ತೀರ್ಥಹಳ್ಳಿಯಲ್ಲಿ ಕಂಡು ಕೇಳರಿಯದಷ್ಟು ಟ್ರಾಫಿಕ್ ಜಾಮ್!
* ಸಂಚಾರ ಅಸ್ತವ್ಯಸ್ತ: ರಸ್ತೆಗಳಲ್ಲಿ ಕಿಕ್ಕಿರಿದ ವಾಹನ!
* ಕಾದು ಕಾದು ಕಂಗಾಲಾದ ವಾಹನ ಸವಾರರು: ಪರಿಹಾರ ಏನು?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶನಿವಾರ, ಭಾನುವಾರ ಸಂಜೆ, ಸೋಮವಾರ ಬೆಳಿಗ್ಗೆ ಇಂದಲು ಭಾರೀ ಟ್ರಾಫಿಕ್‌ನಿಂದ ಜನ ತತ್ತರಿಸಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ತೆರಳುವ ಉದ್ಯೋಗಿಗಳು, ರೋಗಿಗಳನ್ನು ಹೊತ್ತ ಆಂಬುಲೆನ್ಸ್ ಗಳು ಕಾಯುವ ಪರಿಸ್ಥಿತಿ ಉಂಟಾಗಿದೆ ನಾಗರಿಕರು ರಸ್ತೆಗಳಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡರು. ಕಿಕ್ಕಿರಿದ ವಾಹನ ಸಾಲುಗಳು ಜನರಲ್ಲಿ ಅಸಹನೆ ಮೂಡಿಸಿದೆ.
ಸಾಗರ ರಸ್ತೆ, ಆಗುಂಬೆ ರೋಡ್, ಕೊಪ್ಪ ಸರ್ಕಲ್, ರಥದಭೀದಿ, ಗಾಂಧಿ ಚೌಕ ಹಾಗೂ ಸಂತೆ ಮಾರ್ಕೆಟ್ ಮಾರ್ಗಗಳಲ್ಲಿ ವಾಹನಗಳಿಗೆತೊಂದರೆ ಉಂಟಾಗಿದೆ. ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೂ ವಾಹನಗಳ ದಟ್ಟಣೆ ಕಡಿಮೆಯಾಗದೆ, ಎಲ್ಲೆಡೆ ನಿಧಾನ ಸಂಚಾರ ಮುಂದುವರೆಯುತ್ತಿದೆ. ಎಂದೆಂದೂ ಆಗದ ಟ್ರಾಫಿಕ್ ಇಂದು ಹೇಗೆ ಈ ಪ್ರಮಾಣದಲ್ಲಿ ಸಂಚಾರ ಅಸ್ತವ್ಯಸ್ತ ವಾಗುತ್ತಿದೆ ಎಂಬುವುದು ಸ್ಥಳೀಯರ ಪ್ರಶ್ನೆಯಾಗಿದೆ. ಸಾಲು ಸಾಲಾಗಿ ನಿಂತ ಕಾರುಗಳು, ಬೈಕ್‌ಗಳು, ಆಟೋಗಳು,ಬಸ್ ಹಾಗೂ ಲೋಡ್ ತುಂಬಿದ ಲಾರಿಗಳು, ಆಂಬುಲೆನ್ಸ್ ರಸ್ತೆಯ ಮಧ್ಯೆ ನಿಂತಿದ್ದವು.
ರಸ್ತೆ ಅಗಲಿಕರಣ, ಟ್ರಾಫಿಕ್ ನಿಯಮ, ಪಾರ್ಕಿಂಗ್ ಜಾಗ ಆಗದಿದ್ದಲ್ಲಿ ಮುಂದೆ ಭಾರೀ ಸಮಸ್ಯೆ ಎದುರಾಗಲಿದೆ. ಹಬ್ಬಕ್ಕೆ ಹೊರ ಊರಿಂದ ಜನ ಬಂದಿದ್ದು, ಮಕ್ಕಳಿಗೆ ರಜೆ ಕಾರಣ, ಪ್ರವಾಸಿ ವಾಹನ ಹೆಚ್ಚಿದ್ದೆ ಕಾರಣ ಎನ್ನಲಾಗಿದೆ.
