Categories
ರಾಜಕೀಯ ರಾಜ್ಯ ಶಿವಮೊಗ್ಗ

ಕೆ.ಎಸ್ ಈಶ್ವರಪ್ಪರಿಗೆ ಸಿಗುತ್ತಾ ಮಹತ್ವದ ಸ್ಥಾನ?!

ಕೆ.ಎಸ್ ಈಶ್ವರಪ್ಪರಿಗೆ ಸಿಗುತ್ತಾ ಮಹತ್ವದ ಸ್ಥಾನ?!
– ದಿಢೀರ್ ದೆಹಲಿಗೆ ಹೈಕಮಾಂಡ್ ಬುಲಾವ್
– ಪಕ್ಷದ ಅಧ್ಯಕ್ಷ ಸ್ಥಾನ ಯಾರಿಗೆ ಸಿಗುತ್ತೆ…?

NAMMUR EXPRESS NEWS
ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ದಿನೇ ದಿನೇ ಮಹತ್ವದ ಘಟನೆಗಳು ನಡೆಯುತ್ತಿವೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಮತ್ತು ಪ್ರತಿಪಕ್ಷ ನಾಯಕನ ಆಯ್ಕೆ ಬಾಕಿ ಉಳಿದಿರುವ ಮಧ್ಯೆಯೇ ಬಿಜೆಪಿ ವರಿಷ್ಠರು ರಾಜ್ಯ ಘಟಕದ ಮೂವರು ಇತರ ಹಿಂದುಳಿದ ವರ್ಗದ (ಒಸಿ) ನಾಯಕರಿಗೆ ದೆಹಲಿಗೆ ಬರುವಂತೆ ಸೂಚನೆ ನೀಡಿರುವುದು ಕುತೂಹಲ ಮೂಡಿಸಿದೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರಿಗೆ ಬುಲಾವ್ ಬಂದಿರುವುದು ಇನ್ನಷ್ಟು ಅಚ್ಚರಿ ತರಿಸಿದೆ. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ.ಮೋಹನ್ ಅವರಿಗೂ ಸಹ ಸೂಚನೆ ಬಂದಿದ್ದು, ಗುರುವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಿಲಿದ್ದಾರೆ.

ಕೆ.ಎಸ್.ಈಶ್ವರಪ್ಪ ದೆಹಲಿಗೆ ಬರಲು ಸೂಚನೆ ಬಂದಿದೆ, ಯಾಕೆ ಅಂತ ಗೊತ್ತಿಲ್ಲ ಪಕ್ಷದ ಸೂಚನೆ ಮೇರೆಗೆ ನಾನು ಗುರುವಾರ ದೆಹಲಿಗೆ ಹೋಗುತ್ತಿದ್ದೇನೆ.ನನ್ನ ಜೊತೆಗೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರನ್ನೂ ಕರೆದಿದ್ದಾರೆ. ಯಾಕೆ ಎಂಬುದು ಮಾತ್ರ ಗೊತ್ತಿಲ್ಲ ಎಂದಿದ್ದಾರೆ. ದೆಹಲಿಯ ಪಕ್ಷದ ಕಚೇರಿಗೆ ಆಗಮಿಸುವಂತೆ ಎರಡು ದಿನಗಳ ಹಿಂದೆ ದೂರವಾಣಿ ಮೂಲಕ ಸಂದೇಶ ತಲುಪಿದೆ. ಪಕ್ಷದ ಕಚೇರಿಯಲ್ಲೇ ಸಭೆ ಇದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.