ಟಾಪ್ ನ್ಯೂಸ್ ಮಲ್ನಾಡ್
– ಸಂಚಾರಿ ನಿಯಮ ಪಾಲಿಸದ ಪೊಲೀಸರಿಗೂ ದಂಡ!
– ಕೊಟ್ಟಿಗೆಹಾರದಲ್ಲಿ ವಾಹನ ಅಡ್ಡಾದಿಡ್ಡಿ ನಿಲ್ಲಿಸಿದ್ದಕ್ಕೆ ದಂಡ
– ಎನ್. ಆರ್. ಪುರ: ನಾಗರಹಾವು ಕಚ್ಚಿ ವಿಶೇಷ ಚೇತನ ವ್ಯಕ್ತಿ ಸಾವು
– ಸಾಗರ: ರಸ್ತೆ ಅಪಘಾತ ಯುವತಿ ಸಾವು
– ಶಿವಮೊಗ್ಗ: ರಸ್ತೆ ಅಪಘಾತ, ಓರ್ವ ದುರ್ಮರಣ
– ಶಿವಮೊಗ್ಗ : ಕಾರ್ಮಿಕನಿಗೆ ವಿದ್ಯುತ್ ಶಾಕ್ ಕಾರ್ಮಿಕ ಸಾವು
– ಶಿವಮೊಗ್ಗ: ವಿಳಾಸ ಕೇಳುವ ನೆಪದಲ್ಲಿ ಚಿನ್ನ,ಹಣ ಕದ್ದರು!
NAMMUR EXPRESS NEWS
ಎನ್. ಆರ್. ಪುರ: ನಾಗರಹಾವು ಕಚ್ಚಿ ವಿಶೇಷ ಚೇತನ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಇಟ್ಟಿಗೆ ಶಿವನಗರದಲ್ಲಿ ನಡೆದಿದೆ. ಪುಟ್ಟಯ್ಯ (68) ಸಾವನ್ನಪ್ಪಿದ ವ್ಯಕ್ತಿ. ಶಿವನಗರದ ತಮ್ಮ ಮನೆಯಲ್ಲಿ ಕೋಳಿ ಗೂಡಿನಲ್ಲಿ ಕೆಲಸ ಮಾಡುತ್ತಿರುವಾಗ ಅದರೊಳಗೆ ಅಡಗಿದ್ದ ನಾಗರಹಾವು ಕಚ್ಚಿದೆ. ಕೂಡಲೇ ಶಿವಮೊಗ್ಗ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗ ಮದ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
– ಮೂಡಿಗೆರೆ: ಅಡ್ಡಾದಿಡ್ಡಿ ನಿಲ್ಲಿಸಿದ್ದ ಶಿವಮೊಗ್ಗ ಪೊಲೀಸ್ ಸಿಬ್ಬಂದಿಗೆ ಬಿತ್ತು ದಂಡ!
ಮೂಡಿಗೆರೆ: ಚಿಕ್ಕಮಗಳೂರಿನ ಪ್ರವಾಸಿ ತಾಣಕ್ಕೆ ಭೇಟಿ ಕೊಡುವ ಪ್ರವಾಸಿಗರು ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಪ್ರವಾಸಿಗರು ನಿಯಮಗಳನ್ನು ಮೀರಿ ತಮ್ಮ ಮನ ಬಂದಂತೆ ವರ್ತಿಸುತ್ತಿರುವುದು ಇತ್ತೀಚಿನ ದಿನದಲ್ಲಿ ಸ್ಥಳೀಯರನ್ನು ಆಕ್ರೋಶಗೊಳಿಸಿದೆ. ಭಾನುವಾರದಂದು ಪ್ರವಾಸಿಗರು ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಕೊಟ್ಟಿಗೆಹಾರದಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿ ಅಸ್ತವ್ಯಸ್ತವಾಗಿತ್ತು. ಶಿವಮೊಗ್ಗ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಕುಟುಂಬದೊಂದಿಗೆ ಖಾಸಗಿ ವಾಹನದಲ್ಲಿ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ತಮ್ಮ ಎರ್ಟಿಗಾ ವಾಹನವನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ ಬೇಜವಾಬ್ದಾರಿ ತೋರಿದ್ದಾರೆ. ಇದರಿಂದ ಕೆಲಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು. ಟ್ರಾಫಿಕ್ ನಿಯಂತ್ರಿಸಲು ಬಣಕಲ್ ಸಬ್ ಇನ್ ಸ್ಪೆಕ್ಟರ್ ಕೌಶಿಕ್, ಕೊಟ್ಟಿಗೆಹಾರಕ್ಕೆ ಗಸ್ತು ಬಂದ ವೇಳೆ ರಸ್ತೆಯಲ್ಲಿ ನಿಂತ ವಾಹನದವರನ್ನು ಕರೆಸಿ ತೆರವುಗೊಳಿಸಲು ಸೂಚನೆ ನೀಡಿ ದಂಡ ವಿಧಿಸಿದ್ದಾರೆ. ಈ ವೇಳೆ ಶಿವಮೊಗ್ಗದ ಪೊಲೀಸ್ ಸಿಬ್ಬಂದಿಯೊಬ್ಬರು ಸಹ ತಮ್ಮ ಕಾರನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರು. ಯಾವುದೇ ಮುಲಾಜಿಲ್ಲದೆ ಅವರಿಗೂ ಸಹ ದಂಡ ಪಿಎಸ್ಐ ಕೌಶಿಕ್ ದಂಡ ಹಾಕಿದ್ದಾರೆ. ಸಂಚಾರಿ ನಿಯಮ ಪಾಲಿಸದ ಪೊಲೀಸರಿಗೂ ಸಹ ದಂಡದ ಬಿಸಿ ತಟ್ಟಿದೆ. ಅಲ್ಲದೇ ಪಿಎಸ್ಐ ಕೌಶಿಕ್ ಕಾರ್ಯಕ್ಕೆ ಸಾರ್ವಜನಿಕರಿಂದಲೂ ಸಹ ಮೆಚ್ಚುಗೆ ವ್ಯಕ್ತವಾಗಿದೆ.
-ಸಾಗರದಲ್ಲಿ ಅಪಘಾತಕ್ಕೆ ವಿದ್ಯಾರ್ಥಿನಿ ಬಲಿ!
ಸಾಗರ: ಸಾಗರದಲ್ಲಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು ಕಂಡಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಕಾಲೇಜಿನಿಂದ ಮನೆಗೆ ಹೋಗುವಾಗ ಸಾಗರದ ಕುಗ್ವೆ ಬಳಿ ಅಪಘಾತ ಸಂಭವಿಸಿದೆ. ಸಾಗರದ ಕಡೆಯಿಂದ ಜೋಗಕ್ಕೆ ಹೋಗುತ್ತಿದ್ದ ಕಾರೊಂದು ವೇಗವಾಗಿ ಚಲಿಸಿದೆ. ಅಲ್ಲೇ ಲಾಲ್ ಬಹದ್ದೂರು ಕಾಲೇಜಿನಲ್ಲಿ ಬಿಸಿಎ ದ್ವಿತೀಯ ವರ್ಷ ಓದುತ್ತಿದ್ದ ಅನುಷಾ(20) ತನ್ನ ಸ್ನೇಹಿತೆಯಳೊಂದಿಗೆ ದ್ವಿಚಕ್ರವಾಹನದಲ್ಲಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಹಿಂಬದಿಯಿಂದ ಬಂದ ಕಾರು ಅಪಘಾತ ಪಡಿಸಿದೆ. ಯುವತಿಯನ್ನ ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ನಡೆಸಲಾಗಿದೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲಗೊಂಡಿದೆ. ಯುವತಿ ಸಾವನ್ನಪ್ಪಿದ್ದಾಳೆ. ಯುವತಿಯ ತಂದೆ ಕುಂದಾಪುರ ಮೂಲದವರಾಗಿದ್ದು ಸಾಗರದಲ್ಲಿ ಕೆಎಸ್ಆರ್ ಟಿಸಿ ಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಗಳ ಅಗಲಿಕೆ ಕುಟುಂಬಸ್ಥರನ್ನ ಕಣ್ಣೀರ ಕೋಡಿಯಲ್ಲಿ ಮುಳಗಿಸಿದೆ.
– ಶಿವಮೊಗ್ಗ: ರಸ್ತೆ ಅಪಘಾತ, ಓರ್ವ ಸಾವು
ಶಿವಮೊಗ್ಗ: ಹೋಟೆಲ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್ಆರ್ ಟಿಸಿ ರಾಜಹಂಸ ಬಸ್ ಗೆ ಊರುಗಡೂರು ವೃತ್ತದ ಬಳಿ ಬೈಕ್ ನಲ್ಲಿ ಬರುತ್ತಿದ್ದ ಸಂತೋಷ್ ಗೆ ಡಿಕ್ಕಿ ಹೊಡೆದಿದೆ. ಸಂತೋಷ್(23) ಕೆಳಗೆ ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದಾರೆ. ಶ್ರೀರಾಮ ಪುರದಿಂದ ಊರಗಡೂರಿನ ಬಳಿ ಹೋಟೆಲ್ ಕೆಲಸಕ್ಕೆ ತೆರಳುತ್ತಿದ್ದ ಸಂತೋಷ್ ಗೆ ಕೆಎಸ್ಆರ್ ಟಿಸಿ ಬಸ್ ಜವರಾಯನಂತೆ ಬಂದು ಎರಗಿದೆ. ಪ್ರಕರಣ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಘಾತ ಪಡಿಸಿದ ಕೆಎಸ್ ಆರ್ ಟಿಸಿ ಬಸ್ ನ್ನ ಠಾಣೆಗೆ ತಂದಿರಿಸಲಾಗಿದೆ.
– ಶಿವಮೊಗ್ಗ : ವಿದ್ಯುತ್ ಶಾಕ್ ಕಾರ್ಮಿಕ ಸಾವು
ಶಿವಮೊಗ್ಗ: ಶಿವಮೊಗ್ಗದ ಸೋಮಯ್ಯ ಲೇ ಔಟ್ ನಲ್ಲಿ ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದ ಯುವ ಕಾರ್ಮಿಕ ದಿಡೀರ್ ಅಂತ ಸಾವು ಕಂಡಿದ್ದು, ಆತನ ಸಾವಿಗೆ ಮೇಸ್ತ್ರಿಯ ಬೇಜವಬ್ದಾರಿತನದಿಂದ ಸಾವನ್ಬಪ್ಪಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ. ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಟ್ಟಡ ನಿರ್ಮಿಸುತ್ತಿದ್ದ ಹರೀಶ್ ಇಂಜಿನಿಯರ್ ಅವರ ಕಟ್ಟಡ ನಿರ್ಮಿಸುತ್ತಿದ್ದನು. ಹರೀಶ್ ನ ಕೆಲಸ ಎಲ್ಲ ಮುಗಿದಿತ್ತು. ಕೆಲಸಕ್ಕೆ ಕರೆದುಕೊಂಡು ಬಂದ ಮೇಸ್ತ್ರಿ ಸಿಮೆಂಟ್ ಮಿಕ್ಸಿಂಗ್ ನ ವೈಬ್ರೇಷನ್ ಮಿಷನ್ ಸ್ವಚ್ಛಗೊಳಿಸಲು ಸೂಚಿಸಿದ್ದರು. ಸ್ವಚ್ಛಗೊಳಿಸಲು ಮುಂದಾದ ಯುವಕ ದಿಡೀರ್ ಸಾವು ಕಂಡಿದ್ದಾನೆ. ಆದರೆ ಯುವಕನ ಸಾವಿಗೆ ಮೇಸ್ತ್ರಿ ವಿದ್ಯುತ್ ಶಾಕ್ ನಿಂದ ಸಾವು ಕಂಡಿರುವುದಾಗಿ ಮೃತನ ಕುಟುಂಬಕ್ಕೆ ತಿಳಿಸಿರುವುದಾಗಿ ಹೇಳಿದ್ದಾರೆ. ಮೇಸ್ತ್ರೀಯ ನಿರ್ಲಕ್ಷ್ಯಕ್ಕೆ ಹರೀಶ ಸಾವು ಕಂಡಿದ್ದಾನೆ.
– ಶಿವಮೊಗ್ಗ: ವಿಳಾಸ ಕೇಳುವ ನೆಪದಲ್ಲಿ ಕಳ್ಳತನ
ಶಿವಮೊಗ್ಗ: ಶಿವಮೊಗ್ಗದಲ್ಲಿ ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯರ ಮಾಂಗಲ್ಯ ಅಥವಾ ಬಂಗಾರದ ಸರವನ್ನ ಎಗುರಿಸುತ್ತಿದ್ದ ಉದಾಹರಣೆಗಳು ಹೆಚ್ಚಿವೆ. ಆದರೆ ಇಲ್ಲೋಂದು ಪ್ರಕರಣದಲ್ಲಿ ಹಣ ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿರುವ ಪ್ರಕರಣ ದಾಖಲಾಗಿದೆ. ವಿಳಾಸ ಕೇಳುವ ನೆಪದಲ್ಲಿ ಸಹಕಾರ ಮಾಡಲು ಮುಂದಾದ ವ್ಯಕ್ತಿಗೆ ಶಾಕ್ ಕಾದಿದೆ. ಹಲ್ಲೆ ನಡೆಸಿ ಇಬ್ಬರು ಯುವಕರ ಬಳಿ ಮೂವರು ಅಪರಿಚಿತರು ಮೊಬೈಲ್ ಮತ್ತು ಹಣ ಕಿತ್ತುಕೊಂಡು ಹೋಗಿದ್ದಾರೆ.
ಮಾರ್ಕ್ ಎಂಬ ಯುವಕ ಎಳುಮಲೈರವರ ಬಳಿ ಕೇಬಲ್ ಟೆಕ್ನಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದನು, ಜೂ.21ರಂದು ಬೆಳಗಿನ ಜಾವ 1-30 ಗಂಟೆಯ ಸಮಯದಲ್ಲಿ ಟೆಂಪೋ ಸ್ಟಾಂಡ್ ಹತ್ತಿರ ಗಾಯತ್ರಿ ಕ್ಯಾಂಟೀನ್ ಬಳಿ ಕೇಬಲ್ ಹಿಡಿದುಕೊಂಡು ನಿಂತಿದ್ದಾಗ, ಸುಮಾರು 20 ರಿಂದ 25 ವರ್ಷ ವಯಸ್ಸಿನ ಮೂರು ಜನ ಹುಡುಗರು ಬೈಪಾಸ್ ರಸ್ತೆಯ ಕಡೆಯಿಂದ ಒಂದು ಬೈಕ್ ನಲ್ಲಿ ಬಂದು ಬೈಕ್ ನಿಲ್ಲಿಸಿ ಯಾವುದೋ ವಿಳಾಸವನ್ನ ಕೇಳುವ ಡ್ರಾಮ ಆಡಿದ್ದಾರೆ, ಅಡ್ರೆಸ್ ನನಗೆ ಗೊತ್ತಿಲಾ ಎಂದು ಹೇಳಿದಾಗ ಬೈಕ್ ನ ಮದ್ಯ ಕುಳಿತವನು ಸ್ವಲ್ಪ ಮೊಬೈಲ್ ಕೊಡಿ ಅಡ್ರೆಸ್ ಕೇಳುತ್ತೇನೆ, ಎಂದು ಹೇಳಿದ್ದಾನೆ. ಜೇಬಿನಿಂದ ಮೊಬೈಲ್ ತೆಗೆದ ಮಾರ್ಕ್, ನಂಬರ್ ಹೇಳಿ ಎಂದು ಹೇಳುತ್ತಿದ್ದಂತೆ ಕೈಯಲ್ಲಿದ್ದ ಮೊಬೈಲ್ ನ್ನು ಕಿತ್ತುಕೊಂಡು ಬೈಕ್ ಸ್ಮಾರ್ಟ್ ಮಾಡಿಕೊಂಡು ಮುಂದು ಸಾಗಲು ಮುಂದಾಗಿದ್ದಾರೆ. ತತ್ ಕ್ಷಣ ಮಾರ್ಕ್ ಬೈಕ್ ಹ್ಯಾಂಡಲ್ ಹಿಡಿದುಕೊಂಡಿದ್ದಾರೆ. ಅವರು ಬೈಕ ಸಮೇತ ಮೂವರು ಕೆಳಗೆ ಬಿದ್ದಿದ್ದಾರೆ, ಹಿಂದೆ ಕುಳಿತವನು ಎದ್ದವನೆ ಕೈಯಲ್ಲಿ ಏನೋ ಹಿಡಿದುಕೊಂಡಿದ್ದು, ಮಾರ್ಕ್ ನ ತಲೆಯ ಹಿಂಬಾಗಕ್ಕೆ ಹೊಡೆದಿದ್ದಾರೆ. ನಂತರ ಅವರ ದವಡೆಗೆ ಹೊಡೆದಿದ್ದಾನೆ. ಇದರಿಂದ ಹಲ್ಲು ಮುರಿದಿದೆ, ಅಷ್ಟರಲ್ಲಿ ಮೂರ್ತಿ ಮಾರ್ಕ್ ಹತ್ತಿರ ಓಡಿ ಬಂದಿದ್ದಾರೆ,. ವಿಜಯ್ ಟಿಕಾರೆ ಎಂಬುವರ ಬಳಿ 1500 ರೂ. ಕಿತ್ತುಕೊಂಡು ಹೋಗಿರುವ ಬಗ್ಗೆ ಟಿಕಾರೆ ಮತ್ತು ಮಾರ್ಕ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.