Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್

ಕಾಂಬೋಡಿಯಾದಲ್ಲಿ ಸಿಲುಕಿದ ಯುವಕ!
– ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಚಿವೆ ಕರಂದ್ಲಾಜೆ ಯತ್ನ
ಭದ್ರಾವತಿಯಲ್ಲಿ ಬಟ್ಟೆ ಅಂಗಡಿಗಯನ್ನೇ ಸುಟ್ಟರು?!
– ಡಿಸೇಲ್ ಹಾಕಿ ಸುಟ್ಟಿದ್ದಾರೆ ಎಂಬ ಆರೋಪ

NAMMUR EXPRESS NEWS
ಚಿಕ್ಕಮಗಳೂರು: ವಿದೇಶದಲ್ಲಿ ಕೆಲಸಕ್ಕೆ ಸೇರಿ ಕೈ ತುಂಬಾ ಸಂಪಾದನೆ ಮಾಡುವ ಉದ್ದೇಶದಿಂದ ಮಲೆನಾಡಿನಿಂದ ವಿದೇಶಕ್ಕೆ ತೆರಳಿದ್ದ ಯುವಕನೋರ್ವ ಇದೀಗ ಅತಂತ್ರನಾಗಿದ್ದಾನೆ. ಸ್ವದೇಶಕ್ಕೆ ತೆರಳಬೇಕಾದರೆ 13 ಲಕ್ಷ ಹಣ ನೀಡುವಂತೆ ಒತ್ತಾಯಿಸುತ್ತಿದ್ದು ಹಣವನ್ನು ನೀಡಲಾಗದೇ ಮಗನ ಸ್ಥಿತಿ ಕಂಡು ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇದೀಗ ಆತನನ್ನು ಭಾರತಕ್ಕೆ ಕರೆ ತರಲು ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಯತ್ನಿಸುತ್ತಿದ್ದಾರೆ.

ಏನಿದು ಘಟನೆ?:

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಹಲ್ಲೋಡು ಗ್ರಾಮದ ಸುರೇಶ್, ಪ್ರೇಮಾ ದಂಪತಿಗಳ ಮಗ ಅಶೋಕ್ ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಹೆತ್ತವರ ಸಂಕಷ್ಟದ ಮಧ್ಯೆಯೂ ಬಿಕಾಂ ಪದವೀಧರನಾಗಿ ಹೆತ್ತವರಿಗೆ ಆಸರೆ ಆಗಲೇಬೇಕೆಂದು ಕೆಲಸಕ್ಕಾಗಿ ವಿದೇಶಕ್ಕೆ ತೆರಳಿ ಇದೀಗ ಅತಂತ್ರನಾಗಿದ್ದಾನೆ. ಬ್ರೋಕರ್ ಗಳಿಂದ ಮೋಸ ಹೋಗಿರುವ ಅಶೋಕ್ ವಿದೇಶದಿಂದ ಸ್ವದೇಶಕ್ಕೆ ವಾಪಾಸ್ ಬರಲಾಗದೆ ಬಂಧಿ ಆಗಿದ್ದಾರೆ.ಈತನಿಗೆ ಡಾಟಾ ಎಂಟ್ರಿ ಆಪರೇಟರ್ ಕೆಲಸ ಕೊಡಿಸುವುದಾಗಿ ಜಿಲ್ಲೆಯ ಎನ್.ಆರ್.ಪುರ ಮೂಲದ ಭರತ್ ಮತ್ತು ನಿಕ್ಷೇಪ್ ಎಂಬುವವರು ನಂಬಿಸಿ ಕಾಂಬೋಡಿಯಾಕ್ಕೆ ಕರೆದುಕೊಂಡು ಹೋಗಿದ್ದಾರೆ.

ಕಾಂಬೋಡಿಯಾಕ್ಕೆ ತೆರಳುವ ಮೊದಲೇ 2 ಲಕ್ಷವನ್ನು ಭರತ್ ಅಂಡ್ ನಿಕ್ಷೇಪ್ ಗೆ ಅಶೋಕ್ ನೀಡಿದ್ದಾರೆ. ಕಾಂಬೋಡಿದಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡ ಬಳಿಕ ಯುವಕ ಅಶೋಕ್‌ಗೆ ಇದು ವಂಚನೆ ಮಾಡುವ ಜಾಲವಾಗಿದ್ದು, ಇಲ್ಲಿಂದ ವಿವಿಧ ಜನರ ಮೊಬೈಲ್ಲೆ ಕರೆ, ಮೆಸೇಜ್ ಮಾಡಿ ಹಣ ಲಪಟಾಯಿಸುವ ದಂಧೆ ಎಂದು ತಿಳಿದಿದೆ. ಆದರೆ ಯುವಕ ಅಶೋಕ್ ನಾನು ಈ ಕೆಲಸವನ್ನು ಮಾಡುವುದಿಲ್ಲ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಕಂಪನಿಯ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಡಿಸೇಲ್ ಹಾಕಿ ಬಟ್ಟೆ ಅಂಗಡಿಗೆ ಬೆಂಕಿ!

ಭದ್ರಾವತಿ: ಅಂಗಡಿಗೆ ಬಾಗಿಲು ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಬಟ್ಟೆ ಅಂಗಡಿಯೊಂದಕ್ಕೆ ಬೆಂಕಿ ಬಿದ್ದಿದ್ದು ಇದೊಂದು ಉದ್ದೇಶ ಪೂರಕವಾಗಿ ನಡೆದಿರುವ ಕೃತ್ಯ ಎಂದು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭದ್ರಾವತಿಯ ಗುಂಡೂರಾವ್ ಸರ್ಕಲ್ ನಲ್ಲಿ ತಿರುಮಲ ಫ್ಯಾನ್ಸಿ ಸ್ಟೋರ್ ಎಂಬ ಅಂಗಡಿಯ ಮುಂಭಾಗದಲ್ಲಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾಗ ಅಂಗಡಿಯ ಶೆಡ್ ಮುಂಭಾಗದಲ್ಲಿ ಡಿಸೇಲ್ ಚೆಲ್ಲಿ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂದು ಮಾಲೀಕ ಚಿನ್ನಸ್ವಾಮಿ ದೂರು ದಾಖಲಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8-15 ರ ವರೆಗೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿ ಚಿನ್ನಸ್ವಾಮಿಯವರು ಮನೆಗೆ ವಾಪಾಸ್ ಆಗುತ್ತಿದ್ದರು. ಅ.29 ರಂದು ರಾತ್ರಿ ಎಂದಿನಂತೆ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ತೆರಳಿದಾಗ ಅಂಗಡಿಯ ಮುಂದಿನ ಮನೆಯ ಯುವಕ ರಾತ್ರಿ 10-45 ಕ್ಕೆ ಮನೆಯ ಗೇಟಿನ ಬೀಗ ಹಾಕಲು ಬಂದ ವೇಳೆ ಅಂಗಡಿಯ ಒಳಗೆ ಬೆಂಕಿ ಬಿದ್ದಿದ್ದು ಕಂಡು ಬಂದಿದೆ.

ತಕ್ಷಣವೇ ಚಿನ್ನಸ್ವಾಮಿಯವರಿಗೆ ವಿಷಯ ತಿಳಿಸಿದಾಗ ಅವರು ಸ್ಥಳಕ್ಕೆ ಧಾವಿಸಿ ಅಂಗಡಿ ಶೆಟ್ಟರ್ಸ್ ತೆಗೆದು ನೋಡಿದಾಗ ಸೀರೆ, ಪ್ರಾಕ್ಸ್, ಹಾಸಿಗೆ ಹಲವಾರು ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡು ಉರಿದಿರುವುದು ಕಂಡು ಬಂದಿದೆ. ತಕ್ಷಣವೇ ನೀರು ಹಾಕಿ ನಂದಿಸಲಾಗಿದೆ. ಸುಮಾರು 50 ಸಾವಿರ ಮಾಲುಗಳು ಬೆಂಕಿಯಿಂದ ಹಾನಿಗೊಳಗಾಗಿದೆ ಎಂದು ದೂರು ದಾಖಲಿಸಲಾಗಿದೆ. ಅಂಗಡಿ ಮುಂಭಾಗದಲ್ಲಿ ಡಿಸೇಲ್ ಸುರಿದು ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಚಿನ್ಬಸ್ವಾಮಿ ದೂರಿನಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.