನ್ನಡದ ಖ್ಯಾತ ಕಲಾ ನಿರ್ದೇಶಕ ರವಿ ಸಂತೆಹಕ್ಕಲು ಅವರು ತಮ್ಮ ಭಜರಂಗಿ-2 ಚಿತ್ರದ ಕಲಾ ನಿರ್ದೇಶನಕ್ಕೆ 2021ನೇ ಸಾಲಿನ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರವಿ ಸಂತೆಹಕ್ಕಲು ಅವರ ಹೆಸರನ್ನು ಘೋಷಣೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಶುಭಾಶಯ ಸಲ್ಲಿಸಿದ್ದಾರೆ. ಇಬ್ಬರು ಕಲಾವಿದರಿಗೆ ನಮ್ಮೂರ್ ಎಕ್ಸ್ಪ್ರೆಸ್ ಶುಭಾಶಯ ಸಲ್ಲಿಸುತ್ತದೆ.
