Categories
ತೀರ್ಥಹಳ್ಳಿ

ತುಂಗಾ ನದಿಯಲ್ಲಿ ಮುಳುಗಿ ಬಾಲಕನ ಸಾವು

ತುಂಗಾ ನದಿಯಲ್ಲಿ ಮುಳುಗಿ ಬಾಲಕನ ಸಾವು
– ಜಾತ್ರೆಯ ಸಂಭ್ರಮದ ನಡುವೆ ಆಘಾತ!
– ಈ ಬಗ್ಗೆ ಮಾಹಿತಿ ಮತ್ತು ಎಚ್ಚರ ಅವಶ್ಯ!

NAMMUR EXPRESS NEWS
ತೀರ್ಥಹಳ್ಳಿ: ಜಾತ್ರೆಯಲ್ಲಿ ವ್ಯಾಪರಕ್ಕಾಗಿ ಅಂಗಡಿ ಮುಂಗಟ್ಟು ಹಾಕಲು ಬಂದಿದ್ದ ಬಿಹಾರಿ ಮೂಲದ ಆರಿಫ್ ಎಂಬ 13 ವರ್ಷದ ಹುಡುಗನೊಬ್ಬ ತುಂಗಾ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಜಾತ್ರೆಯ ತಯಾರಿ ಬಿರುಸಿನಿಂದ ಸಾಗುತ್ತಿರುವ ಹಿನ್ನಲೆಯಲ್ಲಿ ಅಂಗಡಿ ಮಳಿಗೆ ಹಾಕಲು ದೇಶಾದ್ಯಂತ ವ್ಯಾಪಾರಿಗಳು ಪ್ರತಿ ವರ್ಷವೂ ಬರುವುದು ಸಾಮಾನ್ಯವಾಗಿದೆ. ಹೀಗೆ ಬಂದಿದ್ದ ಈ ಬಿಹಾರಿ ಮೂಲದ ಕುಟುಂಬದಲ್ಲಿ ಈ ಆಘಾತ ಸಂಭವಿಸಿದೆ. ಮೃತ ಬಾಲಕನ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಮುಳುಗು ತಜ್ಞ ಪ್ರಮೋದ್ ಪೂಜಾರಿ, ಅಗ್ನಿಶಾಮಕ ದಳ, ಪೋಲೀಸರು ಮತ್ತು ಸ್ಥಳೀಯರು ಇದ್ದಾರೆ.

ಪ್ರತೀ ವರ್ಷ ಸ್ಥಳೀಯರು ಅಥವಾ ಪ್ರವಾಸಿಗರು ತುಂಗಾ ನದಿಯಲ್ಲಿ ಈಜಲು ಹೋಗಿ, ಅಥವಾ ಕಾಲು ಜಾರಿ ಜೀವ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ಈ ಬಗ್ಗೆ ಸ್ವಯಂ ಎಚ್ಚರಿಕೆ ಅತ್ಯಗತ್ಯ ಮತ್ತು ಆಡಳಿತ ಮಂಡಳಿಯೂ ಈ ಬಗ್ಗೆ ಮಾಹಿತಿ ಮತ್ತು ಎಚ್ಚರಗಳನ್ನು ನೀಡುವುದು, ಜಾಗೃತಿ ವಹಿಸುವುದು ಅಗತ್ಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.