ರಾಷ್ಟ್ರ ಮಟ್ಟದಲ್ಲಿ ತರ್ಜನಿ ಕಮ್ಯುನಿಕೇಶನ್ಸ್ ಸಾಧನೆ
* ಟೆಂಪಲ್ಸ್ ಆಫ್ ಗೋವಾ ಎಂಬ ಕಾಫಿ ಟೇಬಲ್ ಪರಿಕಲ್ಪನೆಯ ಪುಸ್ತಕ ರಚನೆ
• ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಗೋವಾ ಸಿಎಂ ಪುಸ್ತಕ ಲೋಕಾರ್ಪಣೆ
* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಲುಪಿದ ಪುಸ್ತಕ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಜಾಹೀರಾತು, ಮುದ್ರಣ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ದಶಕಗಳ ಸೇವೆ ಮೂಲಕ ಕರಾವಳಿ ಹಾಗೂ ರಾಜ್ಯದ ಹಲವೆಡೆ ತನ್ನ ಸೇವೆ ನೀಡುತ್ತಿರುವ ಮಂಗಳೂರಿನ ತರ್ಜನಿ ಕಮ್ಯುನಿಕೇಶನ್ಸ್ ಇದೀಗ
ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದೆ.
ಗೋವಾದ ವಿಶ್ವ ಕೊಂಕಣಿ ಕೇಂದ್ರವು ಟೆಂಪಲ್ಸ್ ಆಫ್ ಗೋವಾ ಎಂಬ ಕಾಫಿ ಟೇಬಲ್ ಪರಿಕಲ್ಪನೆಯ ಪುಸ್ತಕವನ್ನು ಪ್ರಕಟಿಸಿದ್ದು, ಜಾಹೀರಾತು, ಮುದ್ರಣ ಮತ್ತು ವಿನ್ಯಾಸ ಸೇರಿದಂತೆ ವಿವಿಧ ಬಗೆಯ ಜವಾಬ್ದಾರಿಗಳನ್ನು ಮಂಗಳೂರಿನ ಖ್ಯಾತ ಸಂಸ್ಥೆಯಾದ ತರ್ಜನಿ ಕಮ್ಯುನಿಕೇಶನ್ಸ್ ಗೆ ವಹಿಸಲಾಗಿತ್ತು. ಈ ಪುಸ್ತಕವನ್ನು ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದ್ ಸಾವಂತ್ ಅವರು ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ ಅರ್ಪಿಸಿದರು. ತರ್ಜನಿ ಕಮ್ಯುನಿಕೇಷನ್ಸ್ ಅಧ್ಯಕ್ಷರಾದ ಸಂಜಯ್ ಪ್ರಭು, ಕಾರ್ಯನಿರ್ವಾಹಕ ವ್ಯವಸ್ಥಾಪಕ ಶೇಷಗಿರಿ ಕೆ.ಜಿ ಅವರು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, “ಇಂತಹ ಪುಸ್ತಕವನ್ನು ಲೋಕಾರ್ಪಣೆಗೊಳಿಸುವ ಜವಾಬ್ದಾರಿಯನ್ನು ನಮಗೆ ವಹಿಸಿದ್ದು, ಸಂಸ್ಥೆಗೆ ಸಂದ ಗೌರವದ ಜೊತೆಗೆ ಹೆಮ್ಮೆಯೂ ಕೂಡ ಎನಿಸಿದೆ” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ತರ್ಜನಿ ಕಮ್ಯುನಿಕೇಷನ್ ಸಂಸ್ಥೆಯ ಸಂಪಾದಕರಾದ ಡಾ. ಭಾರತಿ ಶೇವಗೂರು ಅವರು ಕೂಡ ಪುಸ್ತಕ ಪ್ರಕಟಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.
