Categories
ಮಲ್ನಾಡ್

ಬಸ್‌ಗಾಗಿ ಬೀದಿಗಳಿದು ಬೃಹತ್ ಪ್ರತಿಭಟನೆ ನಡೆಸಿದ ಎ ಬಿ ವಿ ಪಿ * ಸರಿಯಾದ ಬಸ್ ಇಲ್ಲ,ಬಸ್ ಬಂದರೂ ನಿಲ್ಲಿಸೋಲ್ಲ * ಸಾರಿಗೆ ಇಲಾಖೆ ಅಧಿಕಾರಿಗಳಿಗೆ 8 ದಿನಗಳ ಗಡವು

ಬಸ್‌ಗಾಗಿ ಬೀದಿಗಳಿದು ಬೃಹತ್ ಪ್ರತಿಭಟನೆ ನಡೆಸಿದ ಎ ಬಿ ವಿ ಪಿ

* ಸರಿಯಾದ ಬಸ್ ಇಲ್ಲ,ಬಸ್ ಬಂದರೂ ನಿಲ್ಲಿಸೋಲ್ಲ
* ಸಾರಿಗೆ ಇಲಾಖೆ ಅಧಿಕಾರಿಗಳಿಗೆ 8 ದಿನಗಳ ಗಡವು

NAMMMUR EXPRESS NEWS
ಶೃಂಗೇರಿ: ಸೂಕ್ತ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಬರುವ ಬಸ್ ವಿದ್ಯಾರ್ಥಿಗಳಿಗೆ ನಿಲುಗಡೆ ನೀಡುವಂತೆ ಒತ್ತಾಯಿಸಿ ಸಾರಿಗೆ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಎಬಿವಿಪಿ ಇಂದು ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಶಂಕರಾಚಾರ್ಯ ವೃತ್ತದಲ್ಲಿ ಸೇರಿದ ನೂರಾರು ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕೆಲಕಾಲ ಸ್ಥಳದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸರು,ಟಿಸಿಗಳ ನಡುವೆ ವಾಗ್ವಾದ ನಡೆಯಿತು. ಸ್ಥಳಕ್ಕೆ ಜಿಲ್ಲೆಯ ಸಾರಿಗೆ ಅಧಿಕಾರಿಗಳು ಅಥವಾ ಡಿ ಸಿ ಬರುವಂತೆ ಪಟ್ಟುಹಿಡಿಯಲಾಯಿತು,ಪೊಲೀಸರು,ಸ್ಥಳೀಯ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಬಗ್ಗದ ವಿದ್ಯಾರ್ಥಿಗಳು ತಮಗಾಗುತ್ತಿರುವ ತೊಂದರೆಯನ್ನು ಸಾರಿ ಹೇಳಿದ ವಿದ್ಯಾರ್ಥಿಗಳು ಕೊನೆಗೆ ತಾಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಫೋನ್ ಮುಖಾಂತರ ಮಾತನಾಡಿ ಎಂಟು ದಿನಗಳ ಗಡುವು ನೀಡಿದರು ಒಂದು ವೇಳೆ ಮಾತು ತಪ್ಪಿದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ,ಅಂದು ಡಿ ಸಿ ಹಾಗೂ ಜಿಲ್ಲೆಯ ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕಾಗುವುದು ಎಂಬ ಎಚ್ಚರಿಕೆ ನೀಡಿ ಹಾಗೂ ತಮ್ಮ ಮನವಿಯನ್ನು ತಾಲೂಕು ಉಪ ತಹಶೀಲ್ದಾರರಿಗೆ ನೀಡಿ ಪ್ರತಿಭಟನೆ ಕೈಬಿಟ್ಟರು.

* ಅಷ್ಟಕ್ಕೂ ಸಮಸ್ಯೆ ಏನು
ಹಲವು ದಿನಗಳಿಂದ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿ ಸಮಸ್ಯೆ ಸರಿಪಡಿಸುತವಂತೆ ಅಧಿಕಾರಿಗಳಿಗೆ ತಿಳಿಸಿದ್ದರು, ಆದರೆ ಅಧಿಕಾರಗಳ ನಿರ್ಲಕ್ಷ್ಯದಿಂದ ಹಳ್ಳಿಗಳಿಂದ ಪಟ್ಟಣದ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸೋದು ಮುಂದುವರೆದಿತ್ತು. ಪ್ರತಿನಿತ್ಯ ಬರುವ ಬಸ್ ಬಾರದೇ ಇರುವುದು, ಮಾರ್ಗ ಮಧ್ಯೆ ಬಸ್ ಕೆಟ್ಟು ನಿಂತರೇ ಬದಲಿ ವ್ಯವಸ್ಥೆ ಆಗದೇ ಇರುವುದು,ಬೆಳಿಗ್ಗೆ ಬಂದ ಬಸ್ ಮತ್ತೆ ಸಂಜೆ ಬಾರದೇ ವಿದ್ಯಾರ್ಥಿಗಳು ಮನಗೆ ಹೋಗಲು ತೊಂದರೆ ಅನುಭವಿಸೋದು, ನಿಲುಗಡೆ ಇರುವ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಇರೋದು ಈ ಎಲ್ಲಾ ಕಾರಣಗಳಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲಾಕಾಲೇಜಿಗೆ ಬಾರದೇ,ತರಗತಿ ಕೂರಲು ಆಗದೇ,ಪರೀಕ್ಷೆಗಳನ್ನು ಬರೆಯಲು ತೀವ್ರ ತೊಂದರೆಯಾಗಿದೆ. ಜೊತೆಗೆ ಬಸ್‌ನಲ್ಲಿ ಸಿಬ್ಬಂದಿಗಳು ವಿದ್ಯಾರ್ಥಿಗಳು ಎಂದೊಡನೆ ತಾತ್ಸಾರ ಭಾವನೆಯಿಂದ ವರ್ತಿಸೋದು ಹಲವೆಡೆ ಗಮನಕ್ಕೆ ಬಂದಿರುತ್ತದೆ. ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಪಾಸ್‌ಗಾಗಿ ಮುಂಗಡ ಹಣ ನೀಡಿ ಪಾಸ್ ಪಡೆದರೂ ಪ್ರತಿನಿತ್ಯ ಬಸ್ ಸಂಪರ್ಕ ಸಿಗುತ್ತಿಲ್ಲ,ಬರುವ ಬಸ್ ನಿಲ್ಲಿಸೋದಿಲ್ಲ ಎಂದು ವಿದ್ಯಾರ್ಥಿಗಳು ತಮಗಾಗುತ್ತಿರುವ ತೊಂದರೆಯನ್ನು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.