ತೀರ್ಥಹಳ್ಳಿಯಲ್ಲಿ ಯಶಸ್ವಿ ಕನ್ನಡ ರಾಜ್ಯೋತ್ಸವ!
– ಸಾಧಕ ಮಕ್ಕಳಿಗೆ ಸನ್ಮಾನ: ಮೊಳಗಿದ ಕನ್ನಡ ಜಯಘೋಷ
– ಗಮನ ಸೆಳೆದ ಕನ್ನಡ ಡ್ಯಾನ್ಸ್: ನಗೆ ನಾಟಕ ಝಲಕ್
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀರ್ಥಹಳ್ಳಿ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ರಾಜ್ಯ ಕರವೇ ಸಂಘಟನಾ ಕಾರ್ಯದರ್ಶಿ ಪಟೇಲ್ ವೆಂಕಟೇಶ್ ಹೆಗ್ಡೆ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸುರೇಂದ್ರ ಯಡೂರು, ಎಲ್ಲಾ ಪದಾಧಿಕಾರಿಗಳು, ಸದಸ್ಯರು ಕೊಪ್ಪ ಸರ್ಕಲ್ ನಲ್ಲಿರುವ ಕುವೆಂಪು ಅವರ ಪುತ್ತಳಿಗೆ ಪುಷ್ಪ ನಮನ ಮಾಡಿದರು.
ಗಣ್ಯರ ಸಮಾಗಮ :
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಂಜುನಾಥ್ ಗೌಡ, ಪ್ರಮುಖರಾದ ಆರ್. ಮದನ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗೀತಾ ರಮೇಶ್, ವೆಂಕಟೇಶ್ ಹೆಗ್ಡೆ, ಪ್ರಮುಖರಾದ ಜ್ಯೋತಿ ದಿಲೀಪ್, ವಿಜಯ್ ಬಿಳಿಗಿರಿ, ಪಡುವಳ್ಳಿ ಹರ್ಷಕುಮಾರ್, ಮಲ್ಲಕ್ಕಿ ರಾಘವೇಂದ್ರ, ವಿಕ್ರಮ್ ಶೆಟ್ಟಿ, ಶ್ರೀಕಾಂತ್, ರವಿ, ವಿಜಯ್ ಪದ್ಮನಾಭ ಸೇರಿ ಎಲ್ಲಾ ಸದಸ್ಯರು ಹಾಜರಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಲ್ಲರೂ ಕನ್ನಡದ ಬಗ್ಗೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಬಗ್ಗೆ ಹಿತವಚನ ನುಡಿದರು.
ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ :
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಗಳಿಸಿದ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನಡೆಯಿತು. ಹಾಗೂ ತೀರ್ಥಹಳ್ಳಿಯ ಡ್ಯಾನ್ಸ್ ಪ್ಯಾಲೇಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಕಾರ್ಯಕ್ರಮ ನಂತರ ಶ್ರೀ ದುರ್ಗಾ ಕಲಾತಂಡ ಹಾರಾಡಿ ಬ್ರಹ್ಮಾವರ ಇವರಿಂದ “ಒಂದಲ್ಲ ಒಂದು ಸಮಸ್ಯೆ ” ಎನ್ನುವ ಕುಂದ ಕನ್ನಡದ ಹಾಸ್ಯಮಯ ನಗೆ ನಾಟಕ ನಡೆಯಿತು.