ಜೆಇಇ ಅಡ್ವಾನ್ಸ್ : ಎಕ್ಸೆಲ್ ವಿದ್ಯಾರ್ಥಿಗಳ ಅಪೂರ್ವ ಸಾಧನೆ!
– ರಾಷ್ಟ್ರದ ಅತ್ಯಂತ ಕಠಿಣ ಪರೀಕ್ಷೆ ಎಕ್ಸೆಲ್ ವಿದ್ಯಾರ್ಥಿಗಳಿಗೆ ಸಲೀಸು
– ಗಗನ ಕುಸುಮವೆನಿಸಿದ ಐ ಐ ಟಿ ಪ್ರವೇಶಾತಿ ಎಕ್ಸೆಲ್ ನಿಂದ ಸುಲಭ ಸಾಧ್ಯ
– ರಾಷ್ಟ್ರ ಮಟ್ಟದಲ್ಲಿ 45 ನೆಯ ರಾಂಕ್ ಪಡೆದ ವೀರಭದ್ರೇಶ್ ಕಟಗೇರಿ ಅದ್ವಿತೀಯ ಸಾಧಕ
NAMMUR EXPRESS NEWS
ಗುರುವಾಯನಕೆರೆ: ಜಗತ್ತಿನ ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐ ಐ ಟಿ, ಐ ಐ ಐ ಟಿ ಹಾಗೂ ಎನ್ ಐ ಐ ಟಿ ಗಳಿಗೆ ಪ್ರವೇಶ ಕಲ್ಪಿಸುವ ಜೆ ಇ ಇ ಅಡ್ವಾನ್ಸ್ ಎಕ್ಸಾಂ ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.
ಈ ಹಿಂದೆ ನಡೆದ ಜೆ ಇ ಇ ಮೈನ್ಸ್ ಶಿಫ್ಟ್ 1 ಮತ್ತು ಜೆ ಇ ಇ ಮೈನ್ ಶಿಫ್ಟ್ 2 ರಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ಕೊಂಡು ಎಕ್ಸೆಲ್ ನ ಹಲವು ವಿದ್ಯಾರ್ಥಿಗಳು ಅಡ್ವಾನ್ಸ್ ಪರೀಕ್ಷೆ ಬರೆಯಲು ಆಯ್ಕೆಯಾಗಿದ್ದರು. ಜೆ ಇ ಇ ಅಡ್ವಾನ್ಸ್ ಪರೀಕ್ಷೆ ಅತ್ಯಂತ ಪ್ರತಿಭಾವಂತರಿಗೆ ಕೂಡಾ ಗಗನ ಕುಸುಮವಾಗಿರುವ ಸಂದರ್ಭದಲ್ಲಿ ಎಕ್ಸೆಲ್ ನ ವಿದ್ಯಾರ್ಥಿಗಳು , ರಾಷ್ಟ್ರದ ಬಹಳ ಕಠಿಣ ಪರೀಕ್ಷೆಯೆನಿಸಿಕೊಂಡ ಜೆ ಇ ಇ ಅಡ್ವಾನ್ಸ್ ನಲ್ಲಿ ಅತ್ಯುತ್ತಮ ರಾಂಕ್ ಗಳಿಸಿ ಕೊಳ್ಳಲು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅತ್ಯಂತ ಗುಣಮಟ್ಟದ ಕೋಚಿಂಗ್ ಕಾರಣವಾಗಿದೆ.
ವೀರಭದ್ರೇಶ್ ಕಟಗೇರಿ ರಾಷ್ಟ್ರ ಮಟ್ಟದಲ್ಲಿ- 45 ನೆಯ ರಾಂಕ್, ಪ್ರಥಮ್ ಎಸ್- 247 ನೆಯ ರಾಂಕ್, ರೋಹಿತ್ ಮಂಜ- 1125, ಅನುಜ್ ಕೆ ಎಸ್- 3421 ಮೊಹಮ್ಮದ್ ರುವೈದ್ ರುಕ್ಸಾರ್ – 12308 ರಾಂಕ್ ಗಳಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಸೀಮಿತ ಸೀಟ್ ಗಳಿರುವ ಐ ಐ ಟಿಗಳಿಗೆ ತಮ್ಮ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿರುವುದಕ್ಕೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಹರ್ಷ ವ್ಯಕ್ತ ಪಡಿಸಿದ್ದಾರೆ.
