ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ 721 ಎಕ್ರೆ ಜಮೀನಿಗೆ ಜಂಟಿ ಸರ್ವೆ!
– ದಾಖಲೆಗಳನ್ನು ನೀಡಲು ಸರಕಾರ ಕಂದಾಯ -ಅರಣ್ಯ ಇಲಾಖೆ ನೇತತ್ವದಲ್ಲಿ ಜಂಟಿ ಸಭೆ ನಡೆಯಿಸಿ ವರದಿ ಕೊಡಲು ಆದೇಶ
– ತಾಲೂಕು ಕಛೇರಿಯಲ್ಲಿ ರೈತರು ಸಾರ್ವಜನಿಕರಿಗೆ ದಾಖಲೆಗಳನ್ನು ಸರಿಯಾಗಿ ನೀಡದೆ ಸಂಕಷ್ಟ!?
– ಬೇಜಾವಾಬ್ದಾರಿಯಾಗಿ ಕೆಲಸ ಮಾಡುವ ನೌಕರರನ್ನು ತರಾಟೆ ತೆಗೆದುಕೊಂಡ : ಶಾಸಕ ಆರಗ ಜ್ಞಾನೇಂದ್ರ
NAMMUR EXPRESS NEWS
ತೀರ್ಥಹಳ್ಳಿ : ನಾಡಿಗಾಗಿ ಬೆಳಕು ನೀಡಲು ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಲುವಾಗಿ 65 ವರ್ಷಗಳ ಹಿಂದೆ ತಮ್ಮ ಮನೆ ಗದ್ದೆ ತೋಟ ಜಮೀನು ದೇವರ ಮನೆಗಳನ್ನು ಬಿಟ್ಟು ಬಂದಂತಹ ವರಾಹಿ ಚಕ್ರಾ ಸಾವೇಹಕ್ಕಲು ಭಾಗದ ರೈತಾಪಿ ಕುಟುಂಬದವರು ಹಣಗೆರೆ ಗ್ರಾಮ ಪಂಚಾಯಿತಿಯ ಹಣಗೆರೆ ಆರನಲ್ಲಿ ಶಿರನಲ್ಲಿ ಕೊಂಬಿನ ಕೈ ಅಲಸೆ ಇನ್ನಿತರ ಭಾಗದಲ್ಲಿ ವಾಸಿಸುತ್ತಿದ್ದು ಅಂದಿನಿಂದ ಇಂದಿನವರೆಗೆ ಅವರು ವಾಸಿಸುತ್ತಿರುವ ಮನೆ ಜಮೀನು ತೋಟ ಗದ್ದೆಗಳಿಗೆ ಸರಕಾರ ದಾಖಲೆಗಳನ್ನು ನೀಡಿರಲಿಲ್ಲ. ಇದಕ್ಕಾಗಿ ಬಹಳ ಹೋರಾಟ,ಅಧಿಕಾರಿ, ಜನಪ್ರತಿನಿಧಿಗಳ ಸಭೆ ನಡೆಯಿಸಲಾಗಿತ್ತು. ಆದರೆ ಈಗ ಇದರ ದಾಖಲೆಗಳನ್ನು ನೀಡಲು ಸರಕಾರ ಕಂದಾಯ -ಅರಣ್ಯ ಇಲಾಖೆ ನೇತತ್ವದಲ್ಲಿ ಜಂಟಿ ಸಭೆ ನಡೆಯಿಸಿ ವರದಿ ಕೊಡಲು ಆದೇಶ ಹೊರಡಿಸಿದೆ. ಇದರ ಸಲುವಾಗಿ ದಿನಾಂಕ 5-4-2025 ರ ಶನಿವಾರ ತೀರ್ಥಹಳ್ಳಿ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಹಣಗೆರೆ ಭಾಗದ ಚಕ್ರಾ ವರಾಹಿ ಸಾವೇಹಕ್ಕಲು ಸಂತ್ರಸ್ತರ ಸಭೆಯನ್ನು ಶಾಸಕ ಆರಗ ಜ್ಞಾನೇಂದ್ರ ರವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ್ ರಂಜಿತ್ ಕುಮಾರ್ ರವರು ಆಯೋಜಿಸಿದ್ದರು. 721 ಎಕ್ರೆ ಜಮೀನನ್ನು ಕಂದಾಯ -ಅರಣ್ಯ ಇಲಾಖೆಯವರು ಜಂಟಿಯಾಗಿ ಸರ್ವೆ ನಡೆಯಿಸಿ ಅಲ್ಲಿ ವಾಸವಾಗಿ ಗದ್ದೆ ತೋಟ ಜಮೀನು ಮಾಡಿಕೊಂಡಿರುವ ರೈತರ ದಾಖಲೆಗಳನ್ನು ಸರಕಾರಕ್ಕೆ ನೀಡಲಿದ್ದಾರೆ. ಅವರುಗಳು ಬಂದಾಗ ಜಮೀನು ಮಾಡಿ ಕೊಂಡಿರುವವರು ಸ್ಥಳದಲ್ಲಿದ್ದು ಸರ್ವೆ ಕಾರ್ಯ ಮುಗಿದ ನಂತರ ಆಧಾರ್ ಕಾರ್ಡು ಜೆರಾಕ್ಸ್ ನೀಡಿ ಸಹಿ ಹಾಕಬೇಕು. ರೈತಾಪಿ ವರ್ಗದವರು ಇದಕ್ಕೆ ಸಹಕರಿಸಿ. ನಿಮ್ಮ ಸಮಸ್ಯೆಗಳೇನೇ ಇದ್ದರೂ ಅದನ್ನು ಬಗೆಹರಿಸಿಕೊಳ್ಳೋಣ ಎಂದು ಶಾಸಕ ಆರಗ ಜ್ಞಾನೇಂದ್ರ ರವರು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ತಹಶೀಲ್ದಾರ್ ರಂಜಿತ್ ಕುಮಾರ್ ಶಿರಸ್ತೆದಾರ್ ಸತ್ಯಮೂರ್ತಿ ಕಂದಾಯ – ಅರಣ್ಯ ಇಲಾಖೆಯವರು. ಮುಖಂಡರಾದ ಬೇಗುವಳ್ಳಿ ಸತೀಶ್ ಸಾರಿಕೊಪ್ಪ ರಾಮಚಂದ್ರ, ಹಣಗೆರೆ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ, ಮಾಜಿ ಅಧ್ಯಕ್ಷ ಅಶೋಕ್ ಮುಖಂಡರುಗಳಾದ ಚೆನ್ನವೀರಪ್ಪ ರಾಜು ಶೆಟ್ಟಿ ಕಲ್ಲು ಕೊಪ್ಪ, ರಾಮಪ್ಪ ಕೆರೆಹಳ್ಳಿ. ಸುಧಾಕರ, ಮಂಜಪ್ಪ ಇನ್ನಿತರರು ಉಪಸ್ಥಿತರಿದ್ದರು.
ರೈತರು ಸಾರ್ವಜನಿಕರಿಗೆ ದಾಖಲೆಗಳನ್ನು ಸರಿಯಾಗಿ ನೀಡದೆ ಸಂಕಷ್ಟ
ತಹಶೀಲ್ದಾರ್ ಕಛೇರಿಯ ನೌಕರ ವರ್ಗದವರು ರೈತರು ಹಾಗೂ ಸಾರ್ವಜನಿಕರ ದಾಖಲೆಗಳನ್ನು ಸರಿಯಾಗಿ ಒದಗಿಸದೆ ಸತಾಯಿಸುವುದನ್ನು ಗಮನಿಸಿದ ಶಾಸಕ ಆರಗ ಜ್ಞಾನೇಂದ್ರ ರವರು ಅಧಿಕಾರಿ ವರ್ಗದವರನ್ನು ತರಾಟೆ ತೆಗೆದುಕೊಂಡ ಘಟನೆ ದಿನಾಂಕ 5-4-2025ರಂದು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ನಡೆದಿದೆ. ಕೇವಲ ಬ್ರೋಕರ್ ಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡಿಕೊಡುವ ಈ ಕಛೇರಿಯ ಸಿಬ್ಬಂದಿಗಳು ರೈತಾಪಿ ವರ್ಗದವರಿಗೆ ಸೂಕ್ತ ಮಾರ್ಗದರ್ಶನ ನೀಡದೆ ಪ್ರತಿ ಬಾರಿ ಕಛೇರಿಗೆ ಅಲೆದಾಡಿಸುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಜನರು ರೋಸಿ ಹೋಗಿದ್ದಾರೆ. ಶಾಸಕರು ಏನು ಮಾಡುತ್ತಿದ್ದಾರೆ ಅಂತ ಜನ ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಕಛೇರಿಯ ಸಿಬ್ಬಂದಿಗಳು ರೈತಾಪಿ ಕುಟುಂಬದಿಂದ ಬಂದವರು ನಾನು ಹಾಗಾಗಿ ಕಛೇರಿಗೆ ಬರುವ ರೈತರಿಗೆ ಸರಿಯಾದ ಮಾಹಿತಿ ನೀಡಿ ಅವರ ಕೆಲಸಗಳನ್ನು ಸೂಕ್ತ ಸಮಯದಲ್ಲಿ ಮಾಡಿ ಕೊಡಿಯೆಂದು ಶಾಸಕ ಆರಗ ಜ್ಞಾನೇಂದ್ರ ರವರು ತಿಳಿಸಿದರು. ಈ ಸಂಧರ್ಭದಲ್ಲಿ ತಹಶೀಲ್ದಾರ್ ರಂಜಿತ್ ಕುಮಾರ್. ಶಿರಸ್ತೆದಾರ್ ಸತ್ಯಮೂರ್ತಿ, ಮುಖಂಡರುಗಳಾದ ಬೇಗುವಳ್ಳಿ ಸತೀಶ್, ಸಾಲೆಕೊಪ್ಪ ರಾಮಚಂದ್ರ, ಹಣಗೆರೆ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು.
