ಕಲ್ಲುಕ್ವಾರಿಯಲ್ಲಿ ಡೈನಾಮೈಟ್ ಸ್ಫೋಟ: ವ್ಯಕ್ತಿ ಸ್ಥಿತಿ ಚಿಂತಾಜನಕ
– ಚಿಕ್ಕಮಗಳೂರು ಜಿಲ್ಲೆ ಕಡೂರು ಅಲ್ಲಿ ಘಟನೆ
– ಐಸ್ ಕ್ರೀಂ ವಾಹನದಲ್ಲಿ ಅಕ್ರಮ ಗೋಮಾಂಸ ಮಾರಾಟ!
– ಶಿವಮೊಗ್ಗ: ಐರಾವತ ಬಸ್ಸಲ್ಲೇ ಚಿನ್ನ ಕದ್ದರು!
– ಸಾಗರ: ಹಿರಿಯ ಪತ್ರಕರ್ತ ಕಚೇರಿಯಲ್ಲೇ ನೇಣಿಗೆ ಶರಣು
NAMMUR EXPRESS NEWS
ಕಡೂರು: ಕಲ್ಲುಕ್ವಾರಿಯಲ್ಲಿ ಡೈನಾಮೈಟ್ ಸ್ಪೋಟಗೊಂಡು ಕಾರ್ಮಿರೊಬ್ಬರ ಕಾಲು, ಎದೆ ಭಾಗಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಗಂಭೀರವಾಗಿದೆ. ತಾಲೂಕು ಸೇವಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಿಂದ ಬರುವಾಗ ಡೈನಾಮೈಟ್ ಸ್ಪೋಟಗೊಂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಫೋಟದಿಂದ ಗ್ರಾಮದ ಸಿದ್ದಾನಾಯ್ಕ ಅವರ ಎಡಗಾಲಿನ ಮೂಳೆ ಪುಡಿಯಾಗಿದೆ. ಕಾಲು ಕೈ ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಘಟನೆ ಬುಧವಾರ ನಡೆದಿದ್ದು, ಗಾಯಗೊಂಡ ಕಾರ್ಮಿಕ ಏಳಲಾರದೆ ಬುಧವಾರ ಸಂಜೆಯಿಂದ ಕ್ವಾರಿಯಲ್ಲೆ ಬಿದ್ದಿದ್ದ ಎನ್ನಲಾಗುತ್ತಿದ್ದು, ತೀವ್ರ ಪೆಟ್ಟಾಗಿರುವ ಎಡಗಾಲಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಕಾಲು ಬರುವುದಿಲ್ಲವೆಂದು ವೈದ್ಯರು ತಿಳಸಿದ್ದಾರೆ.
ಐಸ್ ಕ್ರೀಂ ವಾಹನದಲ್ಲಿ ಅಕ್ರಮ ಗೋಮಾಂಸ ಮಾರಾಟ!
ಚಿಕ್ಕಮಗಳೂರು: ಐಸ್ ಕ್ರಿಂ ಬಾಕ್ಸ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರವಾಸೆ ಗ್ರಾಮದಲ್ಲಿ ನಡೆದಿದೆ.ಆಪೇ ಅಟೋದಲ್ಲಿ ಐಸ್ ಕ್ರಿಂ ಬಾಕ್ಸ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮುಜೀಬ್ ಬಿನ್ ರಹೀಮ್ ಸಾಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಕಲ್ಲುದೊಡ್ಡಿ ಶಾಂತಿನಗರ ನಿವಾಸಿಯಾದ ಮುಜೀಬ್ ನನ್ನು ವಶಕ್ಕೆ ಪಡೆದು 5000/- ರೂ ಬೆಲೆಬಾಳುವ 20 ಕೆ.ಜಿ ದನದ ಮಾಂಸವನ್ನು ವಶಪಡಿಸಿಕೊಂಡು ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಮಲ್ಲಂದೂರು ಠಾಣಾ ಪಿ.ಎಸ್.ಐ. ನೇತ್ರಾವತಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ.
ಐರಾವತ ಬಸ್ಸಲ್ಲೇ ಚಿನ್ನ ಕದ್ದರು!
ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿ ಪೂಜೆ ಕಾರ್ಯಕ್ರಮ ಮುಗಿಸಿ ವಾಪಸ್ ಬೆಂಗಳೂರಿನಿಂದ ಸಾಗರಕ್ಕೆ ಐರಾವತ ಬಸ್ ಬುಕ್ ಮಾಡಿಕೊಂಡು ಬಂದಿದ್ದ ಪ್ರಯಾಣಿಕನ ಚಿನ್ನಾಭರಣ ಎಗರಿಸಿದ ಘಟನೆ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ನಡೆದಿದೆ. ಆತ ಬಸ್ ಇಳಿದು ಶೌಚಕ್ಕೆ ಹೋಗಿ ವಾಪಸ್ ಮತ್ತೆ ಬಸ್ ನಲ್ಲಿ ಕುಳಿತಿದ್ದಾರೆ. ಆನಂತರ ಸಾಗರಕ್ಕೆ ತೆರಳಿದ ನಂತರ ತಮ್ಮ ಸಂಬಂಧಿ ನಿವಾಸದಲ್ಲಿ ಬ್ಯಾಗ್ ಓಪನ್ ಮಾಡಿದ್ದಾರೆ. ಆವೇಳೆ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಇಲ್ಲದಿರುವುದು ಗೊತ್ತಾಗಿದೆ. ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿರುವುದು ಗೊತ್ತಾಗಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಿದ್ದಾರೆ.
ಸಾಗರ ಖ್ಯಾತ ಪತ್ರಕರ್ತ ಪಿ.ಅತ್ರಿ ಆತ್ಮಹತ್ಯೆ
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರದ ಪತ್ರಕರ್ತ ಪಿ. ಆತ್ರಿ ತಮ್ಮ ಮುದ್ರಣ ಕಛೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸ್ಥಳಕ್ಕೆ ಸಾಗರ ಪೇಟೆ ಪೊಲೀಸರು ಭೇಟಿ ನೀಡಿದ್ದಾರೆ. ಪಟ್ಟಣದ ಹಳೇ ಮಥುರ ಹೋಟೆಲ್ ನ ಮೇಲ್ಭಾಗದಲ್ಲಿದ್ದ ಕಚೇರಿಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಪಿ ಅತ್ರಿ ಪತ್ತೆಯಾಗಿದ್ದು ಅವರ ಕುಟುಂಬ ಮತ್ತು ಆಪ್ತ ವಲಯದಲ್ಲಿ ತುಂಬಲಾಗದ ನಷ್ಟ ಉಂಟಾಗಿದೆ. ಇವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬರಬೇಕಿದೆ.