ಮಳೆ ಇಲ್ಲ, ಬಿಸಿಲು ಜೋರು, ಚಳಿ ಶುರು..!
– ಬಿಸಿಲಿಗೆ ಕಂಗೆಟ್ಟ ಜನ: ಸಂಜೆಯಾಗುತ್ತಿದ್ದಂತೆ ಕೊಂಚ ಚಳಿ
– ಹವಾಮಾನದ ಏರುಪೇರು: ಮುಂದೇನು ಎಂಬ ಆತಂಕ..!
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ನದಿ ಕೆರೆಗಳು ಬತ್ತಿ ಹೋಗಿವೆ, ಈಗಾಗಲೇ ಬಿಸಿಲಿನ ಜಳ ಹೆಚ್ಚಿದ್ದು ಗಿಡಗಳು ಒಣಗುತ್ತಿವೆ. ಈ ನಡುವೆ ಮಲೆನಾಡಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ದಗೆ ಹೆಚ್ಚಾಗಿದೆ. 33 ಸೆ. ಮೀ ತಾಪಮಾನ ದಾಖಲಾಗುತ್ತಿದೆ. ಇದರಿಂದಾಗಿ ಜನ ಕಂಗಲಾಗಿದ್ದಾರೆ. ಇನ್ನು ಅಡಿಕೆ ಕೊಯ್ಲು ಸೀಸನ್ ಆಗಿರುವುದರಿಂದ ಜನತೆ ಈಗಾಗಲೇ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಜೊತೆಗೆ ಭತ್ತದ ಗದ್ದೆಗಳಲ್ಲಿ ಕೂಡ ಕೃಷಿ ಚಟುವಟಿಕೆ ಜೋರಾಗಿದೆ. ಈ ನಡುವೆ ನೀರಿಲ್ಲದೆ ಗಿಡಗಳು ಒಣಗುವ ಸಾಧ್ಯತೆ ಹೆಚ್ಚಿದೆ. ಇನ್ನೂ ಚಳಿ ಕೂಡ ಶುರುವಾಗಿದ್ದು ಹವಾಮಾನದಲ್ಲಿ ವೈಪರಿತ್ಯ ಉಂಟಾಗಿದೆ. ಇನ್ನು ಹಲವರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದೆ. ಹೀಗಾಗಿ ಮುಂದೆ ನೀರಿಗೆ ಅಭಾವ ಉಂಟಾಗುವ ಆತಂಕ ಕೂಡ ಎದುರಾಗಿದೆ.
