ತೀರ್ಥಹಳ್ಳಿಯಲ್ಲಿ ನೂತನ ಚಿಟ್ಸ್ ಫಂಡ್ಸ್ ಶುರು
– ವಿಜಯದಶಮಿಯಂದು ಸಪ್ತಸಿರಿ ಚಿಟ್ಸ್ ಫಂಡ್ಸ್ ಉದ್ಘಾಟನೆ
– ತೀರ್ಥಹಳ್ಳಿಯ ಪ್ರಸಿದ್ಧ ಉದ್ಯಮಿಗಳ ಉದ್ಯಮ
– ಸರ್ವರಿಗೂ ಸ್ವಾಗತ ಕೋರಿದ ಆಡಳಿತ ಮಂಡಳಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅನೇಕ ಉದ್ಯಮಗಳು ಹುಟ್ಟಿ ಬೆಳೆದಿವೆ. ಜೊತೆಗೆ ಅನೇಕರ ಅಭಿವೃದ್ಧಿಗೆ ಕಾರಣವಾಗಿವೆ. ಈ ನಡುವೆ ತೀರ್ಥಹಳ್ಳಿಯಲ್ಲಿ ಮತ್ತೊಂದು ಹೊಸ ಉದ್ಯಮ ವಿಜಯದಶಮಿ ಎಂದು ಉದ್ಘಾಟನೆಗೊಳ್ಳಲಿದೆ.
ಸಪ್ತ ಸಿರಿ ಚಿಟ್ಸ್ ಫಂಡ್ ಪ್ರೈವೇಟ್ ಲಿಮಿಟೆಡ್ ಎಂಬ ನೂತನ ಉದ್ಯಮ ತೀರ್ಥಹಳ್ಳಿಯ ಗಾಂಧಿ ಚೌಕ ಸಮೀಪದ ಅನ್ನಪೂರ್ಣ ಜ್ಯುವೆಲ್ಲರಿ ಕಟ್ಟಡದ ಮೇಲ್ಭಾಗದಲ್ಲಿ ಶುರುವಾಗಲಿದೆ. ಅಕ್ಟೋಬರ್ 24ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ. ಈಗಾಗಲೇ ಉದ್ಯಮ ಕ್ಷೇತ್ರದಲ್ಲಿ ತೀರ್ಥಹಳ್ಳಿಯಲ್ಲಿ ಚಾಪು ಮೂಡಿಸಿರುವ ಎಮ್ ಚಂದ್ರಶೇಖರ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅನ್ನಪೂರ್ಣ ಜ್ಯುವೆಲ್ಲರಿಯ ಹೆಚ್ ಎಂ ದಿನೇಶ್ ನಿರ್ದೇಶಕರಾಗಿದ್ದಾರೆ. ಯುವ ಉದ್ಯಮಿ ಅಮರನಾಥ್ ಶೆಟ್ಟಿ , ಪತ್ರಕರ್ತ ರಾಘವೇಂದ್ರ ಮೇಗರವಳ್ಳಿ, ಪ್ರಮುಖರಾದ ಶ್ರೀನಾಥ್ ಮೇಲಿನ ಕೊಪ್ಪ, ತಾರಾನಾಥ್ ಹೆಚ್ ವಿ, ಯುವ ಮುಖಂಡರಾದ ಪ್ರದೀಪ್ ಕೆಳಕೆರೆ ನಿರ್ದೇಶಕರಾಗಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 24ರಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಸಹಕಾರಿ ನಾಯಕರದ ಡಾ. ಆರ್ ಎನ್ ಮಂಜುನಾಥ ಗೌಡ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ಹಿರಿಯ ಸಹಕಾರಿಗಳು ರಾಜ್ಯ ಅಪೇಕ್ಸ್ ಬ್ಯಾಂಕಿನ ನಿರ್ದೇಶಕರಾದ ಬಸವಾನಿ ವಿಜಯದೇವ್, ಸಹಕಾರಿ ಕ್ಷೇತ್ರದ ಪ್ರಮುಖರಾದ ನಾಗರಾಜ್ ಶೆಟ್ಟಿ, ಬಾಳೆಬೈಲು ರಾಘವೇಂದ್ರ, ರಾಘವೇಂದ್ರ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಉದ್ಯಮಿಗಳಾದ ನ್ಯಾಷನಲ್ ಸಮೂಹ ಸಂಸ್ಥೆಯ ಪ್ರಮುಖರಾದ ಇಬ್ರಾಹಿಂ ಶರೀಫ್, ವಿ ಟೆಕ್ ಇಂಜಿನಿಯರ್ ಸಂಸ್ಥೆಯ ವಿಶ್ವನಾಥ್ ಕುಂಟವಳ್ಳಿ, ವರ್ತಕ ಸಂಘದ ಅಧ್ಯಕ್ಷರಾದ ಚೈತನ್ಯ ಜವಳಿ, ದಿವ್ಯ ಚೇತನ ಸಹಕಾರಿ ಸಂಸ್ಥೆಯ ಪ್ರಮುಖ ಅಧ್ಯಕ್ಷರಾದ ಜಿನ್ ವಿಕ್ಟರ್ ಡಿಸೋಜ , ಉದ್ಯಮಿಗಳು ಮುಖಂಡರಾದ ಆರ್ ಮದನ್, ಒಕ್ಕಲಿಗ ಸಂಘದ ನಿರ್ದೇಶಕರಾದ ಎಸ್ ಕೆ ಧರ್ಮೇಶ್, ರಾಜ್ಯ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಕಾರ್ಯಧ್ಯಕ್ಷರಾದ ಮುಡುಬ ರಾಘವೇಂದ್ರ, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಟಿ ವಿ ಸತೀಶ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್ ಹೆಗಡೆ, ಸೇರಿದಂತೆ ತೀರ್ಥಹಳ್ಳಿಯ ಪ್ರಮುಖರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಪ್ತಸಿರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ನ ಎಲ್ಲಾ ನಿರ್ದೇಶಕರು ಸರ್ವರನ್ನು ಸ್ವಾಗತಿಸಿದ್ದಾರೆ.
