Categories
ಮಲ್ನಾಡ್

ತೀರ್ಥಹಳ್ಳಿ : ಸಾಲಬಾಧೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ..!!

ಮಲ್ನಾಡ್ ಟಾಪ್ 4 ನ್ಯೂಸ್

ತೀರ್ಥಹಳ್ಳಿ : ಸಾಲಬಾಧೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ..!!
– ಶಿವಮೊಗ್ಗ: ಬೈಕ್ ಮತ್ತು ನಂದಿನಿ ಹಾಲಿನ ವಾಹನದ ನಡುವೆ ಭೀಕರ ಅಪಘಾತ, ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು..!
– ರಿಪ್ಪನ್ ಪೇಟೆ : ಬಾವಿಗೆ ಬಿದ್ದು ಯುವಕ ಸಾವು..!!
– ಶಿವಮೊಗ್ಗ : ಶಾಲೆಯೊಂದರ ಗೇಟ್ ಮುರಿದ ದುಷ್ಕರ್ಮಿಗಳು, ದಾಖಲೆ ಸಂಪೂರ್ಣ ನಾಶ

NAMMUR EXPRESS NEWS
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿಯ ಲಾರಿ ಮಾಲೀಕರೊಬ್ಬರು ಮಂಗಳವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಲಾರಿ ಮಾಲೀಕರದ ಮೇಗರವಳ್ಳಿಯ ಮಂಜುನಾಥ್ (42) ಸಾಲಬಾಧೆಯಿಂದ ಮನನೊಂದು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಅವಿವಾಹಿತರಾಗಿದ್ದು ಎನ್ನಲಾಗಿದ್ದು ಸಾವಿಗೆ ನಿಖರವಾದ ಮಾಹಿತಿ ಪೊಲೀಸ್ ಮಹಜರಿನ ನಂತರ ತಿಳಿದು ಬರ ಬೇಕಿದೆ. ಇತ್ತೀಚಿಗೆ ಮೇಲಿನಕುರುವಳ್ಳಿಯಲ್ಲೂ ಇದೆ ರೀತಿ ಪ್ರಕರಣ ನಡೆದಿತ್ತು. ಒಂದೇ ತಿಂಗಳಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿದೆ.

– ಶಿವಮೊಗ್ಗ: ಬೈಕ್ ಮತ್ತು ನಂದಿನಿ ಹಾಲಿನ ವಾಹನದ ನಡುವೆ ಭೀಕರ ಅಪಘಾತ, ಎಂಬಿಬಿಎಸ್ ವಿದ್ಯಾರ್ಥಿಗಳು ಸಾವು..!

ಶಿವಮೊಗ್ಗ : ನಗರದ ಸರ್ಕ್ಯೂಟ್ ಹೌಸ್ ಸರ್ಕಲ್‌ನಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಬೈಕ್ ಮತ್ತು ನಂದಿನಿ ಹಾಲಿನ ವಾಹನ ಮುಖಾಮುಖಿ ಡಿಕ್ಕಿಯಾಗಿವೆ. ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಸಂದೀಪ್ ಮೃತರು ನಂದಿನಿ ಹಾಲಿನ ವಾಹನ ಮತ್ತು ಬೈಕ್ ಡಿಕ್ಕಿಯಾಗಿ ಆದಿತ್ಯ ಮತ್ತು ಸಂದೀಪ್ ಕೆಳಗೆ ಬಿದ್ದು ಗಾಯಗೊಂಡು, ತೀವ್ರ ರಕ್ತಸ್ರಾವ ಉಂಟಾಗಿದೆ. ರಸ್ತೆ ಮೇಲೆ ರಕ್ತ ಮಡುವಿನಲ್ಲಿ ಒಬ್ಬರ ಮೇಲೊಬ್ಬರು ಬಿದ್ದು ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು ಹಾಲಿನ ವಾಹನದಲ್ಲಿದ್ದ ಹಾಲಿನ ಕ್ರೇಟ್‌ಗಳೆಲ್ಲ ಕೆಳಗೆ ಬಿದ್ದು ಪ್ಯಾಕೆಟ್‌ಗಳು ಒಡೆದು ಹಾಲು ರಸ್ತೆಯ ಮೇಲೆ ಹರಿದಿದೆ. ಪಶ್ಚಿಮ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದು ಯುವಕರ
ಮೃತದೇಹಗಳನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

– ರಿಪ್ಪನ್ ಪೇಟೆ : ಬಾವಿಗೆ ಬಿದ್ದು ಯುವಕ ಸಾವು..!!

ರಿಪ್ಪನ್ ಪೇಟೆ : ಇಲ್ಲಿನ ನೆವಟೂರು ಗ್ರಾಮದ ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿದ್ದು ಆತ್ಮಹತ್ಯೆಯೋ ಅಥವಾ ಕಾಲುಜಾರಿ ಬಿದ್ದಿದ್ದಾನೋ ಎಂಬ ಶಂಕೆ ವ್ಯಕ್ತವಾಗಿದೆ. ನೆವಟೂರು ಗ್ರಾಮದ ಆನಂದ್ (30) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೃತ ಯುವಕನ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ನೆವಟೂರು ಗ್ರಾಮದ ಭರ್ಮಪ್ಪ ಎಂಬುವವರ ಪುತ್ರನಾದ ಆನಂದ್ ಬೆಳಿಗ್ಗೆಯಿಂದ ಮನೆಯಲ್ಲಿ ಕಾಣದೇ ಇದ್ದ ಕಾರಣ ಹುಡುಕಾಟ ನಡೆಸಲಾಗಿದೆ ಈ ಸಂಧರ್ಭದಲ್ಲಿ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಾಗಿದೆ.

– ಶಿವಮೊಗ್ಗ : ಶಾಲೆಯೊಂದರ ಗೇಟ್ ಮುರಿದ ದುಷ್ಕರ್ಮಿಗಳು, ದಾಖಲೆ ಸಂಪೂರ್ಣ ನಾಶ

ಶಿವಮೊಗ್ಗ : ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಯೊಂದರ ಗೇಟ್ ಅನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಶಾಲೆಯ ದಾಖಲೆಗಳನ್ನು ನಾಶಪಡಿಸಿದ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ತಡವಾಗಿ ತಿಳಿದುಬಂದಿದೆ. ದುಷ್ಕರ್ಮಿಗಳು ಶಾಲೆಯ ಕಬ್ಬಿಣದ ಗೇಟ್‌ನ ಸಲಾಕೆಗಳನ್ನು ಬಗ್ಗಿಸಿ ಒಳಗೆ ಪ್ರವೇಶಿಸಿದ್ದಾರೆ. ನಂತರ ಶಾಲೆಯೊಳಗಿನ ಕಪಾಟುಗಳ ಬಾಗಿಲುಗಳನ್ನು ಮುರಿದು ಹಾಕಿ, ಶಾಲಾ ದಾಖಲೆಪತ್ರಗಳಿಗೆ ಹಾನಿ ಮಾಡಿದ್ದಾರೆ. ಈ ಕೃತ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಇವಿರ್ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.