Categories
Uncategorized ರಾಜ್ಯ

ಬೆಳಕಿನ ಹಬ್ಬಕ್ಕೂ ಈ ಸಲ ಮಳೆ ಅಡ್ಡಿ!?

ಬೆಳಕಿನ ಹಬ್ಬಕ್ಕೂ ಈ ಸಲ ಮಳೆ ಅಡ್ಡಿ!?
– ಮಲೆನಾಡು, ಕರಾವಳಿ,ಬೆಂಗಳೂರಲ್ಲಿ 3 ದಿನ ಮಳೆ!
– ಅ.15ರಿಂದ 17ರವರೆಗೆ ರೆಡ್ ಅಲರ್ಟ್: ಜನರಿಗೆ ತಲೆಬಿಸಿ
– ಮುಗಿಯದ ಮಳೆಗಾಲ: ರೈತರ ಸ್ಥಿತಿ ಅಯೋಮಯ

NAMMUR EXPRESS NEWS
ಮುಂಗಾರು ಮಳೆ ಇನ್ನೇನು ಕೆಲವೇ ದಿನಗಳಲ್ಲಿ ಕಡಿಮೆಯಾಗಲಿದ್ದು, ಚಳಿಗಾಲ ಶುರುವಾಗುವ ಸಮಯ. ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ಮುಂದಿನ ಎರಡು-3 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಲರ್ಟ್‌ ನೀಡಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಈ ಎಚ್ಚರಿಕೆ ಮತ್ತಷ್ಟು ವಿಸ್ತರಿಸಿದೆ. ಈಶಾನ್ಯ ಮಾನ್ಸೂನ್ ಆರಂಭವಾಗುವ ಮುನ್ನ ನೈಋತ್ಯ ಮಾನ್ಸೂನ್ ಹಿಂದೆ ಕೊನೆಗೊಳ್ಳುತ್ತಿರುವುದರಿಂದ ಮಳೆ ಬರುವ ಸಾಧ್ಯತೆ ಇದೆ.

ನೈಋತ್ಯ ಮಾನ್ಸೂನ್ ಉತ್ತರ ಕರ್ನಾಟಕದ ಕೆಲವು ಭಾಗಗಳಿಂದ ಹಿಂದೆ ಸರಿದಿದೆ. ಇನ್ನೇನು ಮುಂದಿನ ವಾರದೊಳಗೆ ಇಡೀ ರಾಜ್ಯದಿಂದ ನೈಋತ್ಯ ಮಾನ್ಸೂನ್‌ ಹಿಂದೆ ಸರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದ್ದರಿಂದ ಈ ಸಂದರ್ಭದಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಅಲರ್ಟ್‌ ನೀಡಿದ್ದು, ಹವಾಮಾನ ಇಲಾಖೆ ಕರ್ನಾಟಕಕ್ಕೆ ಯೆಲ್ಲೋ ಅಲರ್ಟ್‌ ಅನ್ನೂ ಘೋಷಣೆ ಮಾಡಿ, ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಬೆಂಗಳೂರು ನಗರ, ಚಾಮರಾಜನಗರ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.