ನಾಯಿ ಜೀವ ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!
• ಮಾನವೀಯತೆಗಾಗಿ ಪ್ರಾಣಾರ್ಪಣೆ: ಎಲ್ಲೆಡೆ ಸಂತಾಪ
* ನಿನ್ನೆ ಕೂಡ ಕಾರ್ಯ ಮಾಡಿದ್ದರು… ಕಲಾವಿದ ಇನ್ನು ನೆನಪು ಮಾತ್ರ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ನಾಯಿ ಜೀವ ಉಳಿಸಲು ಹೋಗಿ ಯುವಕ ಪ್ರಾಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಮಾನವೀಯತೆಗಾಗಿ ಪ್ರಾಣಾರ್ಪಣೆ ಮಾಡಿದ ಈ ಸಾವಿಗೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ.
ಕಾರಿನಲ್ಲಿ ತನ್ನ ಸ್ನೇಹಿತರಾದ ಪ್ರಜ್ವಲ್ ಮತ್ತು ಪ್ರಸಾದ್ ಎನ್ನುವವರೊಡನೆ ಖ್ಯಾತ ಡಿಜೆ ಮರ್ವಿನ್ ಅವರು ತೆರಳುತ್ತಿದ್ದ ಸಮಯದಲ್ಲಿ ನಾಯಿ ಅಡ್ಡ ಬಂದಿದೆ. ನಾಯಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ತಾನೇ ಸ್ದಳದಲ್ಲಿ ಮೃತಪಟ್ಟ ಧಾರುಣ ಘಟನೆ ಮೂಳೂರು ಎಂಬಲ್ಲಿ ಬೆಳಿಗ್ಗೆ ನಡೆದಿದೆ.
ಪ್ರಸಿದ್ಧ ಡಿಜೆಯಾಗಿ ಹೆಸರು ಮಾಡಿದ್ದರು!
ಉಡುಪಿ ಮತ್ತು ಮಂಗಳೂರಿನ ಪ್ರಸಿದ್ಧ ಡಿಜೆ ಆಗಿರುವ ಮರ್ವಿನ್ ಮೆಂಡೊನ್ಸಾ ಅವರ ನಿರ್ದೇಶನದಲ್ಲಿ ಹಲವಾರು ಕೊಂಕಣಿ ಮ್ಯೂಸಿಕ್ ವೀಡಿಯೋಗಳು ಸಹ ಮೂಡಿಬಂದಿವೆ. ಶುಕ್ರವಾರ ದಿನ ಕೂಡ ಒಂದು ಮ್ಯೂಸಿಕ್ ವೀಡಿಯೋವನ್ನು ಲೋಕಾರ್ಪಣೆಗೊಳಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಪ್ರಜ್ವಲ್ ಮತ್ತು ಪ್ರಸಾದ್ ಅವರು ಗಾಯಗೊಂಡಿದ್ದು, ಅವರನ್ನು ಉಚ್ಚಿಲ ಆ್ಯಂಬುಲೆನ್ಸ್ ನ ಜಲಾಲುದ್ದೀನ್, ಹಮೀದ್, ಕೆ.ಎಂ.ಸಿರಾಜ್ ಮತ್ತು ಅನ್ವರ್ ಕೋಟೇಶ್ವರ ಅವರು ಉಡುಪಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.