Categories
ತೀರ್ಥಹಳ್ಳಿ

ತೀರ್ಥಹಳ್ಳಿ ಮೊಗವೀರ ಮಹಾಜನ ಸಂಘದಲ್ಲಿ ಸಂಭ್ರಮ!

ತೀರ್ಥಹಳ್ಳಿ ಮೊಗವೀರ ಮಹಾಜನ ಸಂಘದಲ್ಲಿ ಸಂಭ್ರಮ!
– ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ನೋಟ್ ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
– ನೂತನವಾಗಿ ನಿರ್ಮಿಸಲಾದ ಮಹಾಲಕ್ಷ್ಮೀ ಸಭಾಭವನದ ಉದ್ಘಾಟನೆ

NAMMUR EXPRESS NEWS
ತೀರ್ಥಹಳ್ಳಿ: ಮೊಗವೀರ ಮಹಾಜನ ಸಂಘ, (ರಿ.) ತೀರ್ಥಹಳ್ಳಿ ಮೊಗವೀರ ಯುವ ಮತ್ತು ಮಹಿಳಾ ಸಂಘಟನೆ ತೀರ್ಥಹಳ್ಳಿ,
ಡಾ. ಜಿ ಶಂಕರ್‌ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ಸಹಯೋಗದಲ್ಲಿ ಮಾರುತಿ ಜನ ಸೇವಾ ಸಂಘ ಮತ್ತು ಮಾರುತಿಯುವಕ ಸಂಘ ಉಲ್ಲಾಲ ಇವರ ವತಿಯಿಂದ ಮೊಗವೀರ ಸಮುದಾಯದ ವಿದ್ಯಾರ್ಥಿಗಳಿಗೆ,ವಿದ್ಯಾರ್ಥಿವೇತನ ಮತ್ತು ನೋಟ್ ಬುಕ್ ವಿತರಣಾ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ತೀರ್ಥಹಳ್ಳಿ ತಾಲ್ಲೂಕು ಮೊಗವೀರ ಮಹಾಜನ ಸಂಘದ ಸರ್ವಸದಸ್ಯರ ಮಹಾಸಭೆ ಜೂನ್ 22ರ ಭಾನುವಾರ ತುಂಗಾ ತೀರದ ಮಾಧವ ಮಂಗಲ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಸೊಪ್ಪುಗುಡ್ಡೆ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಇದೇ ಸಂದರ್ಭ ನೂತನವಾಗಿ ನಿರ್ಮಿಸಲಾದ ಮಹಾಲಕ್ಷ್ಮೀ ಸಭಾಭವನದ ಉದ್ಘಾಟನೆ
ನಡೆಯಿತು. ಡಾ॥ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ)ನ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕದ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಜಿ ಶಂಕರ್, ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಸಂಘಟನೆಯ ಅಧ್ಯಕ್ಷರಾದ ಜಯ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಯುವ ಸಂಘಟನೆಯ ಜಯಂತ್ ಅಮೀನ್, ತೀರ್ಥಹಳ್ಳಿಯ ಮೊಗವೀರ ಸಂಘ ಅಧ್ಯಕ್ಷರು ಸೊಪ್ಪುಗುಡ್ಡೆ ರಾಘವೇಂದ್ರ, ಮೊಗವೀರ ಮಹಾಜನ ಸಂಘದ ಗೌರವಧ್ಯಕ್ಷರು ಸೀನಣ್ಣ, ಮಹಿಳಾ ಸಂಘಟನೆಯ ಅಧ್ಯಕ್ಷರಾಗಿರುವ ಭಾಗ್ಯ,ಯುವ ಸಂಘಟನೆಯ ಅಧ್ಯಕ್ಷರಾದ ರಾಜೇಶ್, ಕಪಿಲ್, ಶೃಂಗೇರಿ ಮೊಗವಿರ ಮಹಾಜನ ಸಂಘದ ನವೀನ್, ಶಿವಮೊಗ್ಗ ಮೊಗವೀರ ಮಹಾಜನ ಸಂಘದ ಅಧ್ಯಕ್ಷರು ಆಗಿರುವ ಅಣ್ಣಪ್ಪ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಜಿ ಶಂಕರ್ ಅವರಿಗೆ ಸನ್ಮಾನ ಕಾರ್ಯಕ್ರಮ ಕೂಡ ನೆರವೇರಿಸಲಾಯಿತು. ತೀರ್ಥಹಳ್ಳಿ ಸುತ್ತಮುತ್ತಲು ಯಾವುದೇ ವ್ಯಕ್ತಿಗಳಿಗೆ ಕ್ಯಾನ್ಸರ್ ಬಂದರೆ ಕೂಡ ಅಂತವರಿಗೆ ಮೂರು ಲಕ್ಷದವರೆಗೆ ಉಚಿತವಾದಂತಹ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ರಾಘವೇಂದ್ರ ಅವರು ತಿಳಿಸಿದರು. ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದರು. ಸಂಘದ ಎಲ್ಲಾ ಸದಸ್ಯರು, ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.