Categories
ಮಲ್ನಾಡ್

ತೀರ್ಥಹಳ್ಳಿ : ತೀರ್ಥಹಳ್ಳಿ ಗಡಿಗೆ ಬಂದ ಕಾಡಾನೆ..!?

ಮಲ್ನಾಡ್ ಟಾಪ್ 4 ನ್ಯೂಸ್

ತೀರ್ಥಹಳ್ಳಿ : ತೀರ್ಥಹಳ್ಳಿ ಗಡಿಗೆ ಬಂದ ಕಾಡಾನೆ..!?
– ಸಾಗರ: ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ..!!
– ಹೊಳೆಹೊನ್ನೂರು: ಗಣಪತಿ ಬಿಡುವಾಗ ನೀರಲ್ಲಿ ಮುಳುಗಿ 10 ವರ್ಷದ ಬಾಲಕ ಸಾವು..!!
– ಶೃಂಗೇರಿ: ಕಾಲು ಜಾರಿ ಹೊಳೆಗೆ ಬಿದ್ದ ವ್ಯಕ್ತಿಯ ಮೃತದೇಹ ಪತ್ತೆ..!!

NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ತಾಲೂಕಿನ ಗಡಿಯಲ್ಲಿ ಮತ್ತೊಂದು
ಕಾಡಾನೆ ಎಂಟ್ರಿಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದ್ದು ಶೃಂಗೇರಿ ಮಾರ್ಗವಾಗಿ ಕಾಡಾನೆ ತೀರ್ಥಹಳ್ಳಿ ಕಡೆಗೆ ಆಗಮಿಸುತ್ತಿದ್ದು, ಇದೀಗ ಆನೆ ಬೇಗಾರು – ಹೊಳೆಕೊಪ್ಪ ಸಮೀಪ ಇದೆ. ಬಹುತೇಕ ಆಗುಂಬೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಎಂದು ಹೇಳಲಾಗುತ್ತಿದೆ. ಬೇಗಾರಿನಿಂದ ಕಮ್ಮರಡಿ ಮಾರ್ಗವಾಗಿ ಆಗುಂಬೆ ಅಥವಾ ದೇವಂಗಿ ಈ ಎರಡು ಕಡೆಯಲ್ಲಿ ಯಾವ ಕಡೆ ಬೇಕಾದರೂ ಹೋಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಕಾಡಾನೆ ಬಂದಿದೆ.

– ಸಾಗರ: ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ..!!

ಸಾಗರ : ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಗ್ರಾಮದಲ್ಲಿ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಂಜಿತಾ (28) ನೇಣು ಬಿಗಿದುಕೊಂಡ ಯುವತಿ. ಮನೆಯಲ್ಲಿ ಯಾರು ಇಲ್ಲದಿದ್ದಾಗ ಮನೆಯ ಜಗುಲಿಯಲ್ಲಿ ರಂಜಿತಾ ರವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಮೃತರ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

– ಹೊಳೆಹೊನ್ನೂರು: ಗಣಪತಿ ಬಿಡುವಾಗ ನೀರಲ್ಲಿ ಮುಳುಗಿ 10 ವರ್ಷದ ಬಾಲಕ ಸಾವು..!!

ಹೊಳೆಹೊನ್ನೂರು: ಗಣಪತಿ ಬಿಡುವ ವೇಳೆ ನೀರಿನಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ಕುರುಬರ ವಿಠಲಾಪುರದಲ್ಲಿ ನಡೆದಿದೆ. ಇಟ್ಟಿಗೆಹಳ್ಳಿಯ ಕುಶಾಲ್ (10) ಮೃತ ಬಾಲಕ. ಕುರುಬರ ವಿಠಲಾಪುರದ ಬೀದಿಯ ಪುಟಾಣಿ ಮಕ್ಕಳು ಮಣ್ಣು ಬಳಸಿ ತಾವೇ ಸ್ವತಃ ಗಣಪನ ಮೂರ್ತಿ ತಯಾರು ಮಾಡಿ ಪೂಜೆ ಸಲ್ಲಿಸಿದ್ದರು. ಸೋಮವಾರ ಸಂಜೆ ವೇಳೆಗೆ ಗಣಪನನ್ನು ಭದ್ರಾ ನಾಲೆಗೆ ವಿಸರ್ಜನೆ ಮಾಡುವಾಗ ಅವಘಡ ನಡೆದಿದೆ. ಪಾಲಕರಿಗೆ ತಿಳಿಸದೆ ಮೂರು ಮಕ್ಕಳು ನಾಲೆಗೆ ತೆರಳಿದ್ದಾರೆ ಎನ್ನಲಾಗುತ್ತಿದ್ದು. ನಾಲೆಯಲ್ಲಿ ಗಣಪತಿ ಬಿಡುವಾಗ ಆಯಾತಪ್ಪಿದ ಬಾಲಕ ಕುಶಾಲ್ ನಾಲೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ. ಸ್ಥಳೀಯರು ನಾಲೆಯಲ್ಲಿ ಹುಡುಕಾಡಿ ಶವ ಹೋರ ತೆಗೆದಿದ್ದಾರೆ‌. ಇಟ್ಟಿಗೆಹಳ್ಳಿಯಲ್ಲಿ ಬಾಲಕ ಕುಶಾಲ್‌ನ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

– ಶೃಂಗೇರಿ: ಕಾಲು ಜಾರಿ ಹೊಳೆಗೆ ಬಿದ್ದ ವ್ಯಕ್ತಿಯ ಮೃತದೇಹ ಪತ್ತೆ..!!

ಶೃಂಗೇರಿ: ಕಾಲು ಜಾರಿ ಹೊಳೆಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಸಿಕ್ಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬುಕ್ಕಡಿಬೈಲು ಸಮೀಪದ ಮಿನಿಗರಡಿಯ ಚಂದ್ರೆ ಗೌಡ (28) ಎಂಬುವವರು ಕಳೆದ ಗುರುವಾರ (28.08.2025) ದಂದು ಮನೆಗೆ ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದರು. ಮಂಗಳವಾರ ಅವರ ಮೃತದೇಹ ಪತ್ತೆಯಾಗಿದೆ. ಶೃಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.