Categories
ಮಲ್ನಾಡ್

ಮಲೆನಾಡ ಭೂಮಿಗೆ ಚಿನ್ನದ ಬೆಲೆ..!

ಮಲೆನಾಡ ಭೂಮಿಗೆ ಚಿನ್ನದ ಬೆಲೆ..!

ಮಲೆನಾಡು ಎಂದಾಕ್ಷಣ ರಾಜ್ಯ, ದೇಶದ ವಿವಿಧ ಭಾಗಗಳಲ್ಲಿ ಜನರಿಗೆ ಅತ್ಯಂತ ಆಸಕ್ತಿಯುತವಾದ ನಾಡು. ಹಚ್ಚ ಹಸಿರು, ಮಳೆ ಹಾಗೂ ಇಲ್ಲಿನ ಪರಿಸರ, ವಾತಾವರಣ, ಜೀವನ, ಜನರ ಶಾಂತಿಯುತವಾದ ಮಾತು ಇವೆಲ್ಲವೂ ಇಡೀ ದೇಶದಲ್ಲೇ ಗಮನ ಸೆಳೆದಿದೆ. ಮಲೆನಾಡಿನ ಪ್ರಮುಖ ಜಿಲ್ಲೆಗಳಾದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ದಟ್ಟ ಅರಣ್ಯಗಳಿಂದ, ಬೆಟ್ಟ ಗುಡ್ಡ, ಹಳ್ಳ, ಕೊಳ್ಳ, ನದಿ ಹಾಗೂ ಹಸಿರಿನಿಂದ ಕಂಗೊಳಿಸುತ್ತಿದೆ.

ಮಲೆನಾಡು ಅಂದ್ರೆ ಎಲ್ಲರಿಗೂ ಇಷ್ಟ..!

ಮಲೆನಾಡಲ್ಲಿ ಒಂದಷ್ಟು ಜಮೀನು ಮಾಡಬೇಕು, ಸೈಟುಗಳನ್ನು ಖರೀದಿಸಬೇಕು, ತಮ್ಮ ನಿವೃತ್ತ ಜೀವನವನ್ನು ಅತ್ಯಂತ ಸುಂದರವಾಗಿ ಕಳೆಯಬೇಕೆಂಬ ಆಸೆ ಎಲ್ಲರಲ್ಲೂ ಇದೆ. ಈ ಆಸೆಯಿಂದಾಗಿ ಇದೀಗ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಅಡಿಕೆ ತೋಟ, ಮನೆಗಳಿಗೆ ಡಿಮ್ಯಾಂಡ್..!

ಅಡಿಕೆ ತೋಟಗಳು ಹಾಗೂ ಮನೆಗಳನ್ನು ಖರೀದಿ ಮಾಡುವುದು ಅಷ್ಟೊಂದು ಸುಲಭವಾದ ಮಾತಲ್ಲ, ಜೊತೆಗೆ ಸೈಟ್ ದರವು ಬೆಂಗಳೂರು ಮಾರುಕಟ್ಟೆಯಷ್ಟೇ ಬೇಡಿಕೆಯನ್ನು ಪಡೆದುಕೊಂಡಿದೆ. ಅದರಲ್ಲೂ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ, ಚಿಕ್ಕಮಗಳೂರು ಪಟ್ಟಣಗಳಲ್ಲಿ ವರ್ಷದಿಂದ ವರ್ಷಕ್ಕೆ ರಿಯಲ್ ಎಸ್ಟೇಟ್ ದರ ಹೆಚ್ಚಾಗುತ್ತಾ ಇದೆ.

ತೀರ್ಥಹಳ್ಳಿ ಎಲ್ಲರ ಫೇವರಿಟ್!

ಮಲೆನಾಡ ಕೇಂದ್ರ, ಅತೀ ವೇಗವಾಗಿ ಬೆಳೆಯುತ್ತಿರುವ ತೀರ್ಥಹಳ್ಳಿ ಎಲ್ಲರ ನೆಚ್ಚಿನ ಊರು. ಸೌಲಭ್ಯ, ಪ್ರವಾಸೋದ್ಯಮ, ಸಂಪರ್ಕ, ಸಂವಹನ, ಅವಕಾಶದ ವಿಚಾರದಲ್ಲಿ ತೀರ್ಥಹಳ್ಳಿ ಆಗ್ರಪಂಕ್ತಿಯಲ್ಲಿದೆ.
ಆದರೆ ತೀರ್ಥಹಳ್ಳಿಯಲ್ಲಿ ಜಾಗಗಳು ಇಲ್ಲ, ಜಾಗ ಇದ್ದರೂ ಕೂಡ ಅತಿ ಹೆಚ್ಚು ದರ ಹೇಳುತ್ತಾರೆ. ಮಲೆನಾಡಿನ ಸುಂದರ ಪರಿಸರದಲ್ಲಿ ವಾಸಿಸಲು ಎಲ್ಲರೂ ಇಷ್ಟಪಡುತ್ತಿರುವುದರಿಂದ ಅನೇಕ ಮಂದಿ ಹೊರಗಿನ ಭಾಗದಿಂದ ಬಂದು ಇಲ್ಲಿ ಹೂಡಿಕೆಯನ್ನು ಮಾಡುತ್ತಿದ್ದಾರೆ. ಹೀಗಾಗಿ ಭೂಮಿ ಹಾಗೂ ನಿವೇಶನದ ದರ ದುಪ್ಪಟ್ಟಾಗುತ್ತಿದೆ. ಇದರಿಂದಾಗಿ ರಿಯಲ್ ಎಸ್ಟೇಟ್ ಕ್ಷೇತ್ರ ಮಲೆನಾಡಿನಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ.

ಶಿವಮೊಗ್ಗ ಟಾಪ್ ಮಾರುಕಟ್ಟೆ, ಚಿಕ್ಕಮಗಳೂರು ಈಗ ಓಕೆ

ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ, ಎಜುಕೇಷನ್ ಹಬ್, ಪ್ರವಾಸೋದ್ಯಮದ ಕೇಂದ್ರ ಆಗಿರುವ ಶಿವಮೊಗ್ಗದಲ್ಲೂ ರಿಯಲ್ ಎಸ್ಟೇಟ್ ವರ್ಷದಿಂದ ವರ್ಷಕ್ಕೆ ಇರುತ್ತಿದೆ.
ಸುಮಾರು 500ಕ್ಕೂ ಹೆಚ್ಚು ಲೇಔಟ್ ಗಳು ಈ ಎರಡು ಜಿಲ್ಲೆಗಳಲ್ಲಿವೆ. ಬೆಂಗಳೂರು ಹಾಗೂ ರಾಜ್ಯದ ವಿವಿಧ ಮಾದರಿಯ ಕನ್ಸ್ಟ್ರಕ್ಷನ್ ಕಂಪನಿ ಕೂಡ ಇಲ್ಲಿ ಹುಟ್ಟಿಕೊಂಡಿವೆ. ಹೀಗಾಗಿ ಮಲೆನಾಡು ರಿಯಲ್ ಎಸ್ಟೇಟ್ ನಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. ಜೊತೆಗೆ ವಿಶೇಷ ಕಲ್ಪನೆಯ ಮನೆಗಳು ನಿರ್ಮಾಣವಾಗುತ್ತಿದ್ದು ಕನ್ನಕ್ಷನ್ ಕಂಪನಿಗಳ ಬೇಡಿಕೆಯು ಕೂಡ ಹೆಚ್ಚಾಗಿದೆ. ಹೀಗಾಗಿ ರಿಯಲ್ ಎಸ್ಟೇಟ್ ಭರವಸೆಯ ಕ್ಷೇತ್ರವಾಗಿ ಕಾಣುತ್ತಿವೆ.

ಕಂಪನಿ, ಜೆವಿ ವೆಂಚರ್ಸ್, ಕನ್ಸ್ಟ್ರಕ್ಷನ್ ಸಂಸ್ಥೆಗಳ ಲಗ್ಗೆ

ರಿಯಲ್ ಎಸ್ಟೇಟ್ ಕ್ಷೇತ್ರ ಬೆಳೆಯುತ್ತಿದ್ದಂತೆ ಜೊತೆ ಜೊತೆಗೆ ಅನೇಕ ಕಂಪನಿಗಳು, ಉದ್ಯಮಗಳು ಕೂಡ ಈ ಕಡೆ ಕಾಲಿಡುತ್ತಿವೆ. ಹೀಗಾಗಿ ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಾಗಿದೆ. ಇತ್ತೀಚಿಗೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನ ಪ್ರಮುಖ ನಗರಗಳಲ್ಲಿ ಅಪಾಟೆರ್ಂಟ್ ಕಲ್ಪನೆಯೂ ಎಂಟ್ರಿ ಆಗಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.