Categories
ಮಂಗಳೂರು

ಮಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿಗೆ ಮಹಿಳೆ ಬಲಿ!

ಮಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿಗೆ ಮಹಿಳೆ ಬಲಿ!
– ವಾರದಲ್ಲಿ ಎರಡನೇ ಘಟನೆ: ಮಹಿಳೆ ಸಜೀವ ದಹನ

NAMMUR EXPRESS NEWS
ಮಂಗಳೂರು: ನಗರದ ಅತ್ತಾವರದ ಫ್ಲಾಟ್ ಒಂದರಲ್ಲಿ ನಡೆದ ಆಕಸ್ಮಿಕ ಬೆಂಕಿ ಅವಘಡದಿಂದ ಮಹಿಳೆಯ ಸಜೀವ ದಹನ ಆಗಿದೆ ಸಹೈನ್ ಮುಸಾಬ್ (57) ಮೃತಪಟ್ಟ ಮಹಿಳೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಬೆಳ್ಳಂಬೆಳಗ್ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದ್ದು, ಮನೆಯಲ್ಲಿದ್ದ ಇತರರು ಹೊರ ಬಂದಿದ್ದರು. ಆದರೆ ಮುಸಾಬ್ ಶೌಚಾಲಯದೊಳಗಿದ್ದ ಕಾರಣ ಹೊರಬರಲಾಗದೇ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದರು ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.