ನಿಂತಿದ್ದ ಸ್ಕೂಟರ್ ಸವಾರರಿಗೆ ಇನೋವಾ ಕಾರು ಡಿಕ್ಕಿ!
* ಕೋಮಾ ಸ್ಥಿತಿಗೆ ತಲುಪಿದ ಸ್ಕೂಟರ್ ಸವಾರೆ
NAMMUR EXPRESS NEWS
ಸುರತ್ಕಲ್: ಸುರತ್ಕಲ್ ಸಮೀಪದ ಪಾವಂಗೆ ಬಳಿ ರಸ್ತೆ ಬದಿ ನಿಂತಿದ್ದ ಸ್ಕೂಟರ್ ಸವಾರರಿಗೆ ಇನೋವಾ ಕಾರು ಡಿಕ್ಕಿಯಾಗಿ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕೋಡಿಕಲ್ ಬಳಿಯ ನಿವಾಸಿಗಳಾದ ಗೋಪಾಲಾಚಾರ್ಯ ಹಾಗೂ ಶೃತಿ ಗಾಯಗೊಂಡವರು.
ಮಳೆ ಬಂತು ಎಂದು ಮರೆದಡಿಯಲ್ಲಿ ಸ್ಕೂಟರ್ ನಿಲ್ಲಿಸಿ , ರೈನ್ ಕೋಡ ಹಾಕಲು ಇಂತಿದ್ದರು.
ಇದೇ ಸಂದರ್ಭ ಉಡುಪಿ ಕಡೆಯಿಂದ ಅತಿ ವೇಗದಲ್ಲಿ ಬಂದ ಇನೋವಾ ಕಾರು ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಶೃತಿ ಅವರು ಇನೋವಾ ಕಾರಿನಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದೆ ವೇಳೆ ಅಪಘಾತವನ್ನು ನೋಡಿಕೊಂಡು ಬೈಕ್ ಸವಾರಣೊಬ್ಬ ವೇಗವನ್ನು ಕಡಿಮೆ ಮಾಡಿದ್ದರಿಂದ ಜೀಪ್ ಒಂದು ಡಿಕ್ಕಿಯಾಗಿ ಉರುಳಿ ಬಿದ್ದ ಘಟನೆಯು ಇದೇ ಸಂದರ್ಭದಲ್ಲಿ ನಡೆದಿದೆ ಬೈಕ್ ಸವಾರ ಅಪಾಯದಿಂದ ಪಾರಾಗಿದ್ದಾನೆ.
ಇನೋವಾ ಕಾರು ಚಾಲಕ ಮಧ್ಯ ಸೇವನೆ ಮಾಡಿ ಕಾರು ಚಲಾಯಿಸಿದ್ದರೆ ಎಂಬ ಬಗ್ಗೆ ಇನ್ನಷ್ಟೇ ತನಿಕೆಯಿಂದ ತಿಳಿದು ಬರಬೇಕಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.