ಜೀ ಕುಟುಂಬ ಅವಾರ್ಡ್ ಗೆದ್ದ
ಮಲೆನಾಡ ಹುಡುಗ ಸ್ಕಂದ ಆಗುಂಬೆ
– ಕರ್ಣ ಧಾರಾವಾಹಿ ಡೈಲಾಗ್: ಜನ ಮೆಚ್ಚಿದ ಸಂಭಾಷಣೆಕಾರ ಪ್ರಶಸ್ತಿ
ಕರ್ಣ ಧಾರವಾಹಿಯ ಸಂಭಾಷಣೆಗೆ ಮಲೆನಾಡ ಪ್ರತಿಭಾವಂತ ಸಂಭಾಷಣೆಕಾರ ಸ್ಕಂದ ಆಗುಂಬೆ ಅವರಿಗೆ ಪ್ರತಿಷ್ಠಿತ ಜೀ ಕುಟುಂಬ ಅವಾರ್ಡ್( ಜನ ಮೆಚ್ಚಿದ ಸಂಭಾಷಣೆಕಾರ) ಪ್ರಶಸ್ತಿ ಸಂದಿದೆ.
ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಅಸೀಮನೆಯ ನಾಗೇಂದ್ರ ಮತ್ತು ಸುಮಾ ದಂಪತಿಗಳ ಪುತ್ರ ಸ್ಕಂದ ಆಗುಂಬೆ ಈಗ ಟಿವಿ ಲೋಕದಲ್ಲಿ ಪ್ರಸಿದ್ಧ ಹೆಸರು.
ಜೀ ಕನ್ನಡದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಅವರು ಕೆಲಸಮಾಡುತ್ತಿದ್ದಾರೆ. ಈ ಹಿಂದೆ ಸಹಾಯಕ ನಿರ್ಮಾಪಕ – ಫಿಕ್ಷನ್, ಜೀ ಕನ್ನಡ, ಕ್ರಿಯೇಟಿವ್ ರೈಟರ್, ಪಾಕೆಟ್ ಎಫ್‌ಎಂ – ಇಂಡಿಯಾ, ಕಂಟೆಂಟ್ ಎಡಿಟರ್, ಟಿವಿ9 ಕನ್ನಡದಲ್ಲಿ ಕೆಲಸ ಮಾಡಿದ್ದಾರೆ.
ಗೋಪಾಲಸ್ವಾಮಿ ಸಂಸ್ಥೆ ಪಿ.ಯು.ಸಿ. (ವಿಜ್ಞಾನ), ಮಹಾರಾಜಾ ಕಾಲೇಜು, ಮೈಸೂರು ಯುಜಿ (UG) – ಪತ್ರಿಕೋದ್ಯಮ, ಮನಃಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯ, ಎಸ್.ಡಿ.ಎಂ. ಕಾಲೇಜು, ಉಜಿರೆ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (JMC) ಸ್ನಾತಕೋತ್ತರ ಪದವಿ (PG) ಅಧ್ಯಯನ ಮಾಡಿರುವ ಸ್ಕಂದ ಈಗಾಗಲೇ ಭರವಸೆ ಸಂಭಾಷಣೆಕಾರರಾಗಿ ಹೆಸರು ಮಾಡುತ್ತಿದ್ದಾರೆ.
ಕರ್ಣ ಧಾರಾವಾಹಿಯ “ಹೆಣ್ಣುಮಕ್ಕಳು ಮನೆಯಲ್ಲಿ ಅವಮಾನ ಸಹಿಸಿಕೊಳ್ತಾರೆ ಅಂದರೆ ಅವರಿಗೆ ಅದಕ್ಕೆ ತಿರುಗಿ ಕೊಡಕ್ಕೆ ಬರಲ್ಲ ಅಂತ ಅಲ್ಲ, ಸಂಬಂಧ ಮುಖ್ಯವಾಗಿರುತ್ತೆ ಅವರಿಗೆ, ಅದಕ್ಕೇ ಸುಮ್ಮನಿರ್ತಾರೆ. ಅದನ್ನು ಅರ್ಥ ಮಾಡ್ಕೊಳಿ” ಇಂತಹ ನೂರಾರು ಸಂಭಾಷಣೆ ಸ್ಕಂದ ಅವರ ಟ್ಯಾಲೆಂಟ್ ಅಲ್ಲಿ ಹೊರ ಹೊಮ್ಮಿದೆ. ಯುವ ಪ್ರತಿಭೆಗೆ ಪ್ರಶಸ್ತಿಯ ಶುಭಾಶಯಗಳು.
