Categories
ಕ್ರೀಡಾ ಸುದ್ದಿ

ವಿಶ್ವಕಪ್ ಅಲ್ಲಿ ಕೊಹ್ಲಿ ಕಮಾಲ್..!

ವಿಶ್ವಕಪ್ ಅಲ್ಲಿ ಕೊಹ್ಲಿ ಕಮಾಲ್..!
– ಬಾಂಗ್ಲಾದೇಶ ವಿರುದ್ಧ ಭಾರತ ತಂಡಕ್ಕೆ 7 ವಿಕೆಟ್ ಜಯ
– ವಿಜಯ ಯಾತ್ರೆ ಮುಂದುವರಿಸಿದ ಭಾರತ
– ಅ.22ಕ್ಕೆ ಭಾರತ -ನ್ಯೂಜಿಲ್ಯಾಂಡ್ ಹಣಾಹಣಿ

NAMMUR EXPRESS NEWS
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರತಿ ಪಂದ್ಯದಲ್ಲೂ ಮ್ಯಾಜಿಕ್ ಮಾಡಿದೆ. ಅದರಂತೆ ಭಾರತ ಕ್ರಿಕೆಟ್ ತಂಡವು ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಜಯ ಗಳಿಸಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 257 ರನ್ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು 41.3 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿ 7 ವಿಕೆಟ್ ಗಳ ಅಂತರದ ಭರ್ಜರಿ ಜಯ ಗಳಿಸಿತು. ಭಾರತದ ಪರ ರೋಹಿತ್ ಶರ್ಮಾ 48 ರನ್ ಗಳಿಸಿ ಕೇವಲ 2 ರನ್ ಗಳ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಶುಭ್ ಮನ್ ಗಿಲ್ 53 ರನ್ ಗಳಿಸಿ ಹಸನ್ ಮಿರಾಜ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ 19 ರನ್ ಗಳಿಸಿ ಔಟಾದರು. ಕೊಹ್ಲಿ ಅಜೇಯ 103 ರನ್ ಗಳಿಸಿದರು. ಕೆಎಲ್ ರಾಹುಲ್ ಅಜೇಯ 34 ರನ್ ಗಳಿಸಿದರು. ಆ ಮೂಲಕ ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಗಳ ಅಂತರದ ಭರ್ಜರಿ ಜಯಗಳಿಸಿತು.

ಅರ್ಧಶತಕ ಸಿಡಿಸಿದ್ದ ಕೊಹ್ಲಿ ಶತಕದತ್ತ ದಾಪುಗಾರಿಸಿದ್ದರು. ಒಂದು ಹಂತದಲ್ಲಿ ಕೊಹ್ಲಿ ಶತಕ ಸಿಡಿಸುವುದು ಅಸಾಧ್ಯ ಎಂದೇ ಊಹಿಸಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ತಂಡ ಗೆಲ್ಲಲು 2ರನ್ ಗಳ ಅವಶ್ಯಕತೆ ಇದ್ದಾಗ ಕೊಹ್ಲಿಗೆ ಶತಕ ಸಿಡಿಸಲು 3ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಭರ್ಜರಿ ಮ್ಯಾಜಿಕ್ ಮಾಡಿದ ಕೊಹ್ಲಿ ದೊಡ್ಡ ಎಸೆತಕ್ಕಾಗಿ ಕಾಯುತ್ತಿದ್ದರು. ನಸುಮ್ ಅಹ್ಮದ್ ಎಸೆದ 42ನೇ ಓವರ್ ನ 3ನೇ ಎಸೆತದಲ್ಲಿ ಕೊಹ್ಲಿ ಭರ್ಜರಿ ಹೊಡೆತ ಭಾರಿಸಿ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಅ.22ರಂದು ಭಾರತ ನ್ಯೂಜಿಲ್ಯಾನ್ಡ್ ತಂಡವನ್ನು ಎದುರಿಸಲಿದೆ.

ಆಡಿದ ಎಲ್ಲಾ ಪಂದ್ಯ ಗೆದ್ದ ಭಾರತ!

ವಿಶ್ವ ಕಪ್ ಟೂರ್ನಿಯಲ್ಲಿ ಆಡಿದ 4 ಮ್ಯಾಚ್ ಅನ್ನು ಭಾರತ ಗೆದ್ದಿದೆ. ಆದರೆ ನ್ಯೂಜಿಲ್ಯಾಂಡ್ ಕೂಡ ಆಡಿದ ಎಲ್ಲಾ 4 ಪಂದ್ಯ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಆದ್ರೆ ಅ.22ರಂದು ಭಾರತ ನ್ಯೂಜಿಲ್ಯಾನ್ಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ತಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.