Categories
ಮಲ್ನಾಡ್ ಶಿವಮೊಗ್ಗ

ಸಹಕಾರ ಕಾಂಗ್ರೆಸ್ ಯೂನಿಯನ್ ಕಾಂಗ್ರೆಸ್ ಬೆಂಬಲಿತರ ಪಾಲು!

ಸಹಕಾರ ಕಾಂಗ್ರೆಸ್ ಯೂನಿಯನ್ ಕಾಂಗ್ರೆಸ್ ಬೆಂಬಲಿತರ ಪಾಲು!
– ಮತ್ತೆ ಸಹಕಾರ ಕ್ಷೇತ್ರದಲ್ಲಿ ಕಿಂಗ್ ಮೇಕರ್ ಆದ ಮಂಜುನಾಥ ಗೌಡ
– 14 ಸ್ಥಾನದಲ್ಲಿ 10 ಸ್ಥಾನ ಗೆದ್ದ ಕಾಂಗ್ರೆಸ್ ಬೆಂಬಲಿಗರು

NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಹಕಾರ ಸಂಘಗಳ ಮಾತೃ ಸಂಸ್ಥೆ ಜಿಲ್ಲಾ ಸಹಕಾರ ಯೂನಿಯನ್ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ನಡೆದಿದ್ದು, ಕೊನೆಗೂ ಸಹಕಾರ ನಾಯಕರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡರ ಕೈ ಮೇಲಾಗಿದೆ.
14 ನಿರ್ದೇಶಕರ ಪೈಕಿ 10 ಮಂದಿ ನಿರ್ದೇಶಕರು ಡಾ.ಮಂಜುನಾಥ್ ಗೌಡ ಬೆಂಬಲಿಗರಾಗಿದ್ದಾರೆ. ಬಿಜೆಪಿ ಈ ಸ್ಥಾನಕ್ಕೆ ಭಾರೀ ಪೈಪೋಟಿ ನಡೆಸಿದರೂ ಪ್ರಯೋಜನ ಆಗಲಿಲ್ಲ.
ಸಹಕಾರ ಯೂನಿಯನ್ ಜಿಲ್ಲೆಯ ಎಲ್ಲಾ ಸಹಕಾರ ಸಂಸ್ಥೆಗಳಿಗೂ ಮಾತೃ ಸಂಸ್ಥೆ ಯಾಗಿದ್ದು ಶಿವಮೊಗ್ಗದಲ್ಲಿ ಕೇಂದ್ರ ಕಚೇರಿ ಇದೆ. ಬಿರುಸಿನ ಸ್ಪರ್ಧೆಯಲ್ಲಿ ಬಿಜೆಪಿ ಸಂಸದರು, ಶಾಸಕರು ಹಾಗೂ ಜಿಲ್ಲಾ ನಾಯಕರು ಈ ಬಾರಿ ಭಾರೀ ತಂತ್ರಗಾರಿಕೆ ಮಾಡಿದ್ದರು. ಆದರೂ ಡಾ.ಮಂಜುನಾಥ ಗೌಡ ನಾಯಕತ್ವದಲ್ಲಿ 10 ಮಂದಿ ಸದಸ್ಯರು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷರು ಹಾಗೂ ಪ್ರಮುಖರು ಕೂಡ ಈ ಚುನಾವಣೆಯಲ್ಲಿ ಕೆಲಸ ಮಾಡಿದ್ದರೂ ಕಾಂಗ್ರೆಸ್ ನಾಯಕರು ಚುನಾವಣೆ ವೇಳೆ ಕಾಣದೇ ಇರುವುದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ.
ಸಹಕಾರಿ ಯೂನಿಯನ್ ಚುನಾವಣೆಯಲ್ಲಿ ಗೆದ್ದ ಮಂಜುನಾಥ್ ಗೌಡ ಅವರ ಬೆಂಬಲಿತ ಅಭ್ಯರ್ಥಿಗಳು ಡಿಸಿಸಿ ಆವರಣಕ್ಕೆ ಆಗಮಿಸಿ ಮಂಜುನಾಥ್ ಗೌಡರಿಗೆ ಹಾರ ಪುಷ್ಪಗೋಚಗಳನ್ನ ನೀಡಿ ತಮ್ಮ ಸಹಕಾರಕ್ಕೆ ಅಭಿನಂದಿಸಿ ಸಂತಸ ಹಂಚಿಕೊಂಡರು.
ವಿಜೇತ ಅಭ್ಯರ್ಥಿಗಳಾದ ವಾಟಗೋಡು ಸುರೇಶ್, ಎಸ್ ಕೆ ಮರಿಯಪ್ಪ, ಕುಂಚೇನಹಳ್ಳಿ ಜಗದೀಶ್,ಭದ್ರಾವತಿ ಕ್ಷೇತ್ರದ ಬಿ ಕೆ ಶಿವಕುಮಾರ್ ಹನುಮಂತಪ್ಪ, ಅಮೃತೇಶ್,ಅಶೋಕ್, ಪುಷ್ಪ ದಿನೇಶ್ ಇತರರು ಇದ್ದರು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.