Categories
ಮಲ್ನಾಡ್

ಚಿನ್ನದ ಪದಕ ಪಡೆದ ಶೃಂಗೇರಿ ಶ್ರೀಜೆಸಿಬಿಎಂ ಕಾಲೇಜು ವಿದ್ಯಾರ್ಥಿಗಳು * ದಿಲ್ಲಿಯ ಥಾಲ್‌ನಲ್ಲಿ ನಡೆದ ಎನ್‌ಸಿಸಿ ಆರ್ಮಿ ಕೆಡೆಟ್‌ನಲ್ಲಿ ಪದಕ * ರಾಜ್ಯವನ್ನು ಪ್ರತಿನಿಧಿಸಿ, ಶೂಟಿಂಗ್ ಹಾಗೂ ಮ್ಯಾಪ್ ರೀಡಿಂಗ್‌ನಲ್ಲಿ ಪದಕ

ಚಿನ್ನದ ಪದಕ ಪಡೆದ ಶೃಂಗೇರಿ ಶ್ರೀಜೆಸಿಬಿಎಂ ಕಾಲೇಜು ವಿದ್ಯಾರ್ಥಿಗಳು

* ದಿಲ್ಲಿಯ ಥಾಲ್‌ನಲ್ಲಿ ನಡೆದ ಎನ್‌ಸಿಸಿ ಆರ್ಮಿ ಕೆಡೆಟ್‌ನಲ್ಲಿ ಪದಕ
* ರಾಜ್ಯವನ್ನು ಪ್ರತಿನಿಧಿಸಿ, ಶೂಟಿಂಗ್ ಹಾಗೂ ಮ್ಯಾಪ್ ರೀಡಿಂಗ್‌ನಲ್ಲಿ ಪದಕ

NAMMMUR EXPRESS NEWS
ಶೃಂಗೇರಿ: ತಾಲೂಕಿನ ಶ್ರೀಜೆಸಿಬಿಎಂ ಕಾಲೇಜಿನ ವಿದ್ಯಾರ್ಥಿಗಳು ಎನ್‌ಸಿಸಿಯ ಆರ್ಮಿ ಕೆಟೆಡ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ದಿಲ್ಲಿಯಲ್ಲಿ ನಡೆದ ಸೈನಿಕ್ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿ ಫೈರಿಂಗ್‌ನಲ್ಲಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಹಾಲಕ್ಷ್ಮಿರಾವ್ ಚಿನ್ನದ ಪದಕ ಗಳಿಸಿದ್ದಾರೆ. ಇವರು ಮರ್ಕಲ್ ಗ್ರಾ ಪಂ ಯ ಹುಲುಗಾರಿನ ರಾಜೇಂದ್ರ ರಾವ್ ಮತ್ತು ಸುಮನ ರಾವ್‌ರವರ ಪುತ್ರಿಯಾಗಿದ್ದಾರೆ.
ಇವರೊಂದಿಗೆ ಇದೇ ಕಾಲೇಜಿನ ಎನ್‌ಸಿಸಿ ಕೆಡೆಟ್ ಪಿ ಎಚ್ ಉದಯ ಭಾರ್ಗವ್ ಕೂಡ ಭಾಗವಹಿಸಿ ಮ್ಯಾಪ್ ರೀಡಿಂಗ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.ಇವರು ಬಳ್ಳಾರಿ ಮೂಲದವರಾಗಿದ್ದು,ಹರೀಶ್ ಹಾಗೂ ವಿಮಲಕ್ಷ್ಮೀ ದಂಪತಿಗಳ ಪುತ್ರನಾಗಿದ್ದು ಸದ್ಯ ಶೃಂಗೇರಿಯ ಶ್ರೀಜೆಸಿಬಿಎಂ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಪದಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವರ್ಗದವರು ಸೇರಿ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ತಿಳಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.