ಆರಿದ್ರೆಯ ಅಬ್ಬರಕ್ಕೆ ನಲುಗಿದ ಮಲೆನಾಡು..!
– 2 ದಿನಗಳಿಂದ ಕ್ಷಣ ಬಿಡದೆ ಮಳೆ: ಜನಜೀವನಕ್ಕೆ ತೊಂದರೆ
* ದಿನವಿಡೀ ಮಳೆ,ಮನೆಯಿಂದ ಹೊರಬರಲು ಜನರ ಪರದಾಟ
* ಭಾರೀ ಗಾಳಿ,ಮಳೆಗೆ ಎಲ್ಲಾ ಕೆಲಸ ಅಪೂರ್ಣ: ನದಿಗಳು ಫುಲ್
NAMMMUR EXPRESS NEWS
ಮಲೆನಾಡು: ಮಲೆನಾಡು ಭಾಗದಲ್ಲಿ ಕಳೆದರೆಡು ದಿನಗಳಿಂದ ಪ್ರಾರಂಭಗೊಂಡಿರುವ ಆರಿದ್ರಾ ಮಳೆಯ ಅಬ್ಬರಕ್ಕೆ ಮಲೆನಾಡು ಅಕ್ಷರಶಹಃ ನಲುಗಿದೆ.ಆರಿದ್ರಾ ಮಳೆ ಆರದೇ ಹೊಯ್ಯತ್ತೆ ಎಂಬ ಗಾದೆ ಮಾತಿನಂತೆ, ದಿನವಿಡೀ ಸುರಿಯುತ್ತಿರುವ ಭಾರೀ ಮಳೆಗೆ ಜನರು ಮನೆಯಿಂದ ಹೊರಬರಲು ಪರದಾಡುವಂತಾಗಿದೆ.
ಹೌದು,ಭಾರೀ ಮಳೆಯೊಂದಿಗೆ ಬೀಸುತ್ತಿರುವ ಭಾರೀ ಗಾಳಿಯಿಂದ ತೀವ್ರ ಆತಂಕ ಸೃಷ್ಠಿಯಾಗಿದ್ದು, ಮಲೆನಾಡಿನ ಎಲ್ಲಾ ಕೆಲಸಗಳು ಅಪೂರ್ಣವಾಗಿದೆ. ರೈತರು ಈ ಸಂದರ್ಭದಲ್ಲಿ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸೋ ಕಾರ್ಯ ಪ್ರಾರಂಭಿಸಿದ್ದರು. ಆದರೆ ಈ ಮಳೆ ಗಾಳಿಯ ಆರ್ಭಟದಿಂದಾಗಿ ಎಲ್ಲವೂ ಅರ್ಧಕ್ಕೆ ನಿಂತಿದೆ. ಗಾಳಿಯಿಂದ ಅನೇಕ ಕಡೆ ಮರಗಳು ಧರೆಗುರುಳುತ್ತಿದೆ,ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು,ನೀರಿನ ಒಳಹರಿವು ಹೆಚ್ಚಿದೆ.
ಭಾರೀ ಮಳೆ ಕಾರಣ ಜನ ಮನೆಯಿಂದ ಹೊರ ಬಾರದೆ ಮನೆಯಲ್ಲಿ ಕೂರುವಂತಾಗಿದೆ. ಅಲ್ಲಲ್ಲಿ ಅನಾಹುತ, ಅಪಘಾತ ಸಂಭವಿಸುತ್ತಿದೆ.