Categories
ಮಲ್ನಾಡ್

ಟಾಪ್ ನ್ಯೂಸ್ ಮಲ್ನಾಡ್ 10-01-2024

– 9ನೇ ತರಗತಿ ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ!
-ಮಂಗನ ಖಾಯಿಲೆಯಿಂದ ಮೃತಪಟ್ಟ ಯುವತಿಯ ಮನೆಗೆ
ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ
-ಬೈಕ್ ಮತ್ತು ಲಾರಿ ನಡುವೆ ಅಪಘಾತ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು!
-ಶಿವಮೊಗ್ಗ :ಅರ್ಚಕರನ್ನ ಅಡ್ಡ ಹಾಕಿ ರಾಬರಿ ಪ್ರಕರಣ!
-ಶಿವಮೊಗ್ಗ : ಹಾರನ್ ಹೊಡೆದಿದ್ದಕ್ಕೆ ಥಳಿತ!

NAMMUR EXPRESS NEWS
ರಿಪ್ಪನ್‌ಪೇಟೆ : ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲ್ಲಿ ಶಾಲಾ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಪಟ್ಟಣದ ಪ್ರೌಢ ಶಾಲೆಯೊಂದರಲ್ಲಿ 9ನೇ ತರಗತಿ ಓದುತಿದ್ದ 15 ವರ್ಷದ ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನಡೆದಿದ್ದು, ಮನೆಯ ಹಾಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿರುವುದಿಲ್ಲ. ಘಟನಾ ಸ್ಥಳಕ್ಕೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹೊಸನಗರ : ಮಂಗನ ಖಾಯಿಲೆಯಿಂದ ಮೃತಪಟ್ಟ ಯುವತಿಯ ಮನೆಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ

ಹೊಸನಗರ : ತಾಲೂಕಿನ ಅರಮನೆಕೊಪ್ಪ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಯುವತಿಯ ಮನೆಗೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು. ಅರಮನೆಕೊಪ್ಪ ಗ್ರಾಮದ ಬಪ್ಪನಮನೆಯ ಅನನ್ಯ(18) ಎಂಬ ಯುವತಿ ಮಂಗನ ಖಾಯಿಲೆಯಿಂದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈಕೆ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ನಗರ, ಹೊಸನಗರ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಉಲ್ಬಣಗೊಂಡಿದ್ದರಿಂದ ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು.

ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆ‌ರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಬಹು ಅಂಗಾಂಶಗಳ ವೈಫಲ್ಯದಿಂದ ಚಿಕಿತ್ಸೆ ಫಲಿಸದೆ ಸೋಮವಾರ ಬೆಳಿಗ್ಗೆ ಅನನ್ಯ ಮೃತಪಟ್ಟಿದ್ದಳು.

ಬೈಕ್ ಮತ್ತು ಲಾರಿ ನಡುವೆ ಅಪಘಾತ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಹೊಸನಗರ: ಇಲ್ಲಿನ ಮಾವಿನಹೊಳೆ ಕ್ರಾಸ್ ನಲ್ಲಿ ಬೈಕ್ ಹಾಗೂ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಸನಗರ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ಕಂಟೇನ‌ರ್ ಲಾರಿ ಮತ್ತು ಸಾಗರ ಕಡೆಯಿಂದ ಹೊಸನಗರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೈಕ್‌ ಸವಾರ ಹೊಂಬುಜ ಸಮೀಪದ ಗರ್ತಿಕೆರೆ ಮೂಲದವನೆಂದು ಹೇಳಲಾಗುತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಹೊಸನಗರ ಪಿಎಸ್‌ಐ ಶಿವಾನಂದ ಕೆ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತಿದ್ದಾರೆ. ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅರ್ಚಕರನ್ನ ಅಡ್ಡ ಹಾಕಿ ರಾಬರಿ ಪ್ರಕರಣ

ಶಿವಮೊಗ್ಗ: ಎರಡು ಪ್ರತ್ಯೇಕ ದಿನಾಂಕದಂದು ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಬರಿ‌ ಪ್ರಕರಣ ನಡೆದಿದೆ. ನ್ಯೂಮಂಡ್ಲಿಯಿಂದ ಕೋಟೆ ಗಂಗೂರಿಗೆ ಹೋಗುತ್ತಿದ್ದ ದೇವರ ಅರ್ಚಕರನ್ನ ರಾಬರಿ ಮಾಡಿದ್ದರೆ, ಕೆಎಸ್ ಆರ್ ಪಿಯಲ್ಲಿ ಸ್ಟೆನೋಗ್ರಾಫರ್ ಪತಿಯನ್ನ ರಾಬರಿ ಮಾಡಲಾಗಿದೆ. ತುಂಗನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಬರುವ ಸಾಗರದ ರಸ್ತೆಯ ಮಲ್ಲಿಗೇನ ಹಳ್ಳಿಯ ಬಳಿ ಹಿಂಬದಿ ಬೈಕ್ ನಿಂದ ಬಂದ ಇಬ್ವರು ಬೈಕ್ ನಿಲ್ಸು ಎಂದು ಜೋರಾಗಿ ಕೂಗಿ ಅಡ್ಡ ಬಂದು ಚಿನ್ನದ ಸರ, ಮೊಬೈಲ್ ಮತ್ತು ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಜ.8 ರಂದು ಕೋಟೆಗಂಗೂರಿನ ನಿವಾಸಿ ಸುನೀಲ್ ಭಟ್ ಶಿವಮೊಗ್ಗದ ನ್ಯೂಮಂಡ್ಲಿ ಬಳಿಯ ಚೌಡೇಶ್ವರಿ ದೇವಸ್ಥಾನಕ್ಕೆ ಸ್ನೇಹಿತ ವಿನಯ್ ಜೊತೆ ಪೂಜೆಗೆ ಬಂದಿದ್ದು ಪೂಜೆ ಮುಗಿಸಿಕೊಂಡು ರಾತ್ರಿ 8-30 ರ ಸಮಯದಲ್ಲಿ ಸಾಗರ ರಸ್ತೆಯ ಬಳಿ ಹೋಗುವಾಗ ಹಿಂಬದಿಯಿಂದ ಬಂದ ಇಬ್ಬರು ಅಪರಿಚಿತರು ಗಾಡಿ ನಿಲ್ಸೋ ಎಂದು ಜೋರಾಗಿ ಕೂಗಿದ್ದಾರೆ.

ಅರ್ಚಕರ ವಾಹನ ನಿಧಾನವಾದ ಪರಿಣಾಮ ಅವರ ವಾಹನಕ್ಕೆ ಅಡ್ಡ ನಿಲ್ಲಿಸಿದ ಅಪರಿಚಿತ ಬೈಕ್ ಸವಾರನೊಬ್ಬ ಬೈಕ್ ನಿಂದ ಅರ್ಚಕರನ್ನ ಮತ್ತು ಸ್ನೇಹಿತ ವಿನಯ್ ಗೆ ಡ್ರಾಗರ್ ತೋರಿಸಿ ಬೀಳಿಸಿದ್ದಾನೆ. ಕೆಳಗೆ ಬಿದ್ದ ಸುನೀಲ್ ಭಟ್ ರವರ ಕುತ್ತಿಗೆಯಲ್ಲಿದ್ದ 7 ಗ್ರಾಂ ಚಿನ್ಬದ ಸರ, ಮೊಬೈಲ್ ಕಿತ್ತುಕೊಂಡಿದ್ದಾರೆ. ಇದೇ ರೀತಿ ತಾಲೂಕಿನ‌ ಕೊನಗವಳ್ಳಿಯಲ್ಲಿ ಕೆಎಸ್ ಆರ್ ಪಿಯಲ್ಲಿ ಸ್ಟೇನೋಗ್ರಾಫರ್ ಆಗಿರುವ ಪತಿ ಪರಮೇಶ್ವರ್ ಅವರನ್ನ ರಾಬರಿ ಮಾಡಿಕೊಂಡು ಹೋಗಿರುವ ಘಟನೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪರಮೇಶ್ವರ್ ಕೊನಗವಳ್ಳಿ ಮತ್ತು ಹಿಟ್ಟೂರು ರಸ್ತೆಯ ಬಳಿ ಮೊಬೈಲ್ ನಲ್ಲಿ ಮಾತನಾಡುವ ವೇಳೆ ಹಿಟ್ಟೂರು ರಸ್ತೆಯಿಂದ ಬಂದ ಅಪರಿಚಿತರ ಬೈಕ್ ಗೆಜ್ಜೇನಹಳ್ಳಿಯ ರಸ್ತೆ ಮಾರ್ಗವನ್ನ ಕೇಳಿದೆ. ಇದ್ದಕ್ಕಿದ್ದಂತೆ ಬೈಕ್ ನಿಂದ ಇಳಿದು ಬಂದ ಅಪರಿಚಿತ ಪರಮೇಶ್ವರಪ್ಪನವರ ಬಳಿ ಇದ್ದ ಮೊಬೈಲ್ ಮತ್ತು 15300‌ಹಣ ಮತ್ತು ಮೊಬೈಲ್ ಕಿತ್ತುಕೊಂಡು‌ ಪರಾರಿಯಾಗಿದ್ದಾರೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.

ಹಾರನ್ ಹೊಡೆದಿದ್ದಕ್ಕೆ ಥಳಿತ!

ಶಿವಮೊಗ್ಗ: ರಸ್ತೆಗೆ ಅಡ್ಡಲಾಗಿ ನಿಂತಿದ್ದ ವಾಹನಕ್ಕೆ ಹಾರನ್ ಹೊಡೆದ ಕಾರಣ ಯುವಕನನ್ನ ನಡು ರಸ್ತೆಯಲ್ಲಿ ಥಳಿಸಿರುವ ಘಟನೆ ನಡೆದಿದೆ. ಎಸ್ ಹೆಚ್ ಕ್ಯಾಟರಿಂಗ್ ನಲ್ಲಿ ಕೆಲಸ ಮಾಡುವ ಗಗನ್ ಜ.8 ರಂದು ಕಂಟ್ರಿಕ್ಲಬ್ ನಲ್ಲಿ ಊಟದ ಆರ್ಡರ್ ಇದ್ದ ಕಾರಣ ಹರಕೆರದ ಬಳಿ ಸಂಸ್ಥೆಯ ಗೋದಾಮಿನಲ್ಲಿ ಬೊಲೆರೋ ಪಿಕಪ್ ಇದ್ದು, ಅದನ್ನ ವಿನೋಭನಗರದ ಶುಭಮಂಗಳದ ಬಳಿ ತೆಗೆದುಕೊಂಡು ಹೋಗುವಾಗ ನ್ಯೂ ಮಂಡ್ಲಿ ವೃತ್ತದ ಬಳಿ ಟ್ರಾಫಿಕ್ ಜ್ಯಾಮ್ ಆಗಿತ್ತು. ಟ್ರಾಫಿಕ್ ಜ್ಯಾಮ್ ಆದ ಕಾರಣ ಮುಂದೆ ಕಾರೊಂದು ಚಲಿಸದೆ ಅಡ್ಡ ನಿಂತಿದ್ದರಿಂದ ಪಿಕಪ್ ನ್ನ‌ ಚಲಾಯಿಸುತ್ತಿದ್ದ ಗಗನ್ ಹಾರನ್ ಹೊಡೆದಿದ್ದಾನೆ.

ಬೀಡಾ ಅಂಗಡಿಯ ಬಳಿ ಮೂವರ ಜೊತೆಯಲ್ಲಿದ್ದ ಇರ್ಫಾನ್ ಬೈಯ್ಯುತ್ತಲೇ ಬಂದಿದ್ದಾನೆ. ಯಾಕೆ ಬೈಯುತ್ತೀರಾ? ವಾಹನ ತೆಗೆಯಿರಿ ಅಡ್ಡ ನಿಲ್ಸುದ್ರೆ ಹೇಗೆ ಎಂದು ಕೇಳಿದ್ದಾನೆ. ನಮ್ಮ ಏರಿಯಾಕ್ಕೆ ಬಂದು‌ ನಮಗೆ ಅವಾಜ್ ಹಾಕ್ತ್ಯಾ ಎಂದು ಇರ್ಫಾನ್ ಗದಿರಿಸಿದ್ದಾನೆ. ಗಗನ್ ನ‌ ಕೆನ್ನೆಗೆ ಬಾರಿಸಿ ಡಿಚ್ಚಿ ಹೊಡೆದಿದ್ದಾನೆ. ಜೊತೆಯಲ್ಲಿದ್ದವರಿಗೆ ಥಳಿಸಿದ್ದಾನೆ. ನಂತರ ಶಿವು ಗಲಾಟೆ ಬಿಡಿಸಲು ಯತ್ನಿದಿದ್ದಾನೆ. ನಾನು ಇದೇ ಏರಿಯಾ ಬಿಟ್ಟು ಬಿಡಿ ಎಂದು ಶಿವುಕುಮಾರ್ ಕೇಳಿಕೊಂಡಾಗ ಬಿಟ್ಟಿದ್ದಾನೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.